ಬೆಂಗಳೂರು, ಸೆಪ್ಟೆಂಬರ್ 27: ಬೆಂಗಳೂರು ನಗರದ ಅನೇಕ ಪ್ರದೇಶಗಳಲ್ಲಿ ಶುಕ್ರವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ (BESCOM) ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಕರ್ನಾಟಕ ವಿದ್ಯುತ್ಯ ಪ್ರಸರ ನಿಗಮ ನಿಯಮಿತ (KPTCL)ದಿಂದ ದುರಸ್ತಿ ಮತ್ತು ನಿರ್ವಹಣೆ ಕಾಮಗಾರಿ ನಡೆಯಲಿದೆ. ಹೀಗಾಗಿ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಯಾವ್ಯಾವ ಪ್ರದೇಶಗಳಲ್ಲಿ ವಿದ್ಯುತ್ ಕಟ್ ಆಗಲಿದೆ ಎಂಬ ಮಾಹಿತಿ ಇಲ್ಲಿದೆ.
ಜಯನಗರದ ಎಲಿಟಾ ವಾಯುವಿಹಾರ ಅಪಾರ್ಟ್‌ಮೆಂಟ್‌ಗಳು.ಕೆ.ಆರ್ ಲೇಔಟ್, ಶಾರದನಗರ, ಚುಂಚುಘಟ್ಟ ಮತ್ತು ಪ್ರದೇಶವನ್ನು ಸುತ್ತುವರಿದ ಉಪ ನಿಲ್ದಾಣದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಟಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ರಾಜಾಜಿನಗರದ 3ನೇ ಮುಖ್ಯ. 4 ನೇ ಮುಖ್ಯ, 4 ನೇ ಬ್ಲಾಕ್, ರಾಜಾಜಿನಗರ, IST ಕ್ರಾಸ್, ಮತ್ತು 2ನೇ ಕ್ರಾಸ್, IST R ಬ್ಲಾಕ್, ರಾಜಾಜಿನಗರದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1:30ರವರೆಗೆ ಪವರ್ ಕಟ್ ಆಗಲಿದೆ.
ಇದನ್ನೂ ಓದಿ: ಬೆಂಗಳೂರಿಗರಿಗೊಂದು ಬೆಸ್ಕಾಂ ಪ್ರಕಟಣೆ: ಸೆ 1 ರಿಂದಲೇ ಈ ಕಟ್ಟುನಿಟ್ಟಿನ ನಿಯಮಗಳು ಜಾರಿ
ಕೋರಮಂಗಲದ ಗುರಪ್ಪ ರೆಡ್ಡಿ ಲೇಔಟ್, ಎಸ್ ಪಾಳ್ಯದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಕಡಿತವಾಗಲಿದೆ.
ಕ.ವಿ.ಪ್ರ.ನಿ.ನಿ ಲೈನ್ ದುರಸ್ತಿ/ ನಿರ್ವಹಣಾ ಕಾಮಗಾರಿ ಸಲುವಾಗಿ ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.
ವಿದ್ಯುತ್ ಅಡಚಣೆಗಾಗಿ ವಿಷಾದಿಸುತ್ತೇವೆ.
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ https://t.co/pMf8qrljOB ಸಂಪರ್ಕಿಸಿ. pic.twitter.com/Oj2iLsGsef
— Namma BESCOM | ನಮ್ಮ ಬೆಸ್ಕಾಂ (@NammaBESCOM) September 26, 2024
ಬೆಸ್ಕಾಂ ವ್ಯಾಪ್ತಿಯ ರಾಮನಗರದ PSV ನಗರ, ಯಾರಬನಗರ, ಕೋತಿಪುರ, ಮತ್ತು ಇತರೆ ಪ್ರದೇಶ, ದಾವಣಗೆರೆಯ ಅಲಗಾವಲ್, ಹಲವುದಾರ, ಓಬಳಾಪುರ, ಸಿದ್ದಾಪುರ, ಡಿ ಮದಕರಿಪೂರ್ಣ. ದೊಡ್ಡಿಗನಾಳ್ ಮತ್ತು ಕೋಲಾರದ ಮುತ್ತಕದಳ್ಳಿ, ಗುನ್ನಹಳ್ಳಿ, ಮಾಡಬಹಳ್ಳಿ, ನಾಯಂಡ್ರಹಳ್ಳಿ, ಕಾಲೋನಿ, ಚಾನಕೇಶವಪುರದಲ್ಲಿ ಬೆಳಗ್ಗೆ 10 ರಿಂದ ಸಂಜೆ 5:30ರವರೆಗೆ ವಿದ್ಯುತ್ ಕಡಿತವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ