ಬೆಂಗಳೂರು, ನವೆಂಬರ್ 9: ಐಎಂಎ ಬಹುಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರವರಿಯಲ್ಲಿ ಕಾಂಪಿಟೆಂಟ್ ಅಥಾರಿಟಿ ಇ-ಹರಾಜು ಪ್ರಕ್ರಿಯೆ ನಡೆಸಿತ್ತು. ಮನ್ಸೂರ್ ಅಲಿಖಾನ್ (Mansoor Ali Khan) ಒಡೆತನದ ಐಎಂಎ ಜುವೆಲ್ಲರಿಯಲ್ಲಿ ಡೈಮಂಡ್, ಗೋಲ್ಡ್, ಸಿಲ್ವರ್ ಜಪ್ತಿ ಮಾಡಿ ಇ-ಹರಾಜು ಮಾಡಲಾಗಿತ್ತು. ಸರ್ಕಾರ ಜಪ್ತಿ ಮಾಡಿ ಇ-ಹರಾಜು ಮಾಡುವ ಮೂಲಕ ಒಟ್ಟು 68 ಕೋಟಿ ರೂ. ಹಣ ಹಂಚಿಕೆ ಮಾಡಿದೆ. ಹಿರಿಯ ಐಎಎಸ್ ಅಧಿಕಾರಿ ಅಮಲನ್ ಆದಿತ್ಯ ಬಿಸ್ವಾಸ್ ನೇತೃತ್ವದ ಕಾಂಪಿಟೆಂಟ್ ಅಥಾರಿಟಿ ಹಣ ಕಳೆದುಕೊಂಡ ಗ್ರಾಹಕರ ಖಾತೆಗೆ ಮಾತ್ರ ಹಂತ-ಹಂತವಾಗಿ ಹಣ ಜಮೆ ಮಾಡುತ್ತಿದೆ. ಹಣ ಕಳೆದುಕೊಂಡ ಗ್ರಾಹಕರ ಮೊಗದಲ್ಲಿ ಇದೀಗ ಸಂತಸ ಮೂಡಿದೆ.
ಟಿವಿನೈನ್ ಜತೆಗೆ ಐಎಂಎ ಗ್ರಾಹಕ ಮಾತನಾಡಿದ್ದು, ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಉಳಿದ ಹಣವನ್ನು ತ್ವರಿತವಾಗಿ ವಿತರಿಸಲು ಕ್ರಮಕ್ಕೆ ಮನವಿ ಮಾಡಿದ್ದಾರೆ. ಮನ್ಸೂರ್ ಅಲಿಖಾನ್ ಸಂಬಂಧಿಸಿದ ನೂರಾರು ಕೋಟಿ ಮೌಲ್ಯದ ಆಸ್ತಿ-ಪಾಸ್ತಿ ಜಪ್ತಿಯಾಗಿದೆ. ಆದರೆ ಜಪ್ತಿ ಮಾಡಿದ ಆಸ್ತಿ ಹರಾಜು ಪ್ರಕ್ರಿಯೆ ವಿಳಂಬವಾಕಿದೆ ಎಂದಿದ್ದಾರೆ.
ಇದನ್ನೂ ಓದಿ: IMA ಬಹುಕೋಟಿ ಹಗರಣ: ಅಜಯ್ ಹಿಲೋರಿಗೆ ಹೈಕೋರ್ಟ್ ರಿಲೀಫ್, ಸಿಬಿಐ ಪ್ರಕರಣ ರದ್ದು
ಜಪ್ತಿಯಾದ ಆಸ್ತಿಯ ಕೇಸ್ ನ್ಯಾಯಾಲಯದಲ್ಲಿ ಬಾಕಿ ಇದೆ. ಗ್ರಾಹಕರು ಹಣ ಹೂಡಿಕೆ ಮಾಡಿ ತುಂಬಾ ಕಷ್ಟದಲ್ಲಿದ್ದು ತ್ವರಿತವಾಗಿ ಉಳಿದ ಬಹುಪಾಲು ಹಣ ಮರಳಿಸುವಂತೆ ಒತ್ತಾಯ ಮಾಡಿದ್ದಾರೆ. ಐಎಂಎ ಗ್ರಾಹಕರ ಅಕೌಂಟ್ಗೆ ಸ್ವಲ್ಪ ಪ್ರಮಾಣದ ಹಣ ಜಮೆ ಆಗುತ್ತಿದೆ.
ಇದನ್ನೂ ಓದಿ: IMA ವಂಚನೆ ಪ್ರಕರಣ: ಕ್ಲೇಮ್ ಅರ್ಜಿ ಸಲ್ಲಿಸಲು ಡೆಡ್ ಲೈನ್ ಫಿಕ್ಸ್..
ಹೆಚ್ಚಿನ ಆದಾಯದ ಆಸೆ ಹುಟ್ಟಿಸಿ ಸಾವಿರಾರು ಜನರಿಗೆ ವಂಚನೆ ಮಾಡಿರುವ ಬೆಂಗಳೂರು ಮೂಲದ ಐಎಂಎ ಕಂಪನಿಯಿಂದ ಮಹಾವಂಚನೆ ಇದೀಗ ಬೆಳಕಿಗೆ ಬಂದಿದೆ. ಹಣ ಹೂಡಿಕೆ ಮಾಡಿಸಿಕೊಂಡ ಮನ್ಸೂರ್ ಅಲಿಖಾನ್ ಒಡೆತನದ ಐಎಂಎ ಕಂಪನಿ 4000 ಕೋಟಿ ರೂ. ಮಹಾ ವಂಚನೆ ಮಾಡಿದೆ. ಇಸ್ಲಾಂ ಹೂಡಿಕೆಯ ಮಾರ್ಗಗಳನ್ನು ಬಳಸಿಕೊಂಡು ಜನರಿಗೆ ಹೆಚ್ಚಿನ ಆದಾಯದ ಆಸೆ ಹುಟ್ಟಿಸಲಾಗಿದೆ.
ಸೆಬಿ-ಸಿ ಒನ್ ಇ ಪೋರ್ಟಲ್ ಮೂಲಕ ಇಡೀ ದಿನ ಅನ್ ಲೈನ್ ಬಿಡ್ಡಿಂಗ್ ಮೂಲಕ ಹರಾಜು ಮಾಡಲಾಗಿತ್ತು. ಐಎಂಎ ಗ್ರೂಪ್ ಮಳಿಗೆಗಳಿಂದ ವಶಕ್ಕೆ ಪಡೆದಿದ್ದ ಜುವೆಲ್ಲರಿ ಇ-ಹರಾಜಾದ ವಿವರ ಹೀಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:55 am, Thu, 9 November 23