ಬೆಂಗಳೂರು: ರಾಜ್ಯದಲ್ಲಿ ‘108 ಆ್ಯಂಬುಲೆನ್ಸ್’ ಸೇವೆ ಪುನಾರಂಭವಾಗಿದೆ. ಮಧ್ಯಾಹ್ನ 2 ಗಂಟೆಯಿಂದ ಬ್ಯಾಕಪ್ ಸರ್ವರ್ ಕೆಲಸ ಮಾಡುತ್ತಿದೆ ಎಂದು ನಗರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದರು. ಆ್ಯಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗಿದ್ದಕ್ಕೆ ಕ್ಷಮೆಯಾಚಿಸುವೆ. ಐಟಿ ಹಾರ್ಡ್ವೇರ್ ವೈರಸ್ನಿಂದ ತಾಂತ್ರಿಕ ಸಮಸ್ಯೆಯಾಗಿದೆ. 2008ರಲ್ಲಿ ಅಳವಡಿಸಿದ್ದ ಸಿಸ್ಟಮ್ನಲ್ಲಿ ತಾಂತ್ರಿಕ ಸಮಸ್ಯೆಯಾಗಿದೆ. ಮದರ್ ಬೋರ್ಡ್ ನಾಳೆ ಸರಿಯಾಗಲಿದೆ. ಇನ್ನೊಂದು ಮದರ್ ಬೋರ್ಡ್ ಖರೀದಿಸಿ ಅಳವಡಿಸುತ್ತೇವೆ. ಹೊಸ ಮದರ್ ಬೋರ್ಡ್ ಅಳವಡಿಸಿದರೆ ಸಮಸ್ಯೆ ಉಂಟಾಗಲ್ಲ ಎಂದು ಹೇಳಿದರು.ಕಳೆದ ಕೆಲವು ಗಂಟೆಗಳಿಂದ ಐಟಿ ಹಾರ್ವರ್ಡ್ ಸಮಸ್ಯೆ ಆಗಿತ್ತು. ಕಾಲ್ ಥ್ರೂ ಆಗುತ್ತಿರಲಿಲ್ಲ. ಇಂಜಿನಿಯರ್ ಟೀಮ್ ಕರೆಸಿ ಈಗ ಸಮಸ್ಯೆ ಬಗೆ ಹರಿಸುತ್ತಿದ್ದೇವೆ. 2008ರಲ್ಲಿ ಇದ್ದಂತಹ ಮದರ್ ಬೋರ್ಡ್ ಇದು. 15 ವರ್ಷದ ಹಳೆ ಸಿಸ್ಟಮ್ ಹೀಗಾಗಿ ಆ ಸಮಸ್ಯೆ ಆಗಿದೆ. ಮದರ್ ಬೋರ್ಡ್ ಸಂಪೂರ್ಣ ಸಮಸ್ಯೆ ಇತ್ತು. ಹೀಗಾಗಿ ಇಡೀ ರಾಜ್ಯದ ಎಲ್ಲಾ ಆರೊಗ್ಯ ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಸಭೆ ಮಾಡಲಾಗಿದೆ ಎಂದು ಹೇಳಿದರು.
ಬ್ಯಾಕ್ ಅಪ್ ಸರ್ವರ್ ಕೆಲಸ ಮಾಡುತ್ತಿದೆ. ಎಲ್ಲಾ ಜಿಲ್ಲಾಡಳಿತ ಜೊತೆಗೆ ಮಾತನಾಡಿದ್ದೇವೆ. ಎಲ್ಲೂ ಸಮಸ್ಯೆ ಇಲ್ಲ ಅನ್ನುತ್ತಿದ್ದಾರೆ. ನಾಲ್ಕೈದು ಕಾಲ್ ಸೆಂಟರ್ ಮಾಡಲು ಹೇಳಿದ್ದೇವೆ. ಭವಿಷ್ಯ ಮದರ್ ಬೋರ್ಡ್ ನಾಳೆ ಸರಿ ಹೋಗುತ್ತೆ. ಇನ್ನೊಂದು ಮದರ್ ಬೋರ್ಡ್ ಖರೀದಿ ಮಾಡಬೇಕಾಗಿದೆ. ಈಗಾಗಲೇ ಸಿಎಂ ಜೊತೆಗೆ ಮಾತನಾಡಿದ್ದೇನೆ. ದೇವರ ದಯೆ ಇಂದ ಸಮಸ್ಯೆ ಬಗೆಹರಿದಿದೆ ಎಂದು ಹೇಳಿದರು.
ಆ್ಯಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗಿದ್ದಕ್ಕೆ ಕ್ಷಮೆಯಾಚಿಸುವೆ
ಜನರಿಗೆ ಸೇವೆಯಲ್ಲಿ ಕುಂಠಿತ ಆಗಿತ್ತು ಹಾಗಾಗಿ ಜನರಲ್ಲಿ ಕ್ಷಮೆ ಕೇಳುತ್ತೇನೆ. ಎಲ್ಲಾ ತಾಲೂಕಿನ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ತುಮಕೂರಿನ ಘಟನೆ ಖಚಿತವಾಗಿ ಮಾಹಿತಿ ಬಂದಿಲ್ಲ. ನಮ್ಮದೇ ಬ್ಯಾಕ್ ಅಪ್ ಸರ್ವರ್ ಕೆಲಸ ಮಾಡುತ್ತಿದೆ.
ಈ ಒಂದು ವಾರದಿಂದ ಮದರ್ ಬೋರ್ಡ್ ಎಚ್ಚರಿಕೆಯಿಂದ ನೋಡಿಕೊಳ್ಳುತ್ತೇವೆ. ಆಂಬ್ಯುಲೆನ್ಸ್ ಸೇವೆ ಸಮರ್ಪಕವಾಗಿ ನೀಡುತ್ತೇವೆ. ಪ್ರತಿದಿನ 7 ರಿಂದ 8 ಸಾವಿರ ಕಾಲ್ ಬರುತಿತ್ತು. ಎರಡು ಮೂರು ನಿಮಿಷದಲ್ಲಿ ಕಾಲ್ ರಿಸಿವ್ ಮಾಡುತ್ತಿದ್ದೇವು.
ಮದರ್ ಬೋರ್ಡ್ ಸಮಸ್ಯೆಯಿಂದ 6 ರಿಂದ 7 ನಿಮಿಷ ಸಮಸ್ಯೆ ತೆಗೆದುಕೊಳ್ಳುತ್ತಿತ್ತು. ನಾಳೆ ವರ್ಜಿನಲ್ ಮದರ್ ಬೋರ್ಡ್ ಸರಿಹೋಗುತ್ತೆ. ಹಾಗೆಯೇ ಇನ್ನೊಂದು ಮದರ್ ಬೋರ್ಡ್ ತೆಗೆದುಕೊಳ್ಳುತ್ತೇವೆ.
ಈಗ ಹೊಸದಾಗಿ ಟೆಂಡರ್ ಕರೆದು ಉತ್ಕೃಷ್ಟ ಸೇವೆ ಒದಗಿಸುವ ಸಂಸ್ಥೆಗೆ ಸೇವೆ ನಿರ್ವಹಣೆ ನೀಡುತ್ತೇವೆ. ಜಿವಿಕೆಯವರು ಕೋರ್ಟ್ ಮೊರೆಹೋಗಿದ್ದರು. ಹೀಗಾಗಿ ಕಾನೂನಿನ ತೊಡಕುಗಳಿಂದ ಜಿವಿಕೆಯನ್ನೇ ಮುಂದುವರಿಸಬೇಕಾಗಿತ್ತು. ಈಗ ಎಲ್ಲವೂ ಕ್ಲಿಯರ್ ಆಗಿದ್ದು, ಹೊಸದಾಗಿ ಟೆಂಡರ್ ಕರೆದು ಒಳ್ಳೆಯ ಸಂಸ್ಥೆಗೆ ಸೇವೆಯ ನಿರ್ವಹಣೆ ನೀಡುತ್ತೇವೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಈಗ ರಾಜ್ಯದ ಮೂಲೆ ಮೂಲೆಗಳಿಂದ ಕರೆಗಳು ಬರುತ್ತಿವೆ:
ಟಿವಿ9 ಗೆ ಹನುಮಂತಪ್ಪ ಆರ್ ಜಿ. ಜಿವಿಕೆ ರಾಜ್ಯ ಮುಖ್ಯಸ್ಥ ಹೇಳಿಕೆ ನೀಡಿದ್ದು, ಸದ್ಯ ಎಲ್ಲಾ ಸಮಸ್ಯೆ ಬಗಹರಿದಿದೆ. ಈಗ ರಾಜ್ಯದ ಮೂಲೆ ಮೂಲೆಗಳಿಂದ ಕರೆಗಳು ಬರುತ್ತಿವೆ. ರೋಗಿಗಳ ಜಾಗಕ್ಕೆ ಆ್ಯಂಬುಲೆನ್ಸ್ ಗಳು ತಲುಪುತ್ತಿವೆ. ಮೈನ್ ಸರ್ವರ್ನಲ್ಲಿ ಪ್ರಾಬ್ಲಮ್ ಆಗಿತ್ತು. ಹಾಗಾಗಿ ನಾವು ಈಗ ಬ್ಯಾಕ್ ಅಪ್ ಸರ್ವರ್ನಿಂದ ಕೆಲಸ ಮಾಡುತ್ತಿದ್ದೇವೆ. ನಾಳೆ ಹೆಚ್ಪಿ ಕಂಪನಿಯಿಂದ ಟೆಕ್ನಿಕಲ್ ಎಕ್ಸ್ಪರ್ಟ್ ಗಳು ಬರುತ್ತಿದ್ದಾರೆ. ನಂತರ ಸಾಫ್ಟ್‌ವೇರ್ ಚೆಕ್ ಮಾಡಿ ಸಮಸ್ಯೆ ಬಗಹರಿಸಲಿದ್ದಾರೆ. ಈಗ ಯಾವುದೇ ಸಮಸ್ಯೆ ಇಲ್ಲ ಎಂದಿನಂತೆ ಕೆಲಸ ಮಾಡುತ್ತಿದ್ದಾರೆ ನಮ್ಮ 108 ಕಾಲ್ ಸೆಂಟರ್ ಸಿಬ್ಬಂದಿಗಳು ಎಂದು ಹೇಳಿದರು.
ಅವರಿಗೆ ಏನು ಗೊತ್ತು ಟೆಕ್ನಿಕಲ್ ಎರರ್ ಬಗ್ಗೆ
ಬಿಜೆಪಿ ಭ್ರಷ್ಟ ಸರ್ಕಾರದಿಂದ ಸೇವೆಯಲ್ಲಿ ವ್ಯತ್ಯಯವಾಗಿದೆ ಅಂತಾ ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಚಿವ ಸುಧಾಕರ್ ತಿರುಗೇಟು ನೀಡಿದರು. ಕಾಮಾಲೆ ಕಣ್ಣಿನಿಂದ ನೋಡೋದನ್ನು ಬಿಡಬೇಕು. ಅವರು ನಾನು ಲಾಯರ್, ನೀನು ಇಂಜನೀಯರ್ ನಿನಗೆ ಗೊತ್ತಿಲ್ಲ ಅಂತಾರೆ. ಅವರಿಗೆ ಏನು ಗೊತ್ತು ಟೆಕ್ನಿಕಲ್ ಎರರ್ ಬಗ್ಗೆ. ಟೆಕ್ನಿಕಲ್ ಬಗ್ಗೆ ಗೊತ್ತಿಲ್ಲದೇ ಈ ರೀತಿ ಹೇಳುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:27 pm, Sun, 25 September 22