President Medal: ಕರ್ನಾಟಕದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 14, 2022 | 12:14 PM

ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ 18 ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಿಸಲಾಗಿದೆ.

President Medal: ಕರ್ನಾಟಕದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
ರಾಷ್ಟ್ರಪತಿ ಪದಕದ ಮುಂಭಾಗ ಮತ್ತು ಹಿಂಭಾಗ
Follow us on

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ 18 ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಿಸಲಾಗಿದೆ. ನಂಜಪ್ಪ ಶ್ರೀನಿವಾಸ್ (ಎಸ್​ಪಿ, ಪಿಟಿಎಸ್​​ ಕಡೂರು), ಪ್ರತಾಪ್ ಸಿಂಗ್ ತುಕಾರಾಮ್ (ಡಿವೈಎಸ್​​ಪಿ, ಐಎಸ್​​​ಡಿ), ನಂಬೂರ ಶ್ರೀನಿವಾಸ್ ರೆಡ್ಡಿ (ಡಿವೈಎಸ್​ಪಿ, ಸಿಐಡಿ ಅರಣ್ಯ ಘಟಕ), ನರಸಿಂಹಮೂರ್ತಿ ಪಿಳ್ಳಮುನಿಯಪ್ಪ (ಡಿವೈಎಸ್​​ಪಿ, ಸಿಐಡಿ), ಆರ್.ಪ್ರಕಾಶ್ (ಡಿವೈಎಸ್​ಪಿ, ಭ್ರಷ್ಟಾಚಾರ ನಿಗ್ರಹ ದಳ), ಟಿ.ಎಂ.ಶಿವಕುಮಾರ್ (ಎಸಿಪಿ, ಸುಬ್ರಹ್ಮಣ್ಯಪುರ, ಉಪವಿಭಾಗ), ಜಾಕೀರ್ ಹುಸೇನ್ (ಎಸಿಪಿ, ಕಲಬುರಗಿ ಉಪವಿಭಾಗ), ರಾಘವೇಂದ್ರ ರಾವ್ (ಎಸಿಪಿ, ಬೆರಳಚ್ಚು ವಿಭಾಗ, ಬೆಂಗಳೂರು), ರಾಜು ಚಿಕ್ಕಹನುಮೇಗೌಡ (ಪಿಐ, ವಿದ್ಯಾರಣ್ಯಪುರ ಠಾಣೆ, ಮೈಸೂರು) ಅವರಿಗೆ ರಾಷ್ಟ್ರಪತಿ ಪದಕದ ಗೌರವ ಸಿಕ್ಕಿದೆ.

ಡಿ.ಬಿ.ಪಾಟೀಲ್ (ಸರ್ಕಲ್ ಇನ್ಸ್‌ಪೆಕ್ಟರ್, ವಿಜಯಪುರ ರೈಲ್ವೆ), ಮೊಹಮ್ಮದ್ ಅಲಿ (ಇನ್​ಸ್ಪೆಕ್ಟರ್, ಭ್ರಷ್ಟಾಚಾರ ನಿಗ್ರಹ ದಳ), ರವಿ ಬೆಳವಾಡಿ (ಇನ್​ಸ್ಪೆಕ್ಟರ್, ಶೃಂಗೇರಿ ಪೊಲೀಸ್ ಠಾಣೆ), ಮುಪೀದ್ ಖಾನ್ (ಸ್ಪೆಷಲ್ ಆರ್​​ಪಿಐ, ಕೆಎಸ್ಆರ್​​ಪಿ), ಮುರಳಿ ರಾಮಕೃಷ್ಣಪ್ಪ, (ಸ್ಪೆಷಲ್ ಎಆರ್​ಎಸ್​ಐ, ಕೆಎಸ್ಆರ್​ಪಿ), ಮಹದೇವಯ್ಯ (ಎಆರ್​​ಎಸ್ಐ, ಕೆಎಸ್ಆರ್​​ಪಿ), ಡಿ.ಬಿ.ಶಿಂಧೆ (ಎಎಸ್ಐ, ಬೆಳಗಾವಿ ಸ್ಪೆಷಲ್ ಬ್ರಾಂಚ್), ರಂಜಿತ್ ಶೆಟ್ಟಿ (ಎಎಸ್ಐ, ಕೆಂಪೇಗೌಡನಗರ ಪೊಲೀಸ್ ಠಾಣೆ), ಬಿ.ಬಸವರಾಜು (ಸ್ಪೆಷಲ್ ಎಆರ್​​ಎಸ್​ಐ, ರಾಜ್ಯ ಗುಪ್ತದಳ) ಅವರಿಗೆ ರಾಷ್ಟಪತಿ ಪದಕವನ್ನು ಘೋಷಿಸಲಾಗಿದೆ.