AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

47 ನಿಗಮ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿ ರದ್ದು: ಸಿಎಸ್ ಕಚೇರಿಯಿಂದ ಆದೇಶ

47 ನಿಗಮ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿ ರದ್ದು ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಆದೇಶ ಹೊರಡಿಸಿದ್ದಾರೆ.

47 ನಿಗಮ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿ ರದ್ದು: ಸಿಎಸ್ ಕಚೇರಿಯಿಂದ ಆದೇಶ
ವಿಧಾನ ಸೌಧ
ವಿವೇಕ ಬಿರಾದಾರ
|

Updated on:Jul 12, 2022 | 4:37 PM

Share

ಬೆಂಗಳೂರು: 47 ನಿಗಮ ಮಂಡಳಿಯ (Corporation boards) ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿ ರದ್ದು ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ (Vandita Sharma) ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿ (Basavaraj Bommai) ಅವರ ಆದೇಶದ ಹಿನ್ನೆಲೆಯಲ್ಲಿ ಸಿಎಸ್ ಕಚೇರಿಯಿಂದ ಆಯಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ​ ಸೂಚನೆ ನೀಡಲಾಗಿದೆ.

ಮಾಜಿ ಮುಖ್ಯಮಂತ್ರಿ ಬಿ. ಎಸ್​ ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ ವಿವಿಧ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇಮಕಾತಿಯನ್ನು ರದ್ದು ಮಾಡಲಾಗಿದೆ.  ಒಂದೂವರೆ ವರ್ಷದ ಅಧಿಕಾರಾವಧಿ ಪೂರ್ಣಗೊಳಿಸಿದ ಮಾನದಂಡದ ಅಡಿಯಲ್ಲಿ ರದ್ದು ಮಾಡಲಾಗಿದೆ. ಬಿ.ಎಸ್. ಯಡಿಯೂರಪ್ಪ ಅವರ ಆಪ್ತರ ನೇಮಕಾತಿಗಳನ್ನು ರದ್ದು ಮಾಡಲಾಗಿದೆ. ನೇಮಕಾತಿ ರದ್ದು ಸಂಬಂಧ ಬಿಜೆಪಿ ತ್ರಿ ಸದಸ್ಯ ಸಮಿತಿ ರಚಿಸಿತ್ತು.

ಸಚಿವ ಆರ್. ಅಶೋಕ್, ಎಂಎಲ್ಸಿ ಲಕ್ಷ್ಮಣ ಸವದಿ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಇದ್ದ ತ್ರಿ ಸದಸ್ಯ  ಸಮಿತಿ ರದ್ದು ಪಟ್ಟಿ ತಯಾರಿಸಿ ಮುಖ್ಯಮಂತ್ರಿ ಅವರಿಗೆ ಹಸ್ತಾಂತರಿಸಿದ್ದರು. ನಿನ್ನೆ (ಜುಲೈ 11) ಮುಖ್ಯಮಂತ್ರಿಗಳು ಸಮಿತಿ ಸದಸ್ಯರ ಜೊತೆ ಚರ್ಚೆ ನಡೆಸಿ ಅಂತಿಮ ಪಟ್ಟಿ ಸಿದ್ದಪಡಿಸಿದ್ದರು. ನೇಮಕಾತಿ ರದ್ದುಪಡಿಸಲ್ಪಟ್ಟ ನಿಗಮ ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಇನ್ನೂ ಎರಡು-ಮೂರು ದಿನಗಳಲ್ಲಿ ಹೊಸ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ನೇಮಕಾತಿ ಮಾಡುವ ಸಾಧ್ಯತೆ ಇದೆ.

ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ 46 ಅಧ್ಯಕ್ಷರು ಮತ್ತು 6 ಉಪಾಧ್ಯಕ್ಷರ ನೇಮಕಾತಿ ವಾಪಸ್ ಪಡೆದ ರಾಜ್ಯ ಸರ್ಕಾರ

  1. ಎಲ್‌.ಆರ್. ಮಹದೇವಸ್ವಾಮಿ- ಮೃಗಾಲಯ ಪ್ರಾಧಿಕಾರ ಮೈಸೂರು
  2. ರವಿ ಕುಶಾಲಪ್ಪ- ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ
  3. ಮಣಿರಾಜ ಶೆಟ್ಟಿ- ಗೇರು ಅಭಿವೃದ್ಧಿ ನಿಗಮ ಮಂಡಳಿ
  4. ಅನಂತ ಹೆಗಡೆ ಆಶೀಸರ- ಜೀವ ವೈವಿಧ್ಯ ನಿಗಮ ಮಂಡಳಿ
  5. ಮುಕ್ತಾರ್ ಹುಸೇನ್ ಫಕ್ರುದ್ದೀನ್- ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮಂಡಳಿ
  6. ತಮ್ಮೇಶ್ ಗೌಡ – ಕರ್ನಾಟಕ ವಿದ್ಯುತ್ ಕಾರ್ಖಾನೆ
  7. ಸಂತೋಷ್ ರೈ ಬೋಳಿಯಾರ್- ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್
  8. ಡಾ‌. ನಂದೀಶ್ ಹಂಚೆ- ಕನ್ನಡ ಪುಸ್ತಕ ಪ್ರಾಧಿಕಾರ
  9. ಸುನೀಲ್ ಪುರಾಣಿಕ್-ಚಲನಚಿತ್ರ ಅಕಾಡೆಮಿ
  10. ಆನಂದ ಉಪ್ಪಳ್ಳಿ- ಸಾಮಯವ ಕೃಷಿ ಉತ್ಪನ್ನ ಮಟ್ಟದ ಅಧಿಕಾರ ಯುಕ್ತ ಸಮಿತಿ
  11. ಲಿಂಗರೆಡ್ಡಿ ಗೌಡ- ತೊಗರಿ ಅಭಿವೃದ್ಧಿ ಮಂಡಳಿ
  12. ಹನುಮನಗೌಡ ಬೆಳಗುರ್ಕಿ- ಕೃಷಿ ಬೆಲೆ ಆಯೋಗ
  13. ಎನ್‌. ಶಿವಲಿಂಗಯ್ಯ- ಕಾಡಾ, ಮೈಸೂರು
  14. ಶರಣಪ್ಪ ತಳವಾರ- ಕಾಡಾ, ಭೀಮರಾಯನಗುಡಿ
  15. ತಿಪ್ಪೇರುದ್ರಸ್ವಾಮಿ ಬಿ.ಎಚ್.ಎಂ- ಕಾಡಾ, ತುಂಗಭದ್ರಾ ಯೋಜನೆ
  16. ಕಾಂತಿಲಾಲ್ ಕೇವಲಚಂದ್ರ ಬನ್ಸಾಲಿ- ದ್ರಾಕ್ಷಿ ರಸ ಮಂಡಳಿ
  17. ಕೆ.ವಿ. ನಾಗರಾಜ- ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ
  18. ಸವಿತ ವಿಶ್ಬನಾಥ್ ಅಮರ ಶೆಟ್ಟಿ- ರೇಷ್ಮೆ ಮಾರಾಟ ಮಂಡಳಿ
  19. ಎಸ್.ಆರ್. ಗೌಡ- ರೇಷ್ಮೆ ಉದ್ಯಮಗಳ ನಿಗಮ
  20. ಅಶೋಕ್ ಎಸ್. ಅಲ್ಲಾಪುರ- ಲಿಂಬೆ ಅಭಿವೃದ್ಧಿ ಮಂಡಳಿ
  21. ಎಂ. ಜಯದೇವ- ಬೆಂಗಳೂರು- ಮೈಸೂರು ಮೂಲಸೌಕರ್ಯ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರ
  22. ಶರಣು ತಳ್ಳಿಕೇರಿ- ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ
  23. ನಿತೀನ್ ಕುಮಾರ್- ಮೀನುಗಾರಿಕೆ ಅಭಿವೃದ್ಧಿ ನಿಗಮ
  24. ಅಪ್ಪಣ್ಣ- ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ ಲಿಮಿಟೆಡ್
  25. ಕೆ. ಹೇಮಂತ್ ಕುಮಾರ್ ಗೌಡ- ವಸ್ತು ಪ್ರದರ್ಶನ ಪ್ರಾಧಿಕಾರ ಮೈಸೂರು
  26. ಶಶಿಕಲಾ ಟೆಂಗಳಿ- ಮಹಿಳಾ ಅಭಿವೃದ್ಧಿ ಹಾಗೂ ವಿಕಲಚೇತನರ ಸಬಲೀಕರಣ ನಿಗಮ
  27. ಅಂತೋಣಿ ಸಬಾಸ್ಟೀನ್- ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
  28. ಪ್ರಮೀಳಾ ನಾಯ್ಡು- ಮಹಿಳಾ ಆಯೋಗ
  29. ಚಿಕ್ಕಮ್ಮ ಬಸವರಾಜ- ಬಾಲ ಭವನ ಸೊಸೈಟಿ
  30. ಹರಿಕೃಷ್ಣ ಬಂಟ್ವಾಳ- ಕಿಯೋನಿಕ್ಸ್
  31. ಜೀವನ ಮೂರ್ತಿ ಎಸ್.- ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ
  32. ಸಿ. ಮುನಿ ಕೃಷ್ಣ- ಮಾರುಕಟ್ಟೆ ಕನ್ಸಲ್ಟೆಂಟ್ಸ್ ಮತ್ತು ಏಜೆನ್ಸೀಸ್ ಲಿಮಿಟೆಡ್
  33. ಬೇಳೂರು ರಾಘವೇಂದ್ರ ಶೆಟ್ಟಿ-ಕರಕುಶಲ ಅಭಿವೃದ್ಧಿ ನಿಗಮ
  34. ಕೃಷ್ಣಪ್ಪ ಗೌಡ ಎನ್.ಆರ್.- ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
  35. ಎಸ್. ಲಿಂಗಮೂರ್ತಿ- ಮೈಸೂರು ಸ್ಟೇಟ್ ಮಿನರಲ್ ಕಾರ್ಪೊರೇಷನ್
  36. ಬಿ.ಕೆ. ಮಂಜುನಾಥ್- ತೆಂಗಿನ ನಾರಿನ ಅಭಿವೃದ್ಧಿ ನಿಗಮ
  37. ಶಿವಲಿಂಗೇಗೌಡ- ಮೈಸೂರು ಸಕ್ಕರೆ ಕಾರ್ಖಾನೆ
  38. ಹೆಚ್. ಹನುಮಂತಪ್ಪ- ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
  39. ಎಂ. ರಾಮಚಂದ್ರಪ್ಪ- ಕೇಂದ್ರ ಪರಿಹಾರ ಸಮಿತಿ

Published On - 4:29 pm, Tue, 12 July 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ