AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಮಷಿನ್‌ಗೆ ಸಿಲುಕಿ ತುಂಡಾಗಿದ್ದ ಕೈ ಮಣಿಕಟ್ಟನ್ನು ಯಶಸ್ವಿಯಾಗಿ ಮರುಜೋಡಿಸಿದ ವೈದ್ಯರು

ಕಾರ್ಖಾನೆಯಲ್ಲಿ ಹೊಸ ಮಷಿನ್‌ ಪರೀಕ್ಷಿಸುವ ವೇಳೆ ಅಚಾನಕ್ಕಾಗಿ ಮಷಿನ್‌ಗೆ ಸಿಲುಕಿ ತುಂಡರಿಸಿದ್ದ ಕೈ ಮಣಿಕಟ್ಟನ್ನು ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಮರುಜೋಡಣೆ ಮಾಡಿದ್ದಾರೆ.

Bengaluru: ಮಷಿನ್‌ಗೆ ಸಿಲುಕಿ ತುಂಡಾಗಿದ್ದ ಕೈ ಮಣಿಕಟ್ಟನ್ನು ಯಶಸ್ವಿಯಾಗಿ ಮರುಜೋಡಿಸಿದ ವೈದ್ಯರು
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Feb 21, 2023 | 4:48 PM

Share

ಬೆಂಗಳೂರು: ಕಾರ್ಖಾನೆಯಲ್ಲಿ ಹೊಸ ಮಷಿನ್‌ ಪರೀಕ್ಷಿಸುವ ವೇಳೆ ಅಚಾನಕ್ಕಾಗಿ ಮಷಿನ್‌ಗೆ ಸಿಲುಕಿ ತುಂಡರಿಸಿದ್ದ ಕೈ ಮಣಿಕಟ್ಟನ್ನು ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಮರುಜೋಡಣೆ ಮಾಡಿದ್ದಾರೆ. ಮೈಕ್ರೊ ವಾಸ್ಕುಲರ್ ಸರ್ಜರಿ ಸಮಾಲೋಚಕರಾದ ಡಾ. ಸತ್ಯ ವಂಶಿ ಕೃಷ್ಣ ಅವರ ತಂಡವು ಈ ಸರ್ಜರಿಯನ್ನು ಯಶಸ್ವಿಯಾಗಿ ನಡೆಸಿದೆ. 51 ವರ್ಷದ ವ್ಯಕ್ತಿಯೂ ಕಾರ್ಖಾನೆ ಒಂದರಲ್ಲಿ ಮ್ಯಾನೇಜರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕಾರ್ಖಾನೆಗೆ ಹೊಸ ಮಷಿನ್‌ ಬಂದ ಹಿನ್ನೆಲೆಯಲ್ಲಿ ಅದರ ಪರಿಶೀಲನೆಗೆ ಮುಂದಾದರು. ಆದರೆ, ಅಚಾನಕ್ಕಾಗಿ ಅವರ ಕೈ ಮಣಿಕಟ್ಟು ಮಷಿನ್‌ಗೆ ಸಿಲುಕಿ ಎರಡು ಭಾಗವಾಗಿ ತುಂಡಾಗಿತ್ತು. ಕೂಡಲೇ ಅವರನ್ನು ಫೊರ್ಟಿಸ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ಕುರಿತು ಮಾತನಾಡಿದ ಡಾ. ಸತ್ಯ ವಂಶಿ ಕೃಷ್ಣ, ಇದೊಂದು ಅಪರೂಪದ ಪ್ರಕರಣ, ಮಷಿನ್‌ಗೆ ಸಿಲುಕಿ ಆ ವ್ಯಕ್ತಿಯ ಕೈಯ ಮಣಿಕಟ್ಟು ಸಂಪೂರ್ಣವಾಗಿ ಬೇರ್ಪಟ್ಟಿತ್ತು. ಆದರೆ, ಅದೃಷ್ಟವಷಾತ್‌ ಅವರ ಕೈ ಮಣಿಕಟ್ಟನ್ನು ಜೊತೆಯಲ್ಲಿಯೇ ಜೋಪಾನವಾಗಿ ಆಸ್ಪತ್ರೆಗೆ ತೆಗೆದುಕೊಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿ ಮೊದಲಿನಂತೆಯೇ ಕೈನನ್ನು ಮರುಜೋಡಣೆ ಮಾಡಲಾಯಿತು. ಕೇವಲ 7 ಗಂಟೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದರ ಪರಿಣಾಮವಾಗಿ ತುಂಡಾಗಿದ್ದ ಮಣಿಕಟ್ಟಿನ ಸ್ನಾಯುಗಳು ಬದುಕಿದ್ದವು ಎಂದು ವಿವರಿಸಿದರು. ಪ್ರಸ್ತುತ ರೋಗಿಯ ಕೈ ಮರುಜೋಡಣೆ ಮಾಡಿದ್ದು, ರಕ್ತಸಂಚಾರವಾಗುತ್ತಿದೆ. ಒಂದೆರಡು ತಿಂಗಳ ನಂತರ ಮೊದಲಿನಂತೆಯೇ ಕೈ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಮಷಿನ್‌ಗೆ ಸಿಲುಕಿ ತುಂಡಾಗಿದ್ದ ಕೈ ಮಣಿಕಟ್ಟನ್ನು ಯಶಸ್ವಿಯಾಗಿ ಮರುಜೋಡಿಸಿದ ವೈದ್ಯರು

ಇದನ್ನೂ ಓದಿ:ಫೋರ್ಟಿಸ್ ಆಸ್ಪತ್ರೆಯಲ್ಲಿ ನೈಜೀರಿಯಾದ ಬಾಲಕನಿಗೆ ಗುಪ್ತಾಂಗ ಮರುಜೋಡಣೆ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ

ಯಾವುದೇ ಪ್ರಕರಣವಾಗಲಿ, ತುಂಡಾದ ಅಂಗವು ಕೆಲ ಗಂಟೆಗಳ ವರೆಗೂ ಬದುಕಿರಲಿದೆ. ಆ ಅವಧಿಯೊಳಗೆ ಅಂಗವನ್ನು ತೇವಾಂಶವಿರುವ ಬಟ್ಟೆಯಲ್ಲಿ ಸುತ್ತಿ ಜೋಪಾನವಾಗಿ ಆಸ್ಪತ್ರೆಗೆ ತಂದು ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಮರುಜೋಡಣೆ ಮಾಡಬಹುದು. ಕೆಲವರು ತುಂಡಾದ ಅಂಗವನ್ನು ಜೋಪಾನವಾಗಿಡಲು ಕೋಲ್ಡ್‌ ವಾಟರ್‌ ಅಥವಾ ಐಸ್‌ ಕ್ಯೂಬ್‌ ಇರುವ ಡಬ್ಬದಲ್ಲಿ ಇಟ್ಟು ತರುತ್ತಾರೆ. ಇದು ತಪ್ಪು, ಹೀಗೆ ಮಾಡುವುದರಿಂದ ಅಂಗದಲ್ಲಿನ ಸ್ನಾಯುಗಳು ಬೇಗ ಸಾಯುವ ಅಪಾಯವಿರುತ್ತದೆ ಎಂದು ಹೇಳಿದರು.

Published On - 4:48 pm, Tue, 21 February 23

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು