AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Police President Medal: ಅತ್ಯುತ್ತಮ ಸೇವೆ ಸಲ್ಲಿಸಿದ ಕರ್ನಾಟಕದ 20 ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ

ದೇಶದ 74ನೇ ಗಣರಾಜ್ಯೋತ್ಸವದ ದಿನದ ಅಂಗವಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ.

Police President Medal: ಅತ್ಯುತ್ತಮ ಸೇವೆ ಸಲ್ಲಿಸಿದ ಕರ್ನಾಟಕದ 20 ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ
ಪ್ರಾತಿನಿಧಿಕ ಚಿತ್ರImage Credit source: kannada.news18.com
TV9 Web
| Edited By: |

Updated on:Jan 25, 2023 | 5:07 PM

Share

ಬೆಂಗಳೂರು: ದೇಶದ 74ನೇ ಗಣರಾಜ್ಯೋತ್ಸವದ ದಿನದ ಅಂಗವಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ (Police President Medal) ಮಾಡಲಾಗಿದೆ. ಗಣನೀಯ ಸೇವೆ ಸಲ್ಲಿಸಿದ 901 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ಕರ್ನಾಟಕ ಪೋಲೀಸ್ ಸಿಬ್ಬಂದಿಗೆ ಒಟ್ಟು 20 ಪ್ರಶಸ್ತಿ ಲಭಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಪಟ್ಟಿ ಪ್ರಕಟಿಸಿದೆ. ಗಣನೀಯ ಸೇವೆ ಸಲ್ಲಿಸಿದ ಕರ್ನಾಟಕ ಪೋಲೀಸ್ ಸಿಬ್ಬಂದಿಗೆ ಒಟ್ಟು 20 ಪ್ರಶಸ್ತಿ ಲಭಿಸಿದ್ದು, ಅದರಲ್ಲಿ 19 ಪ್ರಶಸ್ತಿ ವಿಶಿಷ್ಟ ಸೇವೆ ಮತ್ತು 1 ಗಣನೀಯ ಸೇವೆಗೆ ಪ್ರಶಸ್ತಿ, 8 ಇತರ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಪೊಲೀಸ್​ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಅತ್ಯುನ್ನತ ಗೌರವ ರಾಷ್ಟ್ರಪತಿ ಪದಕ ನೀಡಲಾಗುತ್ತದ್ದು, ಈ ಪದಕ ಎಡಿಜಿಪಿ ಶರತ್​ ಚಂದ್ರ ಅವರಿಗೂ ಸಿಕ್ಕಿದೆ. ಇವರು ಶಿಕ್ಷಕರ ನೇಮಕಾತಿ ಹಗರಣ ಪ್ರಕರಣ ಸೇರಿದಂತೆ ಸಾಕಷ್ಟು ಪ್ರಮುಖ ಪ್ರಕರಣಗಳನ್ನು ಭೇದಿಸುವಲ್ಲಿ ಇವರದ್ದು ಪ್ರಮುಖ ಪಾತ್ರವಿದೆ. ಹಾಗಾಗಿ ತಮ್ಮ ವೃತ್ತಿ ಜೀವನದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಕರ್ನಾಟಕದ ಎಡಿಜಿಪಿ ಶರತ್​ ಚಂದ್ರ ಅವರಿಗೆ ಈ ಬಾರಿಯ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಗುತ್ತಿದೆ.

ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾದ ಕರ್ನಾಟಕ ಪೋಲೀಸ್ ಸಿಬ್ಬಂದಿ ಹೆಸರು ಈ ಕೆಳಗಿನಂತಿವೆ.

  • ಕರ್ನಾಟಕದ ADGP ಶರತ್​ ಚಂದ್ರ
  • ಲಾಂಬೂರಾಂ, ಸಿಜಿ, ಹುಬ್ಬಳ್ಳಿ
  • ನಾಗರಾಜು- ಡಿಎಸ್‌ಪಿ, ಬೆಂಗಳೂರು
  • ಪದ್ಮರಾಜಯ್ಯ ವೀರೇಂದ್ರ ಕುಮಾರ್‌- ಡಿಎಸ್‌ಪಿ ಬೆಂಗಳೂರು
  • ಬೆದ್ರಾಜೆ ಪ್ರಮೋದ್ ಕುಮಾರ್- ಡಿಎಸ್‌ಪಿ ಬೆಂಗಳೂರು
  • ಸಿದ್ದಲಿಂಗಪ್ಪ ಆರ್‌ ಪಾಟೀಲ್‌- ಡಿಎಸ್‌ಪಿ ಬೆಂಗಳೂರು ಲೋಕಾಯುಕ್ತ
  • ಸಿವಿ ದೀಪಕ್‌- ಡಿಎಸ್‌ಪಿ ಬೆಂಗಳೂರು
  • ಹೆಚ್‌ ವಿಜಯ- ಡಿಎಸ್‌ಪಿ ಬೆಂಗಳಊರು
  • ಬಿ. ಶಿವಲಿಂಗೇಗೌಡ ಮಂಜುನಾಥ್, ಇನ್ಸ್‌ಪೆಕ್ಟರ್‌- ಬೆಂಗಳೂರು ಗ್ರಾಮಾಂತರ
  • ಗಣೇಶ್‌ ಜನಾರ್ಧನ ರಾವ್‌- ಇನ್ಸ್‌ಪೆಕ್ಟರ್‌- ಬೆಂಗಳೂರು
  • ಆರ್‌ಪಿ ಅನಿಲ್- ಸರ್ಕಲ್‌ ಇನ್ಸ್‌ಪೆಕ್ಟರ್‌- ಬೆಂಗಳೂರು
  • ಮನೋಜ್ ಹೊವಾಲೇ, ಇನ್ಸ್‌ಪೆಕ್ಟರ್‌- ಬೆಂಗಳೂರು
  • ಟಿಎ ನಾರಾಯಣ ರಾವ್‌- ಸ್ಪೆಷಲ್‌ ARSI, KSRP ಬೆಂಗಳೂರು
  • ವೆಂಕಟರಮಣಗೌಡ- ARSI, KSRP ಬೆಂಗಳೂರು
  • ಎಸ್ ಎಂ ಪಾಟೀಲ್‌- ARSI, KSRP ಬೆಂಗಳೂರು
  • ಕೆ. ಪ್ರಸನ್ನಕುಮಾರ್‌- Head Constable, ಬೆಂಗಳೂರು
  • ಪ್ರಭಾಕರ ಹೆಚ್‌- Head Constable, ಬೆಂಗಳೂರು
  • ಬಿಟಿ ವರದರಾಜ- ರಿಸರ್ವ ಪೊಲೀಸ್‌ Inspector- ಬೆಂಗಳೂರು
  • ಡಿ. ಸುಧಾ- WHC, SCRB, ಬೆಂಗಳೂರು
  • ಟಿಆರ್‌ ರವಿಕುಮಾರ್‌- CHC, City Control Room ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:04 pm, Wed, 25 January 23

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ