Bengaluru Weather: ಸೆಖೆಯೋ ಸೆಖೆ! ಗರಿಷ್ಠ ಉಷ್ಣಾಂಶದಲ್ಲಿ ದೆಹಲಿ, ಮುಂಬೈಯನ್ನೂ ಮೀರಿಸಲಿದೆ ಬೆಂಗಳೂರು

ಬೆಂಗಳೂರಿನಲ್ಲಿ ಬಿಸಿಲಿನ ಝಳ ಈ ವರ್ಷ ಜನರನ್ನು ಹೈರಾಣಾಗಿಸಿದೆ. ನೀರಿನ ಬಿಕ್ಕಟ್ಟು ಒಂದೆಡೆಯಾದರೆ, ಬೇಸಗೆಯ ತಾಪಮಾನ ಐದು ವರ್ಷಗಳ ಗರಿಷ್ಠ ಮಟ್ಟ ತಲುಪಿದೆ. ಗರಿಷ್ಠ ತಾಪಮಾನದಲ್ಲಿ ಸಿಲಿಕಾನ್ ಸಿಟಿ ಈಗ ಮುಂಬೈ, ದೆಹಲಿಯನ್ನೂ ಮೀರಿಸುವ ಹಂತಕ್ಕೆ ತಲುಪಿದೆ.

Bengaluru Weather: ಸೆಖೆಯೋ ಸೆಖೆ! ಗರಿಷ್ಠ ಉಷ್ಣಾಂಶದಲ್ಲಿ ದೆಹಲಿ, ಮುಂಬೈಯನ್ನೂ ಮೀರಿಸಲಿದೆ ಬೆಂಗಳೂರು
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Apr 05, 2024 | 10:46 AM

ಬೆಂಗಳೂರು, ಏಪ್ರಿಲ್ 5: ಒಂದು ಕಾಲದಲ್ಲಿ ಆಹ್ಲಾದಕರ ವಾತಾವರಣ ಹಾಗೂ ಹವಾಮಾನದಿಂದಲೇ ಹೆಸರುವಾಸಿಯಾಗಿದ್ದ ಬೆಂಗಳೂರು (Bengaluru) ನಗರ ಈಗ ಬಿಸಿಲಿನ ಝಳಕ್ಕೆ ಬಾಡಿಹೋಗಿದೆ! ಈ ವರ್ಷ ಗರಿಷ್ಠ ತಾಪಮಾನದಲ್ಲಿ ಮುಂಬೈ ಹಾಗೂ ದೆಹಲಿಯನ್ನೂ ಮೀರಿಸುವುದು ಸನ್ನಿಹಿತವಾಗಿದೆ. ಕಳೆದ ಐದು ವರ್ಷಗಳಲ್ಲೇ ಗರಿಷ್ಠ ತಾಪಮಾನ (Maximum Temperature) ಬೆಂಗಳೂರಿನಲ್ಲಿ ಈ ವರ್ಷ ದಾಖಲಾಗಿದೆ. ಜತೆಗೆ, ದಶಕಗಳಲ್ಲೇ ಭೀಕರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಳೆದ ಮಂಗಳವಾರ ಬೆಂಗಳೂರಿನ ಶಾಪಮಾನವು 37.2 ಡಿಗ್ರಿ ಸೆಲ್ಸಿಯಸ್​​ಗೆ ಏರಿತು. ಇದು ಸುಮಾರು ಹತ್ತು ವರ್ಷಗಳಲ್ಲಿ ಎರಡನೇ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾದ ದಿನವಾಗಿದೆ.

ಈ ಬೇಸಿಗೆಯಲ್ಲಿ ಕರ್ನಾಟಕದ ಉತ್ತರ ಭಾಗಗಳು ಉಷ್ಣಮಾರುತದ ಪ್ರಭಾವವನ್ನು ಮೊದಲು ಅನುಭವಿಸಿದರೆ, ಬೆಂಗಳೂರು ಸೇರಿದಂತ ಇಡೀ ರಾಜ್ಯವು ಈಗ ತಾಪಮಾನದ ಮಟ್ಟದಲ್ಲಿ ನಿರಂತರ ಏರಿಕೆಯನ್ನು ಅನುಭವಿಸುತ್ತಿದೆ. ಮುಂದಿನ ಕೆಲವು ದಿನಗಳವರೆಗೆ (ಏಪ್ರಿಲ್ 4-7) ನಗರದ ಹಗಲಿನ ತಾಪಮಾನವು ಸುಮಾರು 37 ಡಿಗ್ರಿ ಸೆಲ್ಸಿಯಸ್​​ಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಇದು ಮುಂಬೈಗಿಂತಲೂ ಹೆಚ್ಚಿನ ಗರಿಷ್ಠ ಉಷ್ಣಾಂಶವಾಗಿದೆ. ಜತೆಗೆ ನವದೆಹಲಿಯ ಶಾಖವನ್ನೂ ಮೀರಿಸಿದ್ದಾಗಿದೆ.

ರಾತ್ರಿಯ ವೇಳೆ ತುಸು ಉಷ್ಣಾಂಶ ಕಡಿಮೆಯಾದರೂ ಸುಮಾರು 22 ಡಿಗ್ರಿ ಸೆಲ್ಸಿಯಸ್​​ ಉಷ್ಣಾಂಶ ಇರಲಿದೆ. ಬೆಂಗಳೂರಿನ ಹಗಲಿನ ತಾಪಮಾನವು ಈಗ ಬೇಸಿಗೆಯಲ್ಲಿ ಚೆನ್ನೈಯ ತಾಪಮಾನಕ್ಕೆ ಹೊಂದಿಕೆಯಾಗುವಂತಾಗಿದೆ. ಎತನ್ಮಧ್ಯೆ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಂತಹ ನಗರಗಳು 40 ಡಿಗ್ರಿ ಸೆಲ್ಸಿಯಸ್​​ ಗಡಿಯ ದಾಟುವ ಹಾದಿಯಲ್ಲಿವೆ. ಹೈದರಾಬಾದ್ ಈಗಾಗಲೇ ಈ ಮಿತಿಯನ್ನು ದಾಟಿದೆ.

ಉತ್ತರದ ಕರ್ನಾಟಕದ ಜಿಲ್ಲೆಗಳಾದ ಬಾಗಲಕೋಟೆ ಮತ್ತು ವಿಜಯಪುರಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಶಾಖದ ವರಿಸ್ಥಿತಿಯು ಕಡಿಮೆ ಇದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ತಾನಮಾನವು 40-42 ಡಿಗ್ರಿ ಸೆಲ್ಸಿಯಸ್​​ಗೆ ತಲುಪುವ ಸಾಧ್ಯತೆ ಇದೆ. ಗುರುವಾರದ (ಏಪ್ರಿಲ್ 4-5) ವರೆಗೆ ಬಾಗಲಕೋಟೆ ಮತ್ತು ವಿಜಯಪುರ ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಉಷ್ಣ ಮಾರುತದ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದೆ.

ಇದನ್ನೂ ಓದಿ: ಕರ್ನಾಟಕದ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಏಪ್ರಿಲ್ 8ರ ಬಳಿಕ ಮಳೆ

ಶನಿವಾರದಿಂದ ಮಂಗಳವಾರದವರೆಗೆ (ಏಪ್ರಿಲ್ 6-10) ಬೆಂಗಳೂರನ್ನು ಒಳಗೊಂಡಂತೆ ದಕ್ಷಿಣ ಒಳನಾಡಿನ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ಹೇಳಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:44 am, Fri, 5 April 24

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ