ಬೆಂಗಳೂರಿನಲ್ಲಿ 7 ಕೋಟಿ 80 ಲಕ್ಷ ಮೌಲ್ಯದ ಡ್ರಗ್ಸ್​​ ಜಪ್ತಿ, ಮಹಿಳೆಯರು ಸೇರಿ ಓರ್ವ ವಿದೇಶಿ ಪ್ರಜೆ ಅರೆಸ್ಟ್

ಸಿಸಿಬಿ ಪೊಲೀಸರು 1 ಕೆ.ಜಿ 4 ಗ್ರಾಂ MDMA, 8 ಕೆ.ಜಿ ಹ್ಯಾಶಿಸ್ ಆಯಿಲ್, 10 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ. ನಾಲ್ವರು ಮಹಿಳೆಯರು ಸೇರಿ ಓರ್ವ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ.

ಬೆಂಗಳೂರಿನಲ್ಲಿ 7 ಕೋಟಿ 80 ಲಕ್ಷ ಮೌಲ್ಯದ ಡ್ರಗ್ಸ್​​ ಜಪ್ತಿ, ಮಹಿಳೆಯರು ಸೇರಿ ಓರ್ವ ವಿದೇಶಿ ಪ್ರಜೆ ಅರೆಸ್ಟ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Sep 27, 2022 | 12:50 PM

ಬೆಂಗಳೂರು: ಬೆಂಗಳೂರಿನಲ್ಲಿ 7 ಕೋಟಿ 80 ಲಕ್ಷ ಮೌಲ್ಯದ ಡ್ರಗ್ಸ್​​ ಜಪ್ತಿ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿ ನಾಲ್ವರು ಮಹಿಳೆಯರು ಸೇರಿ ಓರ್ವ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ. ಸಿಸಿಬಿ ಪೊಲೀಸರು 1 ಕೆ.ಜಿ 4 ಗ್ರಾಂ MDMA, 8 ಕೆ.ಜಿ ಹ್ಯಾಶಿಸ್ ಆಯಿಲ್, 10 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ. ವಿವೇಕನಗರ ಪೊಲೀಸರು ಜೂನ್​ 24ರಂದು ಡಿಜೆಯೊಬ್ಬನನ್ನು ಬಂಧಿಸಿದ್ದರು. ಬಳಿಕ ಡ್ರಗ್ಸ್​​ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಆಂಧ್ರದ ಚಿಂತಪಲ್ಲಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದು ಪೆಡ್ಲರ್ಸ್​​ಗೆ ಆರೋಪಿಗಳು ಗಾಂಜಾ ನೀಡ್ತಿದ್ದರು. ಡ್ರಗ್ಸ್​ ನೀಡಿ ನಾಲ್ವರು ಮಹಿಳೆಯರು ವಾಪಾಸಾಗುತ್ತಿದ್ದರು. ಈ ವೇಳೆ ಸಿಸಿಬಿ ಪೊಲೀಸರು ನಾಲ್ವರು ಮಹಿಳೆಯರು ಸೇರಿ ಓರ್ವ ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ.

ಕಿಡ್ನ್ಯಾಪ್ ಮಾಡಿ ಹಣ ಪಡೆದ ಗ್ಯಾಂಗ್ ಅರೆಸ್ಟ್

ಬೆಂಗಳೂರು: ಸಂಪಿಗೇಹಳ್ಳಿಯಲ್ಲಿ ಉದ್ಯಮಿ ಪುತ್ರನನ್ನು ಅಪಹರಿಸಿ ಹಣ ಪಡೆದಿದ್ದ ಗ್ಯಾಂಗ್ ಅರೆಸ್ಟ್ ಮಾಡಲಾಗಿದೆ. ಸೆ.2ರಂದು ಬೆಳಗಿನ ಜಾವ ಉದ್ಯಮಿ ಮನೆಗೆ ನುಗ್ಗಿ 14 ವರ್ಷದ ಬಾಲಕನನ್ನು ಸುನಿಲ್ ಕುಮಾರ್ ಮತ್ತು ನಾಗೇಶ್ ಎಂಬುವವರು ಕಿಡ್ನ್ಯಾಪ್​ ಮಾಡಿ ಉದ್ಯಮಿಯ ಕಾರನ್ನೇ ಬಳಸಿ ಮಗು ಸಮೇತ ಎಸ್ಕೇಪ್ ಆಗಿದ್ದರು. ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪಿದ ತಂದೆ ಅಪಹರಣಕಾರರಿಗೆ ₹15 ಲಕ್ಷ ನೀಡಿ ಸ್ಥಳದಲ್ಲೇ ಕಾರು ನಿಲ್ಲಿಸಿ ಮಗುವನ್ನು ಮನೆಗೆ ಕರೆ ತಂದಿದ್ದರು. ಬಳಿಕ ಟೆಕ್ನಿಕಲ್ ಮಾಹಿತಿ ಆಧರಿಸಿ ಪೊಲೀಸರು ಕಾರು ಪತ್ತೆ ಹಚ್ಚಿ ಖದೀಮರನ್ನು ಬಂಧಿಸಿದ್ದಾರೆ. ಬಂಧಿತರಿಂದ 9.69 ಲಕ್ಷ ನಗದು, ಕೆಟಿಎಂ ಬೈಕ್, ಕ್ಯಾಮರಾ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಈ ಗ್ರಾಮದಲ್ಲಿ ಪ್ರತಿದಿನ ಪ್ರತಿಯೊಬ್ಬರು ಒಂದೂವರೆ ಗಂಟೆ ಮೊಬೈಲ್ ಆಫ್ ಮಾಡ್ಬೇಕು, ಏನಿದು ಲಾಜಿಕ್..?

ಎಂಟು ತಿಂಗಳ ಹಿಂದೆ ಉದ್ಯಮಿ ಮನೆಯ ಕೆಲಸಕ್ಕೆ ಬಂದಿದ್ದ ಆರೋಪಿ, ಈ ವೇಳೆ ಮನೆಯ ಶ್ರೀಮಂತಿಕೆ ಕಂಡು ಕಿಡ್ನ್ಯಾಪ್ ಮಾಡಲು ಹೊಂಚು ಹಾಕಿದ್ದ. ಗೆಳೆಯನೊಂದಿಗೆ ಕೂಡಿ ಕಿಡ್ನಾಪ್ ಪ್ಲ್ಯಾನ್ ಮಾಡಿದ್ದ. ಮನೆ ಬಳಿ ಬಂದು ಹಲವು ದಿನ ವಾಚ್ ಮಾಡಿ ನಂತರ ಕೃತ್ಯ ಎಸಗಿದ್ದಾನೆ. ಬಿಕಾಂ ವ್ಯಾಸಂಗ ಮಾಡುತ್ತಿರುವ ಸುನೀಲ್ ಕಿಡ್ನಾಪ್ ನಿಂದ ಬಂದ ಹಣದಲ್ಲಿ 50 ಸಾವಿರ ಕಾಲೇಜು ಫೀಸ್ ಪೇ ಮಾಡಿದ್ದ. ಉಳಿದ ಹಣದಲ್ಲಿ ಶೋಕಿಗೆ ಬೈಕ್, ಕ್ಯಾಮರ ಖರೀದಿಸಿದ್ದ. ಕಿಡ್ನಾಪ್ ನಡೆದ 20 ದಿನದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ