ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅಧಿಕಾರಿಗಳ ವರ್ಗಾವಣೆ ಪರ್ವ: ಒಂದೇ ದಿನ 40 DYSP, 13 ಐಪಿಎಸ್​​ ವರ್ಗಾವಣೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 30, 2023 | 4:28 PM

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಶುರುವಾಗಿದ್ದು, 34 ಡಿವೈಎಸ್​ಪಿಗಳು ಹಾಗೂ 13 ಐಪಿಎಸ್​​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅಧಿಕಾರಿಗಳ ವರ್ಗಾವಣೆ ಪರ್ವ: ಒಂದೇ ದಿನ 40 DYSP, 13 ಐಪಿಎಸ್​​ ವರ್ಗಾವಣೆ
ವಿಧಾನಸೌಧ
Image Credit source: adobe.com
Follow us on

ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ (Assembly Elections) ಸಮೀಪಿಸುತ್ತದೆ. ಈ ಹಿನ್ನೆಲೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಶುರುವಾಗಿದ್ದು, ಸಾರ್ವತ್ರಿಕ ಚುನಾವಣೆ ಸಂಬಂಧ 40 ಡಿವೈಎಸ್​ಪಿಗಳ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಹಾಗೂ ರಾಜ್ಯದ ಹಲವೆಡೆ ಕರ್ತವ್ಯ ನಿರ್ವಹಿಸುತ್ತಿದ್ದ ಡಿವೈಎಸ್​ಪಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆ ಆದ ಡಿವೈಎಸ್​ಪಿಗಳ ವಿವರ ಈ ಕೆಳಗಿನಂತಿದೆ.

  • ಜೆಸಿ ನಗರ ಎಸಿಪಿ ಮನೋಜ್ ಕುಮಾರ್ ಡಿಜಿಪಿ ಕಚೇರಿಗೆ ವರ್ಗಾವಣೆ.
  • ಸುಬ್ರಹ್ಮಣ್ಯಪುರ ಎಸಿಪಿ ಪವನ್ ಸಿಐಡಿಗೆ ವರ್ಗಾವಣೆ.
  • ಕವಿತಾ ಎಸಿಪಿ, ಸಿಐಡಿಗೆ ವರ್ಗಾವಣೆ.
  • ಸಿಸಿಬಿ ಎಸಿಪಿ ರೀನಾ ಸುವರ್ಣ ಸಿಐಡಿಗೆ ವರ್ಗಾವಣೆ.
  • ಸಿಸಿಬಿಯಲ್ಲಿ ಸ್ಯಾಂಟ್ರೋ ರವಿ ಪತ್ನಿ ವಿರುದ್ಧದ ಸುಳ್ಳು ದರೋಡೆ ಪ್ರಕರಣದ ತನಿಖೆ ನಡೆಸಿದ್ದ ಹೆಚ್ ಎಸ್ ಧರ್ಮೇಂದ್ರ, ಎಸಿಪಿ ಮಂಗಳೂರು ಐಜಿಪಿ ಕಚೇರಿಗೆ ವರ್ಗಾವಣೆ.
  • ಎಲೆಕ್ಟ್ರಾನಿಕ್ ಸಿಟಿ ಎಸಿಪಿಯಾಗಿ ರವಿಶಂಕರ್ ವರ್ಗಾವಣೆ.

ಅದೇ ರೀತಿಯಾಗಿ 13 ಐಪಿಎಸ್​​ ಅಧಿಕಾರಿಗಳ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಹೀಗಿದೆ.

  • ಕಾರ್ತಿಕ್​ ರೆಡ್ಡಿ- ರಾಮನಗರ ಪೊಲೀಸ್ ವರಿಷ್ಠಾಧಿಕಾರಿ
  • ವಿನಾಯಕ್ ಪಾಟೀಲ್-ಎಐಜಿಪಿ, ಬೆಂಗಳೂರು
  • ಸಂತೋಷ್ ಬಾಬು-ಎಸ್​​ಪಿ, ಗುಪ್ತಚರ ಇಲಾಖೆ
  • ದೇವರಾಜ್-ಡಿಸಿಪಿ, ಬೆಂಗಳೂರು ಉತ್ತರ ವಿಭಾಗದ ಡಿಸಿಪಿ
  • ಸಿರಿಗೌರಿ -ಎಸ್​​ಪಿ, ಇಂಟರ್ನಲ್ ಸೆಕ್ಯೂರಿಟಿ ಡಿವಿಷನ್
  • ಟಿ.ಪಿ.ಶಿವಕುಮಾರ್ – ಎಸ್​ಪಿ, ಕೆಪಿಟಿಸಿಎಲ್​
  • ​ಹೆಚ್​​.ಶೇಖರ್ – ಡಿಸಿಪಿ, ಕಾನೂನು ಸುವ್ಯವಸ್ಥೆ, ಬೆಳಗಾವಿ ನಗರ
  • ಪದ್ಮಿನಿ ಸಾಹೋ – ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ
  • ಪ್ರದೀಪ್ ಗುಂಟಿ -ಎಸ್​​ಪಿ, ಕಾರಾಗೃಹ ಇಲಾಖೆ
  • ಎಂ.ಎಸ್.ಗೀತಾ – ಎಸ್​​ಪಿ, ಪೊಲೀಸ್ ತರಬೇತಿ ಶಾಲೆ, ಮೈಸೂರು
  • ರಾಮರಾಜನ್- ಪೊಲೀಸ್ ವರಿಷ್ಠಾಧಿಕಾರಿ, ಕೊಡಗು
  • ರವೀಂದ್ರ ಕಾಶಿನಾಥ್ – ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು
  • ಎಂ.ಎ.ಅಯ್ಯಪ್ಪ – ಎಸ್​​ಪಿ, ಗುಪ್ತಚರ ಇಲಾಖೆ

ಇನ್ನಷ್ಟು ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:59 pm, Mon, 30 January 23