ಬೆಂಗಳೂರಿನ ಬಸವೇಶ್ವರನಗರದ ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ; ಗ್ಯಾರೇಜ್ ಮಾಲೀಕ ಸೇರಿ ನಾಲ್ವರಿಗೆ ಗಾಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 09, 2024 | 7:52 PM

ಬೆಂಗಳೂರಿನ ಬಸವೇಶ್ವರನಗರದ(Basaveshwaranagara) ಗ್ಯಾರೇಜ್‌ನಲ್ಲಿ ಇಂದು ಸಂಜೆ ಅಗ್ನಿ ಅವಘಡ ಸಂಭವಿಸಿದ್ದು, ಗ್ಯಾರೇಜ್ ಮಾಲೀಕ ಜಾರ್ಜ್ ಹಾಗೂ ಕೆಲಸಗಾರ ಶಿವು ಸೇರಿದಂತೆ ನಾಲ್ವರಿಗೆ ಗಾಯವಾಗಿದೆ. ಘಟನೆ ಬಳಿಕ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಮಾತನಾಡಿ, ‘ಸಂಜೆ ಆರು ಗಂಟೆ ಸುಮಾರಿಗೆ ಗ್ಯಾರೇಜ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೇಲ್ನೋಟಕ್ಕೆ ವೆಲ್ಡಿಂಗ್ ಗ್ಯಾಸ್ ಟ್ಯಾಂಕ್ ಸ್ಫೋಟದಿಂದ ಘಟನೆ ಸಂಭವಿಸಿರುವ ಸಾದ್ಯತೆ ಇದೆ ಎಂದರು.

ಬೆಂಗಳೂರಿನ ಬಸವೇಶ್ವರನಗರದ ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ; ಗ್ಯಾರೇಜ್ ಮಾಲೀಕ ಸೇರಿ ನಾಲ್ವರಿಗೆ ಗಾಯ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಮಾ.09: ನಗರದ ಬಸವೇಶ್ವರನಗರದ(Basaveshwara nagara) ಗ್ಯಾರೇಜ್‌ನಲ್ಲಿ ಇಂದು ಸಂಜೆ ಅಗ್ನಿ ಅವಘಡ ಸಂಭವಿಸಿದ್ದು, ಗ್ಯಾರೇಜ್ ಮಾಲೀಕ ಜಾರ್ಜ್ ಹಾಗೂ ಕೆಲಸಗಾರ ಶಿವು ಸೇರಿದಂತೆ ನಾಲ್ವರಿಗೆ ಗಾಯವಾಗಿದೆ. ಜೊತೆಗೆ ಸ್ಫೋಟದಿಂದ 2 ಅಂತಸ್ತಿನ ಮನೆಗೂ ಹಾನಿಯಾಗಿದ್ದು, ಸ್ವಿಫ್ಟ್ ಡಿಸೈರ್ ಕಾರು, ದ್ವಿಚಕ್ರ ವಾಹನ ಸಂಪೂರ್ಣ ಹಾನಿಯಾಗಿದೆ. ಇನ್ನು ಮೇಲ್ನೋಟಕ್ಕೆ ಗ್ಯಾರೇಜ್​ನಲ್ಲಿ ವೆಲ್ಡಿಂಗ್ ಮಷೀನ್ ಸ್ಫೋಟವಾಗಿರುವ ಬಗ್ಗೆ ಮಾಹಿತಿ ದೊರೆತಿದೆ.

ಘಟನೆಯಲ್ಲಿ ರಸ್ತೆಯಲ್ಲಿ ಹೋಗ್ತಿದ್ದ ಇಬ್ಬರಿಗೂ ಗಾಯ

ಇನ್ನು ರಸ್ತೆಯಲ್ಲಿ ಹೋಗ್ತಿದ್ದ ಇಬ್ಬರಿಗೂ ಗಾಯವಾಗಿದೆ. ಘಟನೆ ಹಿನ್ನಲೆ ಗ್ಯಾರೇಜ್ ಪಕ್ಕದ ಮನೆ ಹಾಗೂ ನಿರ್ಮಾಣ ಹಂತದ ಕಟ್ಟಡಕ್ಕೂ ಹಾನಿಯಾಗಿದ್ದು, ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ವಿಜಯಪುರ: ಮೊರಾರ್ಜಿ ವಸತಿ ಶಾಲೆಯಲ್ಲಿ ಅಗ್ನಿ ಅವಘಡ: ಮೂವರು ವಿದ್ಯಾರ್ಥಿಗಳಿಗೆ ಗಾಯ

ಪರಿಶೀಲನೆ ಬಳಿಕ ಮಾತನಾಡಿದ ಪಶ್ಚಿಮ ವಿಭಾಗದ ಡಿಸಿಪಿ

ಇನ್ನು ಘಟನೆ ಬಳಿಕ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಮಾತನಾಡಿ, ‘ಸಂಜೆ ಆರು ಗಂಟೆ ಸುಮಾರಿಗೆ ಗ್ಯಾರೇಜ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೇಲ್ನೋಟಕ್ಕೆ ವೆಲ್ಡಿಂಗ್ ಗ್ಯಾಸ್ ಟ್ಯಾಂಕ್ ಸ್ಫೋಟದಿಂದ ಘಟನೆ ಸಂಭವಿಸಿರುವ ಸಾದ್ಯತೆ ಇದೆ. ಘಟನೆಯಲ್ಲಿ ಗ್ಯಾರೇಜ್ ಮಾಲೀಕ ಹಾಗೂ ಕೆಲಸಗಾರ ಹಾಗೂ ಇಬ್ಬರು ಪಬ್ಲಿಕ್​ಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಗೊಂಡಿರುವ ವ್ಯಕ್ತಿಗಳನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡಿರುವ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಫೋಟದ ತೀವ್ರದ ಗ್ಯಾರೇಜ್ ಸುತ್ತಮುತ್ತ ಇರುವ ಮನೆಗಳ ಗ್ಲಾಸ್​ಗಳು ಜಕ್ಕಂ ಆಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಅಂಥ ದೊಡ್ಡ ಪ್ರಮಾಣದ ಗಾಯ ಯಾರಿಗೂ ಆಗಿಲ್ಲ- ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ

ಘಟನಾ ಸ್ಥಳ ಪರಿಶೀಲನೆ ನಂತರ ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಮಾತನಾಡಿ, ‘ವೆಲ್ಡಿಂಗ್ ಮಷೀನ್​ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ವೆಲ್ಡಿಂಗ್ ಮೆಷಿನ್​​ನಿಂದ ಗ್ಯಾಸ್ ಲೀಕ್ ಆಗಿ ಬೆಂಕಿ ವ್ಯಾಪಿಸಿದೆ ಎನ್ನುವ ಮಾಹಿತಿ ಸಿಕ್ಕಿದೆ.
ಅಂಥಹ ದೊಡ್ಡ ಪ್ರಮಾಣದ ಗಾಯ ಯಾರಿಗೂ ಆಗಿಲ್ಲ. ರೆವೆನ್ಯೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡುತ್ತಾರೆ. ಮೊದಲು ಗ್ಯಾರೇಜ್ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು, ಅನಧಿಕೃತವಾಗಿ ಗ್ಯಾಸ್ ವೆಲ್ಡಿಂಗ್ ಮಾಡ್ತಿದ್ದ ಎಂಬ ಮಾಹಿತಿ ಈಗ ಸಿಕ್ಕಿದೆ. ಸೇಫ್ಟಿ ತೆಗೆದುಕೊಂಡಿದ್ದಾರಾ ಅನ್ನೋದನ್ನ ನೋಡಬೇಕು. ತಪ್ಪಿತಸ್ಥರು ಇದ್ರೆ, ಅವರ ಮೇಲೆ ಕ್ರಮಕೈಗೊಳ್ಳಲಾಗುತ್ತ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:43 pm, Sat, 9 March 24