ಬೆಂಗಳೂರು, ಜೂನ್.06: ವೈದ್ಯರ ನಿರ್ಲಕ್ಷ್ಯಕ್ಕೆ 7 ವರ್ಷದ ಕಂದಮ್ಮ ಬಲಿಯಾಗಿರುವ (Death) ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಪರೇಷನ್ಗೆ ಅಂತಾ ನೀಡಿದ ಅನಸ್ತೇಷಿಯಾದಿಂದ (Anesthesia) ಮಗು ಮೃತಪಟ್ಟಿದೆ ಎಂದು ಆರೋಪಿಸಿ ಸಂಪಂಗಿ ರಾಮನಗರದ ಸಿಂಧ್ಯಾ ಆಸ್ಪತ್ರೆಯ (Sindhiya Hospital) ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಮಗು ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ವೈದ್ಯರು ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರು ಕಣ್ಣೀರಿಟ್ಟಿದ್ದಾರೆ.
ಆಡನ್ ಮೈಕಲ್ ಎಂಬ 7 ವರ್ಷದ ಬಾಲಕನಿಗೆ ಊಟ ಮಾಡುವಾಗ ಗಂಟಲು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಪೋಷಕರು ಮಗನನ್ನು ಸಿಂಧ್ಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ್ದರು. ಈ ವೇಳೆ ವೈದ್ಯರು ಮಗುವಿಗೆ ಆಪರೇಷನ್ ಮಾಡಬೇಕು ಎಂದಿದ್ದು ಆಪರೇಷನ್ ವೇಳೆ ಡಾ.ಶ್ವೇತಾ ಪೈ ಎಂಬುವವರು ಬಾಲಕನಿಗೆ ಅನೆಸ್ತೇಷಿಯಾ ಕೊಟ್ಟಿದ್ದರು. ಅನಸ್ತೇಷಿಯಾ ನೀಡಿದ ಬಳಿಕ ಬಾಲಕ ಸಾವನ್ನಪ್ಪಿದ್ದಾನೆ. ಆದರೆ ಈ ವಿಷಯವನ್ನು ವೈದ್ಯರು ಪೋಷಕರಿಗೆ ತಿಳಿಸಿಲ್ಲ. ಬದಲಿಗೆ ಮಗುವಿಗೆ ಹೃದಯ ಸಮಸ್ಯೆಯಿದೆ ಅಂತಾ ನಾಟಕವಾಡಿದ್ದಾರೆ. ಈ ವಿಚಾರ ಪೋಷಕರಲ್ಲಿ ಅನುಮಾನ ಹುಟ್ಟಿಹಾಕಿದ್ದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಿಶೀಲನೆ ವೇಳೆ ಮಗು ಮೃತಪಟ್ಟಿದ್ದು ಬಯಲಾಗಿದೆ.
ಇದನ್ನೂ ಓದಿ: ಚುನಾವಣೆ ಫಲಿತಾಂಶದ ಬಳಿಕ ಪಟಾಕಿ ಸಿಡಿಸಿದ್ದಕ್ಕೆ ಬಜರಂಗದಳ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತನಿಂದ ಹಲ್ಲೆ ಆರೋಪ
ಅನಸ್ತೇಷಿಯಾ ನೀಡಿದ ಬಳಿಕ 3 ಇಂಜೆಕ್ಷನ್ ಕೊಟ್ಟಿದ್ದು ಓವರ್ ಡೋಸ್ ಆಗಿ ನನ್ನ ಮಗ ಮೃತಪಟ್ಟಿದ್ದಾನೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ಮಗು ಸತ್ತಿದೆ ಅಂತಾ ಕಿಡಿಕಾರಿದ್ದಾರೆ. ನಮಗಾದ ನೋವು ಯಾರಿಗೂ ಆಗಬಾರದು, ನ್ಯಾಯ ಕೊಡಿಸಿ ಅಂತಾ ಅಳಲು ತೋಡಿಕೊಂಡಿದ್ದಾರೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಮಗು ಕಳೆದುಕೊಂಡು ತಾಯಿ, ತಂದೆ ಕಣ್ಣೀರಾಕ್ತಿದ್ದಾರೆ. ಮಗು ಸಾವನ್ನಪ್ಪಿದ ವಿಷಯ ತಿಳಿದು ವೈದ್ಯರು ಎಸ್ಕೇಪ್ ಆಗಿದ್ದಾರೆ.
ಸಾಲದ ಹಣ ನೀಡದೇ ರವಿ ಸುನಂದಮ್ಮನನ್ನು ಕೊಲೆ ಮಾಡಿದ್ದಾನೆ. ಬಳಿಕ ಪಕ್ಕದ ಜಮೀನಿನಲ್ಲಿ ಶವ ಹೂತಿಟ್ಟು ಆರೋಪಿ ಪರಾರಿಯಾಗಿದ್ದ. ರಾತ್ರಿಯಾದ್ರೂ ಸುನಂದಮ್ಮ ಮನೆಗೆ ಹಿಂತಿರಿಗರಲಿಲ್ಲ. ಇದ್ರಿಂದ ಮನೆಯವರು ಕನಕಪುರ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅತ್ತ ವೆಂಕಟೇಶ್ ನಾಯಕ ಎಂಬುವವರ ತೋಟದಲ್ಲಿ ಗುದ್ದಲಿ ಕಾಣುತ್ತಿರಲಿಲ್ಲ. ತೋಟದ ಮೂಲೆಯಲ್ಲಿ ಗುದ್ದಲಿ, ಅರ್ಧಂಬರ್ಧ ತೋಡಿದ ಗುಂಡಿಯಲ್ಲಿ ಶವದ ಕೂದಲು ಪತ್ತೆಯಾಗಿತ್ತು. ಆಗ ಗುಂಡಿ ತೋಡಿದಾಗ ಸುನಂದಮ್ಮನ ಶವ ಪತ್ತೆಯಾಗಿತ್ತು. ಈಗ ಆರೋಪಿ ಪತ್ತೆಗಾಗಿ ಕನಕಪುರ ಪೊಲೀಸರು ಬಲೆ ಬೀಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ