ಬೆಂಗಳೂರು, ಫೆ.15: ತಮಿಳುನಾಡಿನ ವಿದ್ಯಾರ್ಥಿ(Student)ಗೆ ಬೆಂಗಳೂರಿನಲ್ಲಿ ಐಫೋನ್ ಹೆಸರಲ್ಲಿ ಆಂಡ್ರಾಯ್ಡ್ ಫೋನ್ ನೀಡಿ 60 ಸಾವಿರ ವಂಚಿಸಿದ(Fraud) ಆರೋಪ ಕೇಳಿಬಂದಿದೆ. ಕಳೆದ ಜ.28 ರಂದು ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಸ್ನೇಹಿತರೊಂದಿಗೆ ಸುತ್ತಾಡಲು ಬಂದಾಗ ದಾರಿಯಲ್ಲಿ ಸಿಕ್ಕ ವಿದ್ಯಾರ್ಥಿ ಜೊತೆ ತನ್ನನ್ನು ಮಹಮ್ಮದ್ ಅಪ್ತಾಬ್ ಎಂದು ಪರಿಚಯ ಮಾಡಿಕೊಂಡಿದ್ದ ಅಪರಿಚಿತ. ತನ್ನ ಬಳಿ ಐಫೋನ್ 15 ಪ್ರೊ ಮ್ಯಾಕ್ಸ್ ಇದೆ. ಅದನ್ನು ಕಡಿಮೆ ಬೆಲೆಗೆ ಕೊಡುತ್ತೇನೆ ಎಂದು ದುಂಬಾಲು ಬಿದ್ದಿದ್ದನಂತೆ. ಇದೀಗ ಅಪರಿಚಿತ ವ್ಯಕ್ತಿಯ ಮಾತು ನಂಬಿದ ವಿದ್ಯಾರ್ಥಿ, ಬರೊಬ್ಬರಿ 60 ಸಾವಿರ ರೂ. ಕಳೆದುಕೊಂಡಿದ್ದಾನೆ.
ಅಫ್ತಾಬ್ ಮಾತು ನಂಬಿ ರೆಸ್ಟೋರೆಂಟ್ನಲ್ಲಿ ಕೂತು ಡೀಲ್ಗೆ ಇಳಿದ ವಿದ್ಯಾರ್ಥಿ, ಆತ ತೋರಿಸಿದ್ಸ ಮೊಬೈಲ್ ಒರಿಜಿನಲ್ ಐ ಫೋನ್ ಆಗಿದ್ದು. ಹೀಗಾಗಿ 60 ಸಾವಿರಕ್ಕೆ ಐ ಫೋನ್ ಡೀಲ್ ಕುದುರಿ ಗೂಗಲ್ ಪೇ ಮಾಡಿದ್ದನಂತೆ. ಹಣ ಬಂದ ಬಳಿಕ ತನ್ನ ಬ್ಯಾಗ್ನಲ್ಲಿದ್ದ ಹೊಸ ಐಫೋನ್ ಬಾಕ್ಸ್ ಪೀಸ್ ತೆಗೆದುಕೊಟ್ಟಿದ್ದ. ಆದರೆ, ಬಾಕ್ಸ್ ಪೀಸ್ ಓಪನ್ ಮಾಡಿದಾಗ ಅಲ್ಲಿದ್ದ ಫೋನ್ ಐಫೋನ್ ರೀತಿ ಇದ್ದರೂ ಆಂಡ್ರಾಯ್ಡ್ ಫೋನ್ ಆಗಿತ್ತು. ಆ ಫೋನ್ ಚೆಕ್ ಮಾಡುತ್ತಿದ್ದಂತೆ ಮೊಹಮ್ಮದ್ ಅಫ್ತಾಬ್ ಎಸ್ಕೇಪ್ ಆಗಿದ್ದಾನೆ. ಕಂಗಾಲಾದ ವಿದ್ಯಾರ್ಥಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಸಧ್ಯ ವಂಚನೆ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ:ಚಿತ್ರದುರ್ಗ: ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿ ನೂರಾರು ಜನರಿಂದ 4.79 ಕೋಟಿ ವಂಚನೆ
ಬಾಗಲಕೋಟೆ: ನಗರದ ದಡ್ಡೆನ್ನವರ್ ಕ್ರಾಸ್ಬಳಿ, ಗಾಡಿ ಓವರ್ ಟೇಕ್ ಮಾಡುವ ವಿಚಾರದಲ್ಲಿ ನಡು ರಸ್ತೆಯಲ್ಲಿಯೇ ಕೆಎಸ್ಆರ್ಟಿಸಿ ಬಸ್ ಚಾಲಕ ಮತ್ತು ಟಂಟಂ ವಾಹನದ ಚಾಲಕ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದಾಡಿಕೊಂಡ ಘಟನೆ ನಡೆದಿದೆ. ಈ ಹಿನ್ನಲೆ ಸ್ಥಳದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ಘಟನೆ ಬಾಗಲಕೋಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯರ ಮಧ್ಯಸ್ಥಿಕೆಯಿಂದ ಜಗಳ ತಣ್ಣಗಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:30 pm, Thu, 15 February 24