8 ವರ್ಷಗಳ ಪ್ರೀತಿ: ಬರಸಿಡಿಲಿನಂತೆ ಬಂದು ಅಪ್ಪಳಿಸಿದ ಪ್ರೇಯಸಿಯ ಲಗ್ನ ಪತ್ರಿಕೆ, ವಿಷ ಕುಡಿದ ಪ್ರಿಯಕರ

ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯ ಮದುವೆ ಬೇರೊಬ್ಬನೊಂದಿಗೆ ಫಿಕ್ಸ್​ ಆಗಿದೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಪ್ರಿಯಕರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

8 ವರ್ಷಗಳ ಪ್ರೀತಿ: ಬರಸಿಡಿಲಿನಂತೆ ಬಂದು ಅಪ್ಪಳಿಸಿದ ಪ್ರೇಯಸಿಯ ಲಗ್ನ ಪತ್ರಿಕೆ, ವಿಷ ಕುಡಿದ ಪ್ರಿಯಕರ

Updated on: Feb 26, 2023 | 8:28 AM

ಬೆಂಳೂರು: ತಾನು ಪ್ರೀತಿಸುತ್ತಿದ್ದ ಹುಡುಗಿ ಬೇರೊಬ್ಬನೊಂದಿಗೆ ಮದುವೆಯಾಗುತ್ತಿದ್ದಾಳೆಂದು ಮನನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನಿಸಿರುವ(suicide attempt) ಘಟನೆ ಬೆಂಗಳೂರಿನ(Bengaluru) ಕುಮಾರಸ್ವಾಮಿ ಲೇಔಟ್​ನಲ್ಲಿ ನಡೆದಿದೆ. ಅರುಣ್ (35) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಅರುಣ್ ಕಳೆದ ಎಂಟು ವರ್ಷಗಳಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆ ಯುವತಿ ಸಹ ಅರುಣ್​ನನ್ನು ಪ್ರೀತಿಸುತ್ತಿದ್ದಳು. ಆದ್ರೆ, ಇದೀಗ ದಿಢೀರ್​ ಯುವತಿಗೆ ಆಕೆಯ ಮನೆಯವರು ಬೇರೆ ಹುಡುಗನ ಜೊತೆ ಮದುವೆ ಫಿಕ್ಸ್​ ಮಾಡಿದ್ದಾರೆ. ಈ ವಿಚಾರ ತಿಳಿದು ಅರುಣ್​ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾನೆ,

ಇದನ್ನೂ ಓದಿ: ಅಕ್ಕನ ಮನೆಗೆ ದತ್ತು ಹೋಗಿದ್ದ ತಮ್ಮ ಆತ್ಮಹತ್ಯೆ, ನನ್ನ ಹೆಸರಿನ 2 ಎಕರೆಯಲ್ಲಿ ಸರ್ಕಾರಿ ಶಾಲೆ ಕಟ್ಟಿಸಿ ಎಂದು ಡೆತ್ ನೋಟ್ ಬರೆದಿಟ್ಟ ಯುವಕ

ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೇ ಪೊಷಕರಿಗೆ ತಿಳಿಸದೇ ಮೂರು ವರ್ಷಗಳ ಹಿಂದೆ ಚಾಮುಂಡಿಬೆಟ್ಟ ದೇವಸ್ಥಾನದಲ್ಲಿ ಮದುವೆಯಾಗಿದ್ದರಂತೆ. ಬಳಿಕ ಎರಡು ಮನೆಯವರನ್ನು ಒಪ್ಪಿಸಿ ಅಧಿಕೃತವಾಗಿ ಮದುವೆಯಾಗುವ ಪ್ಲಾನ್​ನಲ್ಲಿದ್ದರಂತೆ. ಆದ್ರೆ ಯುವತಿಯ ಪೋಷಕರಿಂದ ಬೇರೊಬ್ಬ ಫಿಕ್ಸ್​ ಮಾಡಿದ್ದಾರೆ. ಅಲ್ಲದೇ ಮದ್ವೆ ಆಹ್ವಾನ ಪತ್ರಿಕೆ ಹಂಚಿದ್ದಾರೆ.

ಪ್ರೇಯಸಿಯ ಇನ್ವಿಟೇಷನ್ ಕಾರ್ಡ್ ಕಂಡ ಅರುಣ್, ಕೂಡಲೇ ಯುವತಿಯ ಸಂಪರ್ಕಕ್ಕೆ ಯತ್ನಿಸಿದ್ದಾನೆ. ಆದ್ರೆ, ಅದು ಸಾಧ್ಯವಾಗದಿದ್ದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇನ್ನಷ್ಟು ಬೆಂಗಳೂರಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ