AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರ್ಯಾಂಡ್ ಬೆಂಗಳೂರಿನ ಹೈಟೆಕ್ ಪಾರ್ಕಿಂಗ್​ಗೆ ಸಂಕಷ್ಟ; ಹೊಟೇಲ್​ಗೆ ಅನುಮತಿ ಕೊಡಿ ಎಂದು ಪಾಲಿಕೆ ಮೊರೆ!

ಬ್ರ್ಯಾಂಡ್ ಬೆಂಗಳೂರಿನ ಮೊದಲ ಯೋಜನೆಯೇ ಹಳ್ಳ ಹಿಡಿಯುವ ಹಂತಕ್ಕೆ ಬಂದು ನಿಂತಿದೆ. ಬ್ರ್ಯಾಂಡ್ ಬೆಂಗಳೂರಿನ ಅಡಿಯಲ್ಲಿ ಬರೋಬ್ಬರಿ 80ಕೋಟಿ ವೆಚ್ಚದಲ್ಲಿ ದುಬೈ ಮಾದರಿಯಲ್ಲಿ ನಿರ್ಮಾಣವಾದ ಹೈಟೆಕ್ ಪಾರ್ಕಿಂಗ್ ಈಗ ಖಾಲಿ ಹೊಡಿತಿದೆ. ಇತ್ತ ಪಾರ್ಕಿಂಗ್ ಸಹವಾಸ ಸಾಕು ಅಂತಿರುವ ಗುತ್ತಿಗೆದಾರ, ಪಾರ್ಕಿಂಗ್ ಲಾಟ್​ನಲ್ಲಿ ಹೊಟೇಲ್ ಓಪನ್ ಮಾಡೋಕೆ ಅನುಮತಿ ಕೊಡಿ ಎಂದು ಬಿಬಿಎಂಪಿಯ ಮೊರೆಹೋಗಿದ್ದಾರೆ. ಬರೋಬ್ಬರಿ 7 ಬಾರೀ ಟೆಂಡರ್ ಕ್ಯಾನ್ಸಲ್ ಆಗಿದ್ದ ಬಿಬಿಎಂಪಿಯ ಹೈಟೆಕ್ ಪಾರ್ಕಿಂಗ್ ಸಂಕೀರ್ಣದ ವ್ಯಥೆಯ ಕತೆ ಇಲ್ಲಿದೆ.

ಬ್ರ್ಯಾಂಡ್ ಬೆಂಗಳೂರಿನ ಹೈಟೆಕ್ ಪಾರ್ಕಿಂಗ್​ಗೆ ಸಂಕಷ್ಟ; ಹೊಟೇಲ್​ಗೆ ಅನುಮತಿ ಕೊಡಿ ಎಂದು ಪಾಲಿಕೆ ಮೊರೆ!
ಬ್ರ್ಯಾಂಡ್ ಬೆಂಗಳೂರಿನ ಹೈಟೆಕ್ ಪಾರ್ಕಿಂಗ್​ಗೆ ಸಂಕಷ್ಟ
ಶಾಂತಮೂರ್ತಿ
| Edited By: |

Updated on: Sep 26, 2024 | 10:41 PM

Share

ಬೆಂಗಳೂರು, ಸೆ.26: ಸಿಲಿಕಾನ್ ಸಿಟಿಯ ಹೃದಯಭಾಗದಂತಿರುವ ಫ್ರೀಡಂ ಪಾರ್ಕ್, ಗಾಂಧಿನಗರ ಸುತ್ತಮುತ್ತ ಪಾರ್ಕಿಂಗ್ ಸಮಸ್ಯೆಗೆ ಬ್ರೇಕ್ ಹಾಕಲು ಬಿಬಿಎಂಪಿ(BBMP) ಹೈಟೆಕ್ ಪಾರ್ಕಿಂಗ್ ಸಂಕೀರ್ಣ ನಿರ್ಮಿಸಿತ್ತು. ಬರೋಬ್ಬರಿ 80 ಕೋಟಿ ರೂಪಾಯಿ ವೆಚ್ಚದ ಈ ಕಟ್ಟಡಕ್ಕೆ ಕೆಲ ತಿಂಗಳ ಹಿಂದಷ್ಟೇ ಡಿಸಿಎಂ ಚಾಲನೆ ನೀಡಿದ್ದರು. ಆದ್ರೆ, ಇದೀಗ ಅತಿಹೆಚ್ಚು ಆದಾಯ ನಿರೀಕ್ಷೆಯಲ್ಲಿದ್ದ ಗುತ್ತಿಗೆದಾರನಿಗೆ ಬಾರೀ ನಿರಾಸೆ ಎದುರಾಗಿದೆ. 8 ಕೋಟಿ ಹಣ ಕೊಟ್ಟು ಟೆಂಡರ್ ಪಡೆದಿದ್ದ ಗುತ್ತಿಗೆದಾರ, ಇದೀಗ ಬರೋಬ್ಬರಿ 70 ಲಕ್ಷ ನಷ್ಟ ಅನುಭವಿಸಿದ್ದು, ಪಾರ್ಕಿಂಗ್ ಲಾಟ್​ನಲ್ಲಿ ಹೊಟೇಲ್ ಅಥವಾ ವಾಣಿಜ್ಯ ಚಟುವಟಿಕೆಗೆ ಅನುಮತಿ ಕೊಡಿ ಎಂದು ಪಾಲಿಕೆಗೆ ಪತ್ರ ಬರೆದಿದ್ದಾರೆ.

ಸದ್ಯ 600 ಕಾರುಗಳು, 750 ಬೈಕ್​ಗಳನ್ನ ನಿಲ್ಲಿಸಲು ಸ್ಥಳಾವಕಾಶ ಇರುವ ಈ ಪಾರ್ಕಿಂಗ್​​ನಲ್ಲಿ ಸದ್ಯ ನಿರೀಕ್ಷೆಯಷ್ಟು ವಾಹನಗಳು ಬಾರದೇ ಇರುವುದು ನಷ್ಟ ತಂದಿಟ್ಟಿದೆಯಂತೆ. ದುಬೈ ಮಾದರಿಯಲ್ಲಿ ಹೈಫೈ ಸವಲತ್ತುಗಳನ್ನ ಅಳವಡಿಸಿರುವ ಈ ಪಾರ್ಕಿಂಗ್ ಲಾಟ್​ಗೆ ವಾರ್ಷಿಕವಾಗಿ 1.50 ಕೋಟಿ ರೂ. ಆದಾಯದ ನಿರೀಕ್ಷೆ ಇತ್ತು. ಆದ್ರೆ, ಇದೀಗ ನಿರೀಕ್ಷೆಯಷ್ಟು ಆದಾಯ ಬಾರದೇ ಇರುವುದರಿಂದ ಕಂಗಾಲಾದ ಗುತ್ತಿಗೆದಾರ, ಪಾಲಿಕೆಗೆ ಪತ್ರ ಬರೆದು ಕಮರ್ಷಿಯಲ್ ಆಕ್ಟಿವಿಟಿಗೆ ಅವಕಾಶ ಕೊಡಿ ಎಂದು ಬಿಬಿಎಂಪಿಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು: 15 ದಿನಗಳಿಗಿಂತ ಹೆಚ್ಚು ರಸ್ತೆ ಬದಿ ವಾಹನ ಪಾರ್ಕ್ ಮಾಡಿ ಹೋಗಿದ್ದೀರಾ, ಕಾದಿದೆ ಕಠಿಣ ಕ್ರಮ

ಇತ್ತ ಗುತ್ತಿಗೆದಾರನ ಅಹವಾಲು ಸ್ವೀಕರಿಸಿರುವ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿಯ ಪಾರ್ಕಿಂಗ್ ನಿಂದ ನಿರೀಕ್ಷಿತ ಆದಾಯ ಬರ್ತಿಲ್ಲ, ಈ ಬಗ್ಗೆ ಸರ್ಕಾರದ ಜೊತೆ ಚರ್ಚಿಸುತ್ತೇವೆ ಅಂತಿದ್ದಾರೆ. ಅಲ್ಲದೇ ಗುತ್ತಿಗೆದಾರನ ಅವಧಿಯನ್ನ ವಿಸ್ತರಣೆ ಮಾಡುವ ಬಗ್ಗೆ ಕೂಡ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಆಯುಕ್ತರು ಭರವಸೆ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಬ್ರ್ಯಾಂಡ್ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಕೊಡೋಕೆ ಎಂದು ಕೋಟಿ ಕೋಟಿ ವೆಚ್ಚದಲ್ಲಿ ಆರಂಭಿಸಿದ್ದ ಪಾರ್ಕಿಂಗ್, ಕೆಲ ತಿಂಗಳಲ್ಲೇ ನಷ್ಟದ ಹೊಡೆತ ತಿಂದಿದೆ. ಇತ್ತ ಪಾರ್ಕಿಂಗ್ ಸಂಕೀರ್ಣದ ಬೇಸ್ ಮೆಂಟ್​ನಲ್ಲಿ ಹೊಟೇಲ್ ಅಥವಾ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕೊಡಿ ಎನ್ನುತ್ತಿರುವ ಗುತ್ತಿಗೆದಾರನ ಮನವಿಗೆ ಪಾಲಿಕೆ ಗ್ರೀನ್ ಸಿಗ್ನಲ್ ಕೊಡುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ