ಬೆಂಗಳೂರು, ಮಾರ್ಚ್.27: ಪಾರಿವಾಳ (Pigeon) ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು. ಪ್ರೇಮಿಗಳಿಗೆ ಲವ್ ಬರ್ಡ್ಸ್, ಯುವಕರಿಗೆ ರೇಸಿಂಗ್ ಬರ್ಡ್ಸ್. ಇನ್ನು ವಯಸ್ಸಾದವರಿಗೆ ದೋಷ ನಿವಾರಕ. ಹೀಗೆ ನಾನಾ ಕಾರಣಗಳಿಂದ ಪಾರಿವಾಳಗಳು ಜನರಲ್ಲಿ ಬೆರೆತು ಹೋಗಿವೆ. ಸದ್ಯ ಗುರ್ ಗುರ್ ಸೌಂಡ್ ಮಾಡ್ಕೊಂಡು, ಕಿಟಕಿಯಲ್ಲಿ, ರೋಡಲ್ಲಿ, ಮರದಲ್ಲಿ, ಪಾರ್ಕ್, ಟೇರಸ್ನಲ್ಲಿ ಹಾಯಾಗಿದ್ದ ಪಾರಿವಾಳಗಳಿಗೆ ಪಾಲಿಕೆ (BBMP) ದಂಡಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ಪಾರಿವಾಳಗಳಿಗೆ ಆಹಾರ ಹಾಕಿದರೆ ರೂ 200 ದಂಡ ಹಾಕಲಾಗುತ್ತೆ ಎಂದು ಬೋರ್ಡ್ ಹಾಕಲಾಗಿದೆ. ಈ ಬೋರ್ಡ್ ಕಂಡ ಪಕ್ಷಿ ಪ್ರಿಯರು ಗರಂ ಆಗಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಪಾರಿವಾಳಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಎಲ್ಲಿಲ್ಲಿ ಪಾರಿವಾಳಗಳು ಹೆಚ್ಚಾಗಿ ಕಂಡುಬರುತ್ತೋ ಅಲ್ಲಿ ಊಟ ಹಾಕುವವರ ಸಂಖ್ಯೆಯು ಜಾಸ್ತಿಯಾಗಿತ್ತು. ಆದರೆ ಇನ್ಮೆಲೆ ಪಾರಿವಾಳಗಳಿಗೆ ಊಟ ಹಾಕಿದ್ರೆ 200 ದಂಡಹಾಕುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹೇಳ್ತಿದ್ದಾರೆ. ಹೀಗಾಗಿ ಪಾರಿವಾಳಗಳ ಹಾಟ್ ಸ್ಪಾಟ್ಗಳಾದ ರೇಸ್ ಕೋರ್ಸ್ ರೋಡ್, ಕಬ್ಬನ್ ಪಾರ್ಕ್, ಸ್ಯಾಂಕಿ ಟ್ಯಾಂಕಿ ರಸ್ತೆಗಳಲ್ಲಿ ಹಾಕಲಾಗಿದೆ. ಇನ್ನು ಈ 200 ರೂ ದಂಡ ಹಾಕೋದಿಕ್ಕೆ ಕಾರಣ ಸಧ್ಯ ಪಾರಿವಾಳಗಳ ಸಂಖ್ಯೆ ಹೆಚ್ಚಾಗಿರುವುದು.
ಪಾರಿವಾಳಗಳ ರೆಕ್ಕೆಗಳಿಂದ ಅಸ್ತಮ ಕೇಸ್ಗಳು ಹೆಚ್ಚಾಗ್ತಿವೆ. ಈ ಬೇಸಿಗೆಯ ಸಮಯದಲ್ಲಿ ಪಾರಿವಾಳಗಳು ಹೆಚ್ಚಾದ್ರೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಅಲ್ಲದೇ ರೇಸ್ ಕೋರ್ಸ್ ಸರ್ಕಲ್ ನಲ್ಲಿ ಅಭಿವೃದ್ಧಿ ಕೆಲಸ ಶುರು ಆಗಿದೆ. ರೇಸ್ ಕೋರ್ಸ್ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪರಿವಾಳಗಳಿವೆ. ದಿನನಿತ್ಯ ಇಲ್ಲಿಗೆ ಪಕ್ಷಿ ಪ್ರಿಯರು ಬಂದು ಅವುಗಳಿಗೆ ನೀರು, ಆಹಾರ ನೀಡ್ತಾರೆ. ಇದ್ರಿಂದ ರೇಸ್ ಕೋರ್ಸ್ ರಸ್ತೆ ಸರ್ಕಲ್ ಸಂಪೂರ್ಣವಾಗಿ ಪಾರಿವಾಳ ಪಿಕ್ಕೆಯಿಂದ ಹಾಳಾಗ್ತಿದೆ. ಇದನ್ನ ತಪ್ಪಿಸಲು ಪಾಲಿಕೆ ಈ ರೀತಿಯಾಗಿ ದಂಡ ಪ್ರಯೋಗಕ್ಕೆ ಮುಂದಾಗಿದೆ. ಮತ್ತೊಂದೆಡೆ ವೈಧ್ಯರು ಪಾರಿವಾಳಗಳಿಂದ ಕೊಂಚ ದೂರ ಇರಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Pigeon: ಗೂಢಚಾರಿಕೆ ಆರೋಪದಡಿ ಪೊಲೀಸ್ ವಶದಲ್ಲಿದ್ದ ಪಾರಿವಾಳಕ್ಕೆ ಕಡೆಗೂ ಬಿಡುಗಡೆ
ಕಂಡ ಕಂಡಲ್ಲಿ ಪಾರಿವಾಳಗಳಿಗೆ ಆಹಾರ ಹಾಕೋದು ಮಾನವೀಯ ಉತ್ತಮಗುಣ. ಇದು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವೃದ್ಧ ರಿಗೆ ಉಸಿರಾಟ ಸಮ್ಯಸೆ ಇರೋರಿಗೆ ಮಾರಕವಾಗಬಹುದು ಎಂದು ಕೆಲವು ವರದಿಗಳು ಬಂದಿದೆ. ಆದರೆ ಇದು ಎಲ್ಲಿಯೂ ಸಾಭೀತಾಗಿಲ್ಲ. ಪರಿವಾಳಗಳ ಹಾಟ್ ಸ್ಪಾಟ್ ನಲ್ಲಿ ಫುಡ್ ಹಾಕಬೇಡಿ ಅಂದ್ರೆ ಬೇರೆಲ್ಲಿ ಫುಡ್ ಹಾಕಬೇಕು. ಹೊರವಲಯದಲ್ಲಿ ಪಾರಿವಾಳಗಳಿಗೆಂದೇ ವಿಶೇಷ ಜಾಗ ಮೀಸಲಿಡಿ. ಮೊದಲೇ ನಗರದಲ್ಲಿ ಹಕ್ಕಿ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿ ಹೋಗಿದೆ. ಈ ಮಧ್ಯೆ ಪಾರಿವಾಳಗಳು ಇರುವುದು ಬೇಡ ಅಂದ್ರೆ ಹೇಗೆ ಅಂತ ಪಾರಿವಾಳ ಪ್ರಿಯರು ಆಕ್ರೋಶ ಹೊರ ಹಾಕಿದ್ದಾರೆ.
ಒಟ್ನಲ್ಲಿ, ಪಾರಿವಾಳಗಳಿಗೆಂದೇ ನಿಗದಿತ ಜಾಗಗಳನ್ನ ಮಾಡಿದ್ರೆ ಅಲ್ಲಿ ಪಾರಿವಾಳಕ್ಕೆ ಊಟ ಹಾಕುವುದಕ್ಕೆ ಸಾಹಾಯವಾಗಲಿದ್ದು, ನಿಗದಿತ ಸ್ಥಳಗಳನ್ನ ಪಾಲಿಕೆ ಗುರುತಿಸಬೇಕಿದೆ. ಜೊತೆಗೆ ಜನರು ಸಹ ಆರೋಗ್ಯದ ದೃಷ್ಟಿಯಿಂದ ಸಾಧ್ಯವಾದಷ್ಟು ಪರಿವಾಳಗಳಿಂದ ದೂರ ಇರಬೇಕಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:29 am, Wed, 27 March 24