ಬೆಂಗಳೂರಿನಲ್ಲಿ ಮೊಬೈಲ್​ ಶಾಪ್​ ಮಾಲೀಕನ ಮೇಲೆ ಹಲ್ಲೆ ಪ್ರಕರಣ; ಹಲ್ಲೆಗೊಳಗಾದವನ ವಿರುದ್ಧವೂ ದಾಖಲಾಯ್ತು ಎಫ್​ಐಆರ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 05, 2024 | 8:57 AM

ಗರತ್​ಪೇಟೆ(Nagarathpet)ಯಲ್ಲಿ ಮಾ.17ರಂದು ಮೊಬೈಲ್​ ಶಾಪ್​ ಮಾಲೀಕನ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಮುಖೇಶ್ ವಿರುದ್ಧವೂ ಎಫ್​ಐಆರ್(FIR) ದಾಖಲು ಮಾಡಲಾಗಿದ್ದು, ಕೋರ್ಟ್ ಅನುಮತಿ ಪಡೆದು ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

ಬೆಂಗಳೂರಿನಲ್ಲಿ ಮೊಬೈಲ್​ ಶಾಪ್​ ಮಾಲೀಕನ ಮೇಲೆ ಹಲ್ಲೆ ಪ್ರಕರಣ; ಹಲ್ಲೆಗೊಳಗಾದವನ ವಿರುದ್ಧವೂ ದಾಖಲಾಯ್ತು ಎಫ್​ಐಆರ್
ಬೆಂಗಳೂರಿನಲ್ಲಿ ಮೊಬೈಲ್​ ಶಾಪ್​ ಮಾಲೀಕನ ಮೇಲೆ ಹಲ್ಲೆ
Follow us on

ಬೆಂಗಳೂರು, ಏ.05: ನಗರತ್​ಪೇಟೆ(Nagarathpet)ಯಲ್ಲಿ ಮಾ.17ರಂದು ಮೊಬೈಲ್​ ಶಾಪ್​ ಮಾಲೀಕನ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಮುಖೇಶ್ ವಿರುದ್ಧವೂ ಎಫ್​ಐಆರ್(FIR) ದಾಖಲು ಮಾಡಲಾಗಿದೆ. ಕೋರ್ಟ್ ಅನುಮತಿ ಪಡೆದು ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಘಟನೆ ಬಳಿಕ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಲ್ಲಿ ಒಬ್ಬನಾದ ಸುಲೇಮಾನ್ ಎಂಬಾತನ ತಾಯಿ ಅವರು ಮುಖೇಶ್ ವಿರುದ್ಧ ಪ್ರತಿ ದೂರು ನೀಡಿದ್ದರು. ನಂತರ ದೂರು ಆಧರಿಸಿ ಪೊಲೀಸರು ಎನ್​ಸಿಆರ್ ದಾಖಲಿಸಿಕೊಂಡಿದ್ದರು. ಇದೀಗ ಕೋರ್ಟ್ ಅನುಮತಿ ಪಡೆದು ಮುಖೇಶ್ ವಿರುದ್ಧ FIR ದಾಖಲು ಮಾಡಲಾಗಿದೆ.

ದೂರಿನಲ್ಲೇನಿದೆ?

ಮುಖೇಶ್ ಮೂರರಿಂದ ನಾಲ್ಕು ದಿನಗಳಿಂದ ಜೊರಾಗಿ ಸೌಂಡ್ ಸಿಸ್ಟಂ ಹಾಕಿದ್ದ. ಸೌಂಡ್ ಸಿಸ್ಟಂನಿಂದ ರಂಜಾನ್ ಹಿನ್ನಲೆ ಪ್ರಾರ್ಥನೆ ಮಾಡುವ 3 ಸಾವಿರ ಮಂದಿಗೆ ತೊಂದರೆಯಾಗಿದೆ. ಹೀಗಾಗಿ ಏಕೆ ಸೌಂಡ್ ಸಿಸ್ಟಂ ಜೋರಾಗಿ ಕೊಟ್ಟಿದ್ದೀಯ ಎಂದು ನನ್ನ ಮಗ ಹಾಗೂ ಆತನ ಸ್ನೇಹಿತರು ಹೇಳಿದಕ್ಕೆ ಮುಖೇಶ್​ನಿಂದ ಐವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಘಟನೆಯ ಮರುದಿನವೇ ಬಂಧಿತ ಸುಲೇಮಾನ್ ತಾಯಿ ದೂರು ನೀಡಿದ್ದರು.

ಇದನ್ನೂ ಓದಿ:ನಗರತ್​ಪೇಟೆ ಗಲಾಟೆ, ಹನುಮಭಕ್ತರ ಪ್ರತಿಭಟನೆಯಲ್ಲಿ ಶಾಸಕ ಸುರೇಶ್ ಕುಮಾರ್​ರನ್ನು ಎಳೆದಾಡಿದ ಪೊಲೀಸರು

ಘಟನೆ ವಿವರ

ಕಳೆದ ಮಾ.17 ರಂದು ನಗರತ್​ಪೇಟೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲಿಸಾ ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಇದು ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟೇ ಅಲ್ಲ, ಇದನ್ನು ಖಂಡಿಸಿ ಘಟನಾ ಸ್ಥಳದಲ್ಲಿ ಹನುಮ ಭಕ್ತರು ರ್‍ಯಾಲಿ ನಡೆಸಿದ್ದರು. ಈ ರ್‍ಯಾಲಿಯಲ್ಲಿ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ ರಾಮಮೂರ್ತಿ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ , ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್ ಹರೀಶ್, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಸೇರಿದಂತೆ ಶಾಸಕರು ಹಾಗೂ ಹಲವು ನಾಯಕರು ಮತ್ತು ಹನುಮ ಭಕ್ತರು ಪಾಲ್ಗೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:52 am, Fri, 5 April 24