Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮಗಳ ಮದ್ವೆಗೆಂದು ಮಾಡಿಸಿಟ್ಟಿದ್ದ 3.5 ಕೆ.ಜಿ ಚಿನ್ನ, 10 ಲಕ್ಷ ನಗದು ಕಳ್ಳತನ

ಬೆಂಗಳೂರಿನ ತಿಲಕ್ ನಗರದ ಎಸ್​ಆರ್​ಕೆ ಗಾರ್ಡನ್​ನಲ್ಲಿ ಮನೆ ಲಾಕ್ ಮುರಿದು 3.5 ಕೆ.ಜಿ ಚಿನ್ನ ಹಾಗೂ 10 ಲಕ್ಷ ನಗದು ಕಳ್ಳತನ ಮಾಡಿ ಖದೀಮ ಎಸ್ಕೇಪ್​ ಆಗಿದ್ದಾನೆ. ಮನೆಯವರು ಯಾರು ಇಲ್ಲದಿರವುದನ್ನು ಗಮನಿಸಿಯೇ ಕಳ್ಳ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಇನ್ನು ಸಿಸಿಟಿವಿ ಪರಿಶೀಲನೆ ನಡೆಸಿರುವ ತಿಲಕ್ ನಗರ ಪೊಲೀಸರಿಗೆ, ಮನೆಗೆ ಓರ್ವ ಬಂದಿರುವುದು ಗೊತ್ತಾಗಿದೆ.

ಬೆಂಗಳೂರು: ಮಗಳ ಮದ್ವೆಗೆಂದು ಮಾಡಿಸಿಟ್ಟಿದ್ದ 3.5 ಕೆ.ಜಿ ಚಿನ್ನ, 10 ಲಕ್ಷ ನಗದು ಕಳ್ಳತನ
ಕಳ್ಳನ ಎಂಟ್ರಿ ಸಿಸಿಕ್ಯಾಮೆರಾದಲ್ಲಿ ಸೆರೆ
Follow us
Prajwal Kumar NY
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 27, 2023 | 9:12 AM

ಬೆಂಗಳೂರು, ಸೆ.27: ಮಹಾನಗರದಲ್ಲಿ ಕಳ್ಳರ ಕೈಚಳಕ ಹೆಚ್ಚಾಗಿದೆ. ಪೊಲೀಸರು ಎಷ್ಟೇ ನಿಗಾವಹಿಸಿದರು, ಖದೀಮರ ಓಟಕ್ಕೆ ಬ್ರೇಕ್​ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ಬೆಂಗಳೂರಿನ(Bengaluru) ತಿಲಕ್ ನಗರದ ಎಸ್​ಆರ್​ಕೆ ಗಾರ್ಡನ್​ನಲ್ಲಿ ಮನೆ ಲಾಕ್ ಮುರಿದು 3.5 ಕೆ.ಜಿ ಚಿನ್ನ ಹಾಗೂ 10 ಲಕ್ಷ ನಗದು ಕಳ್ಳತನ ಮಾಡಿ ಎಸ್ಕೇಪ್​ ಆಗಿದ್ದಾನೆ. ಹೌದು, ಮನೆಯವರೆಲ್ಲ ರಾಮನಗರಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಖತರ್ನಾಕ್​ ಕಳ್ಳ ಮನೆಯಲ್ಲಿಯೇ ಯಾರು ಇಲ್ಲದಿರುವುದು ಗಮನಿಸಿಯೇ ಈ ಕೃತ್ಯ ಎಸಗಿದ್ದಾನೆ.

ಕಳ್ಳನ ಕೈಚಳಕಕ್ಕೆ ಮಗಳ ಮದುವೆಗೆ ಮಾಡಿಸಿಟ್ಟ ಆಭರಣ ಮಾಯ

ಹೌದು, ಮಗಳ ಮದುವೆ ಕೂಡ ಫಿಕ್ಸ್ ಅಗಿತ್ತು. ಹಾಗಾಗಿ ಆಭರಣ ಎಲ್ಲವನ್ನು ಮಾಡಿಸಿ, ಮನೆಯಲ್ಲಿಟ್ಟಿದ್ದರು. ಇನ್ನು ವಿಷಯ ತಿಳಿಯುತ್ತಿದ್ದಂತೆ ತಿಲಕ್ ನಗರ ಪೊಲೀಸರು ಮನೆಗೆ ಭೇಟಿ ನೀಡಿ, ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಿದ್ದಾರೆ. ಮನೆಯವರು ಯಾರು ಇಲ್ಲದಿರವುದನ್ನ ಗಮನಿಸಿಯೇ ಕಳ್ಳ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಇನ್ನು ಸಿಸಿಟಿವಿ ಪರಿಶೀಲನೆ ನಡೆಸಿರುವ ತಿಲಕ್ ನಗರ ಪೊಲೀಸರಿಗೆ, ಮನೆಗೆ ಓರ್ವ ಬಂದಿರುವುದು ಗೊತ್ತಾಗಿದೆ. ಇದೀಗ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ಕಳ್ಳನಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ:ಈಗ ದಾಳಿಂಬೆಗೆ ಬಂದಿದೆ ಚಿನ್ನದ ಬೆಲೆ; ರೈತನ ತೋಟಕ್ಕೆ ನುಗ್ಗಿ 5 ಲಕ್ಷ ರೂ ಮೌಲ್ಯದ ದಾಳಿಂಬೆ ಹಣ್ಣುಗಳ ಕಳ್ಳತನ ಮಾಡಿದರು!

ಟಂಟಂಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬಾಗಲಕೋಟೆ: ನಗರದ ಹಳೆ ಅ‌ಂಜುಮನ್‌ ಶಾಲೆ ಬಳಿ‌ ಬಟ್ಟೆ ವ್ಯಾಪಾರಿಗೆ ಸೇರಿದ್ದ ಟಂಟಂ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ. ವಾಹನದಲ್ಲಿದ್ದ ಲಕ್ಷಾಂತರ ಮೌಲ್ಯದ ಬಟ್ಟೆ, ಇತರೆ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ರಮ್ಜಾನ್ ದೊಡ್ಡಮನಿ ಎಂಬುವರಿಗೆ ಸೇರಿದ ವಾಹನ ಇದಾಗಿದೆ. ಇತ ಗ್ರಾಮಗಳಿಗೆ ತೆರಳಿ ಬಟ್ಟೆಗಳನ್ನು ಮಾರಿ ಜೀವನ ನಡೆಸುತ್ತಿದ್ದ. ಇನ್ನು ಈ ಕುರಿತು ಬಾಗಲಕೋಟೆ ನಗರ ಠಾಣಾ ವ್ಯಾಪ್ತಿಯಲ್ಲಿ  ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:13 am, Wed, 27 September 23