ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election) ಕಾವು ಜೋರಾಗಿದ್ದು, ನಾಳೆ ಮತದಾನ ನಡೆಯಲಿದೆ. ಈ ಹಿನ್ನಲೆ ರಾಜ್ಯಾದ್ಯಂತ ಬೀಗಿ ಬಂದೋಬಸ್ತ್ ಮಾಡಲಾಗಿದ್ದು, ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಈ ಮಧ್ಯೆ ಬೆಂಗಳೂರಿನಲ್ಲಿ ಸಿಸಿಬಿ(CCB)ಯ ಮಾದಕ ದ್ರವ್ಯ ನಿಗ್ರಹದಳದಿಂದ ರಾಜ್ಯ, ಅಂತಾರಾಜ್ಯ, ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ಸ್ ಸೇರಿ 19 ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ನೈಜೀರಿಯಾದ ಇಬ್ಬರು, ಕೇರಳದ 12 ಜನ, ಪಶ್ಚಿಮ ಬಂಗಾಳದ ಓರ್ವ ಹಾಗೂ ಬೆಂಗಳೂರಿನ ಇಬ್ಬರು ಸೇರಿ ಒಟ್ಟು 19 ಅರೋಪಿಗಳನ್ನ ಅರೆಸ್ಟ್ ಮಾಡಲಾಗಿದ್ದು, ಬಂಧಿತರಿಂದ 7 ಕೋಟಿ 6 ಲಕ್ಷ ರೂ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಚುನಾವಣೆ ಹಿನ್ನೆಲೆ ಸ್ಲಂಗಳಲ್ಲಿ ಡ್ರಗ್ಸ್ ಬಳಕೆ ಆಗುವ ಬಗ್ಗೆ ಮಾಹಿತಿ ಬಂದಿದ್ದು, ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಅಶೋಕನಗರ, ಕೆ.ಆರ್.ಪುರ, ಆರ್.ಟಿ.ನಗರ, ವಿಲ್ಸನ್ಗಾರ್ಡನ್, ಬಾಣಸವಾಡಿ, ಹೆಣ್ಣೂರು, ಯಲಹಂಕ, ಪುಲಿಕೇಶಿನಗರ, ಸಿದ್ದಾಪುರ ಸೇರಿ 10 ಕಡೆ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ವಶಕ್ಕೆ ಪಡೆದ ಎಂಡಿಎಂಎ, ಹಾಶ್ ಆಯಿಲ್, ಗಾಂಜಾ ಸೇರಿ ಸಿಂಥಟಿಕ್ ಡ್ರಗ್ಸ್ ಹಾಗೂ ಕೇಸ್ ಬಗ್ಗೆ ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಅವರು ಚುನಾವಣೆ ಆಯೋಗಕ್ಕೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಚಂದನವನದಲ್ಲಿ ಡ್ರಗ್ಸ್ ಬಿರುಗಾಳಿ ಮಧ್ಯೆ 3 ಫಾರಿನ್ Drug ಪೆಡ್ಲರ್ಸ್ ಅರೆಸ್ಟ್
ಬೆಂಗಳೂರಿನಲ್ಲಿ ನಟೋರಿಯಸ್ ವಿದೇಶಿ ಫೆಡ್ಲರ್ಗಳ ಬಂಧನ; 7 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ಬೆಂಗಳೂರು: ಇನ್ನು ಕಳೆದ ತಿಂಗಳಷ್ಟೇ ನಟೋರಿಯಸ್ ವಿದೇಶಿ ಡ್ರಗ್ ಫೆಡ್ಲರ್ಗಳನ್ನ ವಿವಿಪುರಂ ಪೊಲೀಸರು ಬಂಧಿಸಿದ್ದರು. ನೈಜೀರಿಯಾ ಮೂಲದ ಲಾರೆನ್ಸ್ ಹಾಗೂ ಚುಕ್ವೂನೇಜಿಮ್ ಬಂಧಿತ ಡ್ರಗ್ ಫೆಡ್ಲರ್ಗಳು. ಇನ್ನು ಈ ಬಂಧಿತರಿಂದ ಸುಮಾರು 7 ಕೋಟಿ ಮೌಲ್ಯದ ಡ್ರಗ್ಸ್ನ್ನು ಸೀಜ್ ಮಾಡಲಾಗಿತ್ತು. 1.85 ಕೆ.ಜಿ ಬಿಳಿ ಮೀಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ್ 1.15kg ಕಂದು ಮೀಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ್ 310 ಗ್ರಾಂ ಕೊಕೇನ್ ಅನ್ನು ಜಫ್ತಿ ಮಾಡಲಾಗಿದ್ದು, ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನು ಈ ವಿದೇಶಿ ಡ್ರಗ್ ಫೆಡ್ಲರ್ಗಳು ಸಾಫ್ಟ್‌ವೇರ್ ಇಂಜನಿಯರ್, ದೊಡ್ಡ ದೊಡ್ಡ ಉದ್ಯಮಿಗಳನ್ನ ಟಾರ್ಗೆಟ್ ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ನಗರದಲ್ಲಿ ಸುಮಾರು ಐದು ವರ್ಷಗಳಿಂದ ಮಾರಾಟ ಮಾಡುತ್ತಿದ್ದ ಫೆಡ್ಲರ್ಸ್ಗಳು ಇದುವರೆಗೂ ನಗರದಲ್ಲಿ ಕೋಟ್ಯಾಂತರ ರೂಪಾಯಿ ಡ್ರಗ್ಸ್ ಮಾರಾಟ ಮಾಡಿದ್ದರು. ಇನ್ನು ಇದೇ ಮೊದಲ ಬಾರಿಗೆ ಕಂದು ಮೀಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ್ನ್ನು ಪೊಲೀಸರು ಸೀಜ್ ಮಾಡಿದ್ದರು.
ಸದ್ಯ ಇಬ್ಬರು ಫೆಡ್ಲರ್ಗಳ ಮೊಬೈಲ್ನ್ನು ವಶಕ್ಕೆ ಪಡೆದು, ಮಾಹಿತಿ ಕಲೆಹಾಕುತ್ತಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ