ನಗರ್ತ​ಪೇಟೆಯಲ್ಲಿ ಪ್ರತಿಭಟನೆ​: ಶೋಭಾ, ತೇಜಸ್ವಿ ಸೂರ್ಯ ಸೇರಿ 44 ಜನರ ವಿರುದ್ಧ FIR

ನಗರ್ತ​ಪೇಟೆಯಲ್ಲಿ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪ ಹಿನ್ನಲೆ ಸಂಸದರಾದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಮತ್ತು ಶಾಸಕ ರಾಮಮೂರ್ತಿ ಸೇರಿ 44 ಜನರ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್​ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲು ಮಾಡಲಾಗಿದೆ. ಪಿಐ ಹನುಮಂತ ಭಜಂತ್ರಿ ಎಂಬುವವರಿಂದ ದೂರು ನೀಡಲಾಗಿದೆ.

ನಗರ್ತ​ಪೇಟೆಯಲ್ಲಿ ಪ್ರತಿಭಟನೆ​: ಶೋಭಾ, ತೇಜಸ್ವಿ ಸೂರ್ಯ ಸೇರಿ 44 ಜನರ ವಿರುದ್ಧ FIR
ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Mar 21, 2024 | 6:30 PM

ಬೆಂಗಳೂರು, ಮಾರ್ಚ್​​ 21: ನಗರ್ತ​ಪೇಟೆಯಲ್ಲಿ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪ ಹಿನ್ನಲೆ ಸಂಸದರಾದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಮತ್ತು ಶಾಸಕ ರಾಮಮೂರ್ತಿ ಸೇರಿ 44 ಜನರ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್​ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ (FIR) ದಾಖಲು ಮಾಡಲಾಗಿದೆ. ಹಲಸೂರು ಗೇಟ್ ಠಾಣೆ ಪಿಐ ಹನುಮಂತ ಭಜಂತ್ರಿ ದೂರು ಆಧರಿಸಿ ಐಪಿಸಿ ಸೆಕ್ಷನ್ 143, 149, 188, 283, 290, 268ರಡಿ ಎಫ್​ಐಆರ್ ದಾಖಲಿಸಲಾಗಿದೆ. ಹೈಕೋರ್ಟ್ ಆದೇಶದಂತೆ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುವಂತಿಲ್ಲ. ಆದರೂ ಸಹ ಮುಖೇಶ್ ಹಲ್ಲೆ ಸಂಬಂಧ ಪ್ರತಿಭಟನೆ ಮಾಡಲಾಗಿತ್ತು.

ಬೆಂಗಳೂರಿನ ನಗರ್ತ ಪೇಟೆಯಲ್ಲಿ ಮೊಬೈಲ್ ಶಾಪ್ ಮಾಲೀಕನ ಮೇಲೆ ಹಲ್ಲೆ ಪ್ರಕರಣ ರಾಜಕೀಯ ಸ್ವರೂಪಕ್ಕೆ ತಿರುಗಿದೆ. ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ಪ್ರತಿಭಟನೆ ನಡೆಸಿದ್ದರು. ಬಳಿಕ ನಗರ್ತ ಪೇಟೆಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಭೇಟಿ ನೀಡಿದ್ದು ಈ ವೇಳೆ ದೊಡ್ಡ ಹೈಡ್ರಾಮಾವೇ ನಡೆದಿತ್ತು.

ಇದನ್ನೂ ಓದಿ: ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಹಲ್ಲೆ ಪ್ರಕರಣ: ಹಿಂದೂ ಕಾರ್ಯಕರ್ತರಿಂದ ರ್‍ಯಾಲಿ, ನಗರತ್​ಪೇಟೆಯಲ್ಲಿ ಉದ್ವಿಗ್ನ ಪರಿಸ್ಥಿತಿ

ಹಲ್ಲೆ ಖಂಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ನಿನ್ನೆ ನಗರ್ತಪೇಟೆಯಲ್ಲಿ ಹನುಮಾನ್ ಚಾಲಿಸ್ ರ‍್ಯಾಲಿಗೆ ಕರೆ ನೀಡಿದ್ದರು. ಅಂಗಡಿಗಳನ್ನ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಪ್ರತಿಭಟಿಸಿದ್ದರು. ಹಲ್ಲೆಗೊಳಗಾದ ಮುಖೇಶ್ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ.

ಇದನ್ನೂ ಓದಿ: ಶೋಭಾಗೆ ಸಂಕಷ್ಟ: ರಾಮೇಶ್ವರಂ ಕೆಫೆ ಸ್ಫೋಟದ ಹಿಂದೆ ತಮಿಳಿಗರೆಂಬ ಹೇಳಿಕೆ ವಿರುದ್ಧ ಡಿಎಂಕೆ ದೂರು

ಚುನಾವಣೆ ನೀತಿ ಸಂಹಿತೆಯಿಂದಾಗಿ, ಪ್ರತಿಭಟನೆಗೆ ಅವಕಾಶ ಇಲ್ಲ. ಹೀಗಾಗಿ ಮುಖೇಶ್ ಸೇರಿದಂತೆ ಕೆಲವರನ್ನ ಪೊಲೀಸರು ವಶಕ್ಕೆ ಪಡೆಯಲು ಮುಂದಾದ್ದರು. ಇದೇ ವೇಳೆ ಸ್ಥಳಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಹ ಆಗಮಿಸಿದ್ರು. ಈ ವೇಳೆ ಸೇರಿದ ಜನರ ಘೋಷಣೆ, ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪಕ್ಕೆ ತಿರುಗಿತ್ತು. ಈ ವೇಳೆ ಕಾಂಗ್ರೆಸ್​ ವಿರುದ್ಧ ಗುಡುಗುತ್ತಾ ಯಾರೋ ತಮಿಳುನಾಡಿನಿಂದ ಬರ್ತಾರೆ ನಮ್ಮ ಕೆಫೆಯಲ್ಲಿ ಬಾಂಬ್​ ಇಡ್ತಾರೆ ಅಂತ ಎಂದು ಶೋಭಾ ಕರಂದ್ಲಾಜೆ ಹೇಳಿದ್ದರು. ಇದೇ ಮಾತು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.

ಶೋಭಾ ಕರಂದ್ಲಾಜೆ ಅಂಡ್ ಟೀಂ ಅನ್ನ ಪೊಲೀಸರು ವಶಕ್ಕೆ ಪಡೀತಿದ್ದಂತೆ, ಸಂಸದ ತೇಜಸ್ವಿ ಸೂರ್ಯ ಸಹ ಸ್ಥಳಕ್ಕೆ ಆಗಮಿಸಿದ್ರು. ಆಗಲೂ ಹೈಡ್ರಾಮಾ ನಡೀದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:13 pm, Thu, 21 March 24

ತಾಜಾ ಸುದ್ದಿ
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ಸೈಟು ಹಂಚಿಕೆ: ಮುಡಾ ಆಯುಕ್ತರನ್ನು ಭೇಟಿ ಮಾಡಿದ ಮೈಸೂರು ಕಾಂಗ್ರೆಸ್ ಮುಖಂಡರು
ಸೈಟು ಹಂಚಿಕೆ: ಮುಡಾ ಆಯುಕ್ತರನ್ನು ಭೇಟಿ ಮಾಡಿದ ಮೈಸೂರು ಕಾಂಗ್ರೆಸ್ ಮುಖಂಡರು
ಭೈರತಿ ಸುರೇಶ್​ರನ್ನು ಮನಬಂದಂತೆ ಬೈದಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್
ಭೈರತಿ ಸುರೇಶ್​ರನ್ನು ಮನಬಂದಂತೆ ಬೈದಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್
ಚನ್ನಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ನಾನೇ ಮಾಡಿದ್ದು: ಕುಮಾರಸ್ವಾಮಿ
ಚನ್ನಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ನಾನೇ ಮಾಡಿದ್ದು: ಕುಮಾರಸ್ವಾಮಿ