ಬಿಬಿಎಂಪಿ ವ್ಯಾಪ್ತಿಯಲ್ಲಿವೆ ತೆರಿಗೆ ಕಟ್ಟದ 7 ಲಕ್ಷ ಆಸ್ತಿಗಳು; ಇ-ಖಾತಾ ಮೂಲಕ ಬಾಕಿ ತೆರಿಗೆ ವಸೂಲಿಗೆ ಪ್ಲಾನ್

| Updated By: ಆಯೇಷಾ ಬಾನು

Updated on: Jun 26, 2024 | 7:05 AM

ನಟ ದರ್ಶನ್ ಆ್ಯಂಡ್ ಗ್ಯಾಂಗ್, ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ ಪಟ್ಟಣಗೆರೆಯ ಶೆಡ್​ಗೆ ಇತ್ತೀಚೆಗಷ್ಟೇ ಪಾಲಿಕೆ ನೋಟಿಸ್ ನೀಡಿತ್ತು. 15 ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಶೆಡ್ ಗೆ ನೋಟಿಸ್ ನೀಡಿದ್ದ ಪಾಲಿಕೆ, ಇದೀಗ ಇದೇ ರೀತಿ ತೆರಿಗೆ ವಂಚನೆ ಮಾಡಿರೋ 7 ಲಕ್ಷ ಆಸ್ತಿಗಳನ್ನ ಪತ್ತೆ ಹಚ್ಚಿದೆ. ಖಾತೆ ಇಲ್ಲ ಅನ್ನೋ ನೆಪವೊಡ್ಡಿ ತೆರಿಗೆ ಪಾವತಿಸದೇ ಇರೋದರಿಂದ ಪಾಲಿಕೆಗೆ ನೂರಾರು ಕೋಟಿ ನಷ್ಟ ಉಂಟಾಗ್ತಿದ್ದು, ತೆರಿಗೆ ಬಾಕಿದಾರರಿಗೆ ಬಿಸಿ ಮುಟ್ಟಿಸೋಕೆ ಮುಂದಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿವೆ ತೆರಿಗೆ ಕಟ್ಟದ 7 ಲಕ್ಷ ಆಸ್ತಿಗಳು; ಇ-ಖಾತಾ ಮೂಲಕ ಬಾಕಿ ತೆರಿಗೆ ವಸೂಲಿಗೆ ಪ್ಲಾನ್
ಬಿಬಿಎಂಪಿ
Follow us on

ಬೆಂಗಳೂರು, ಜೂನ್.26: ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಆದೇಶ ನೀಡಿದ್ದೆ ತಡ, ಪಾಲಿಕೆ ವ್ಯಾಪ್ತಿಯಲ್ಲಿ ಬಾಕಿ ಉಳಿದ ಆಸ್ತಿ ತೆರಿಗೆ ವಸೂಲಿಗಿಳಿದ ಪಾಲಿಕೆ ಕೋಟ್ಯಂತರ ರೂಪಾಯಿ ತೆರಿಗೆ (Tax) ಬಾಕಿ ವಸೂಲಿ ಮಾಡಿತ್ತು. ನೋಟಿಸ್ ನೀಡೋ ಮೂಲಕ, ಆಸ್ತಿ ಸೀಜ್ ಮಾಡೋ ಮೂಲಕ ತೆರಿಗೆ ಬಾಕಿದಾರರಿಗೆ ಬಿಸಿ ಮುಟ್ಟಿಸಿತ್ತು. ಪಾಲಿಕೆ ಚಾಪೆ ಕೆಳಗೆ ತೂರಿದ್ರೆ, ಇದೀಗ ಕೆಲ ಆಸ್ತಿಗಳ ಮಾಲೀಕರು ರಂಗೋಲಿ ಕೆಳಗೆ ತೂರಿದ್ದಾರೆ. ತೆರಿಗೆ ವಸೂಲಿಗಿಳಿದಿದ್ದ ಪಾಲಿಕೆ ಕಣ್ಣುತಪ್ಪಿಸಿದ್ದ ಬರೋಬ್ಬರಿ 7 ಲಕ್ಷ ಆಸ್ತಿಗಳು ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿರೋದು ಇದೀಗ ಬೆಳಕಿಗೆ ಬಂದಿದೆ.

ಇನ್ನು ಇತ್ತೀಚೆಗಷ್ಟೇ ಪಟ್ಟಣಗೆರೆಯ ಜಯಣ್ಣ ಮಾಲೀಕತ್ವದ ಶೆಡ್ ನಿಂದ ಬರೋಬ್ಬರಿ 15 ವರ್ಷದ ತೆರಿಗೆ ಬಾಕಿ ಇದ್ದಿದ್ದನ್ನ ಪತ್ತೆಹಚ್ಚಿದ್ದ ಪಾಲಿಕೆ. ಇದೀಗ ಇದೇ ರೀತಿಯ 7 ಲಕ್ಷ ಪ್ರಾಪರ್ಟಿಗಳು ತೆರಿಗೆ ಕಟ್ಟದೇ, ಖಾತೆಯನ್ನೂ ಮಾಡಿಸದೇ ಕಳ್ಳಾಟವಾಡ್ತಿರೋದು ಬಯಲಾಗಿದೆ. ಇದೀಗ ಈ ರೀತಿ ತೆರಿಗೆ ಕಟ್ಟದೇ ಉಳಿದವರಿಗೆ ಬಿಸಿ ಮುಟ್ಟಿಸಲು ಸಜ್ಜಾಗಿರೋ ಪಾಲಿಕೆ, ಇ-ಖಾತೆ ಮಾಡಿಸಿ ಬಳಿಕ ತೆರಿಗೆ ವಸೂಲಿ ಮಾಡೋಕೆ ಸಜ್ಜಾಗಿದೆ.

ಇದನ್ನೂ ಓದಿ: ಚಿಕಿತ್ಸೆಗೆ ಬಂದ ವೃದ್ಧಗೆ ಮೆಹಂದಿ ಕೋನ್‌ ʼಔಷಧಿʼ: ಸ್ಪಷ್ಟನೆ ನೀಡಿದ ಹಾಸನ ವೈದ್ಯಾಧಿಕಾರಿ

ಸದ್ಯ ಈಗ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಂದಾಗಿ ಪಾಲಿಕೆ ಬೊಕ್ಕಸಕ್ಕೆ ವಾರ್ಷಿಕವಾಗಿ ಬರೋಬ್ಬರಿ 1.50 ಸಾವಿರ ಕೋಟಿ ಆದಾಯ ನಷ್ಟವಾಗ್ತಿದೆ. ಇತ್ತ ಚುನಾವಣೆ ಹಿನ್ನೆಲೆ ಸೈಲೆಂಟ್ ಆಗಿದ್ದ ಪಾಲಿಕೆ, ಈಗ ಈ ರೀತಿ ತೆರಿಗೆ ಬಾಕಿದಾರರಿಗೆ ಬಿಸಿ ಮುಟ್ಟಿಸಲಿದ್ದು, ಇದರಿಂದ ಪಾಲಿಕೆಗೆ ವಾರ್ಷಿಕವಾಗಿ 1 ಸಾವಿರ ಕೋಟಿ ಆದಾಯದ ನೀರಿಕ್ಷೆಯಿದೆ.

ಒಟ್ಟಿನಲ್ಲಿ ಈಗಾಗಲೇ ತೆರಿಗೆ ಬಾಕಿದಾರರಿಗೆ ಒನ್ ಟೈಮ್ ಸೆಟಲ್ ಮೆಂಟ್, ಕಾಲಾವಕಾಶ ನೀಡಿದ್ದ ಪಾಲಿಕೆ, ಇದೀಗ ಏನೇ ಮಾಡಿದ್ರು ಜಗ್ಗದ ತೆರಿಗೆ ಕಳ್ಳರಿಗೆ ಇ-ಖಾತೆ ಮೂಲಕ ವಸೂಲಿಗೆ ಪಾಲಿಕೆ ಮುಂದಾಗಿದ್ದು, ಆಸ್ತಿ ತೆರಿಗೆ ಬಾಕಿದಾರರು ಇನ್ನಾದ್ರೂ ಪಾಲಿಕೆಗೆ ತೆರಿಗೆ ಪಾವತಿಸ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ