ಬೆಂಗಳೂರಿನಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಪ್ರಜೆ ಅರೆಸ್ಟ್

ವಾಟ್ಸಾಪ್ ಮೂಲಕ ಗ್ರಾಹಕರನ್ನ ಸಂಪರ್ಕಿಸಿ ನಂತರ ಅವರಿಂದ ಹಣ ಪಡೆದು ಒಂದು ಸ್ಥಳವನ್ನು ಫಿಕ್ಸ್ ಮಾಡಿ. ಆ ಜಾಗದಲ್ಲಿ MDMA ಡ್ರಗ್ಸ್ ಇಟ್ಟು ಅಲ್ಲಿಂದ ಪರಾರಿಯಾಗುತ್ತಿದ್ದ ನೈಜೀರಿಯಾ ಮೂಲದ ಪ್ರಜೆಯನ್ನು ಅಮೃತಹಳ್ಳಿ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಪ್ರಜೆ ಅರೆಸ್ಟ್
ಡೇನಿಯಲ್‌
Follow us
Prajwal Kumar NY
| Updated By: ಆಯೇಷಾ ಬಾನು

Updated on: Nov 19, 2023 | 11:17 AM

ಬೆಂಗಳೂರು, ನ.19: ಬೆಂಗಳೂರಿನಲ್ಲಿ ಡ್ರಗ್ಸ್‌ (Drugs) ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಪ್ರಜೆಯನ್ನು (Drug Peddler) ಅಮೃತಹಳ್ಳಿ ಪೊಲೀಸರು (Amruthahalli Police) ಅರೆಸ್ಟ್‌ ಮಾಡಿದ್ದಾರೆ. ಡೇನಿಯಲ್‌ ಬಂಧಿತ ಆರೋಪಿ. ಈತ ವಾಟ್ಸಾಪ್ ಮೂಲಕ ಗ್ರಾಹಕರನ್ನ ಸಂಪರ್ಕಿಸಿ ನಂತರ ಅವರಿಂದ ಹಣ ಪಡೆದು ಒಂದು ಸ್ಥಳವನ್ನು ಫಿಕ್ಸ್ ಮಾಡಿ. ಆ ಜಾಗದಲ್ಲಿ MDMA ಡ್ರಗ್ಸ್ ಇಟ್ಟು ಅಲ್ಲಿಂದ ಪರಾರಿಯಾಗುತ್ತಿದ್ದ. ಬಳಿಕ ಗ್ರಾಹಕರು ಆ ಜಾಗಕ್ಕೆ ಬಂದು ಡ್ರಾಗ್ಸ್ ತೆಗೆದುಕೊಂಡು ಹೋಗುತ್ತಿದ್ದರು. ಸದ್ಯ ಈಗ ಈ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಡೇನಿಯಲ್‌ ವಾಟ್ಸಾಪ್ ಮೂಲಕ ಗ್ರಾಹಕರನ್ನ ಸಂಪರ್ಕಿಸಿ ತನ್ನ ಅಕೌಂಟ್‌ಗೆ ಯುಪಿಐ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದ. ಲೋಕೇಷನ್‌ವೊಂದರಲ್ಲಿ MDMA ಡ್ರಗ್ಸ್ ಇಟ್ಟು ಪರಾರಿಯಾಗುತ್ತಿದ್ದ. ಒಟ್ಟು ಐದು ಬ್ಯಾಂಕ್ ಅಕೌಂಟ್‌ಗಳನ್ನು ಈತ ಹೊಂದಿದ್ದ. ಪದೇಪದೆ ತನ್ನ ಅಕೌಂಟ್‌ನಿಂದ ಹಣ ವಿತ್‌ ಡ್ರಾ ಮಾಡುತ್ತಿದ್ದ. 3 ತಿಂಗಳಲ್ಲಿ ಈತನ ಅಕೌಂಟ್‌ಗೆ 25 ಲಕ್ಷ ರೂ. ವರ್ಗಾವಣೆ ಆಗಿತ್ತು. ಡ್ರಗ್ ಪೆಡ್ಲರ್‌ನನ್ನು ಬಂಧಿಸಿ ಅಮೃತಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮೆಣಸಿನಕಾಯಿ ಬೆಳೆ ನಡುವೆ ಅಕ್ರಮವಾಗಿ ಗಾಂಜಾ ಬೆಳೆ

ಕೊಪ್ಪಳ ಜಿಲ್ಲೆಯ ಕನಕಗಿರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೆಣಸಿನಕಾಯಿ ಬೆಳೆ ನಡುವೆ ಅಕ್ರಮವಾಗಿ ಬೆಳೆಯಲಾಗಿದ್ದ ಗಾಂಜಾ ಬೆಳೆಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವಡಕಿ ಗ್ರಾಮದಲ್ಲಿ ಬಸವರಾಜ್ ಎಂಬ ರೈತ ಸುತ್ತಲು ಮೆಣಸಿನಕಾಯಿ ಬೆಳೆದು, ಜಮೀನಿನ ನಡುವೆ ಗಾಂಜಾ ಬೆಳದಿದ್ದ. ಸದ್ಯ ಪೊಲೀಸರು, 2.50 ಲಕ್ಷ ಮೌಲ್ಯದ ಅಕ್ರಮವಾಗಿ ಬೆಳದಿದ್ದ 60 ಕಿಲೋ ಗಾಂಜಾ ಗಿಡಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿ ಬಸವರಾಜ್ ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಏರ್​ಪೋರ್ಟ್​ನಲ್ಲಿ ಆನ್​ಲೈನ್​ ಶಾಪಿಂಗ್​ನಲ್ಲಿ ಕಳೆದು ಹೋಗಿ ವಿಮಾನ ತಪ್ಪಿಸಿಕೊಂಡ ಯುವತಿ

50 ಸಾವಿರ ರೂ ಮೌಲ್ಯದ ಗಾಂಜಾ ವಶ, ಮೂವರ ಬಂಧನ

ಕೋಲಾರದ ಪೌಲ್ಟ್ರಿ ಫಾರಂ ಆವರಣದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಒರಿಸ್ಸಾ ಮೂಲದ ಮೂವರು ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದು, ಸುಮಾರು 50 ಸಾವಿರ ರೂ ಮೌಲ್ಯದ ಗಾಂಜಾ ಗಿಡವನ್ನು ವಶಕ್ಕೆ ಪಡೆದಿದ್ದಾರೆ. ಮುಳಬಾಗಿಲು ತಾಲೂಕಿನ ಗಡ್ಡಂ ಚಿನ್ನೇಪಲ್ಲಿ ಗ್ರಾಮದ ಸಮೀಪ ಬಾಲಾಜಿ ಎಂಬುವರಿಗೆ ಸೇರಿದ ಜಮೀನನಲ್ಲಿರುವ ಸುಗುಣ ಪೌಲ್ಟ್ರಿ ಫಾರಂನ ಆವರಣದಲ್ಲಿ 50 ಸಾವಿರ ಮೌಲ್ಯದ ಗಾಂಜಾ ಗಿಡಗಳನ್ನು ಬೆಳೆಯಲಾಗಿತ್ತು.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ