ಬೆಂಗಳೂರು, ಆ.3: ಮಾತನಾಡಿಸುವ ನೆಪದಲ್ಲಿ ಲಾಯರ್(Lawyer) ಅವರನ್ನು ಕಾರಿನಲ್ಲಿ ಕರೆದೊಯ್ದು ಅವರ ಮೇಲೆ ಹಲ್ಲೆ ಮಾಡಿದ ಘಟನೆ ಜುಲೈ 24ರಂದು ಬೆಂಗಳೂರಿ(Bengaluru)ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಕೀಲ ಗಿರಿಧರ್ ಎಂಬುವವರನ್ನು ಕರೆದುಕೊಂಡು ಹೋಗಿ 8 ಜನರಿಗೆ ಬೇಲ್ ಕೊಡಿಸಬೇಕು ಜೊತೆಗೆ 5 ಲಕ್ಷ ಹಣ ತಂದುಕೊಡುವಂತೆ ಹೇಳಿ, ಬಟ್ಟೆ ಬಿಚ್ಚಿಸಿ ಒಳ ಉಡುಪಿನಲ್ಲಿ ರಾತ್ರಿಯಿಡೀ ಕೂರಿಸಿ ಹಲ್ಲೆ ಮಾಡಿದ ಆರೋಪ ಕೇಳಿಬಂದಿತ್ತು. ಇದೀಗ ವಕೀಲರ ದೂರಿನನ್ವಯ ರೌಡಿಶೀಟರ್ ರಾಜೇಶ್ ಅಲಿಯಾಸ್ ಕೋಳಿ ರಾಜೇಶ್, ಹರ್ಷಿತ್ ಅಲಿಯಾಸ್ ಆ್ಯಪಲ್ ಜಾನ್ ಮತ್ತು ಭರತ್ ಸೇರಿ ಮೂವರನ್ನು ಬಂಧಿಸಲಾಗಿದೆ.
ಜುಲೈ 24 ರಂದು ಲಾಯರ್ ಗಿರಿಧರ್ ಎಂಬುವವರನ್ನು ಮಾತನಾಡುವ ನೆಪದಲ್ಲಿ ಕತ್ರಿಗುಪ್ಪೆಯ ಆರೋಪಿ ರೌಡಿಶೀಟರ್ ರಾಜೇಶ್ ಮನೆಗೆ ವಕೀಲನ ಕಾರಿನಲ್ಲಿಯೇ ಆರೋಪಿ ಹರ್ಷಿತ್ ಅಲಿಯಾಸ್ ಆ್ಯಪಲ್ ಮತ್ತು ಗ್ಯಾಂಗ್ ಕರೆದೊಯ್ದಿದ್ದರು. ಬಳಿಕ ಜೈಲಿನಲ್ಲಿರುವ ನಮ್ಮ ಕಡೆಯ 8 ಜನರಿಗೆ ಜಾಮೀನು ಕೊಡಿಸುವಂತೆ ಬೆದರಿಕೆ ಹಾಕಿ ಬೆಳಗಿನ ಜಾವದವರೆಗೂ ಹಲ್ಲೆ ನಡೆಸಿ, 10 ಸಾವಿರ ಹಣ ಕಿತ್ತುಕೊಂಡಿದ್ದರು. ಇದನ್ನು ಪೊಲೀಸರಿಗೆ ಹೇಳಿದರೆ, ಅಥವಾ ಹಣ ಕೊಡದಿದ್ದರೆ ಕೊಲೆ ಬೆದರಿಕೆಯನ್ನು ಹಾಕಿದ್ದರಂತೆ. ಬಳಿಕ ವಕೀಲರು ಘಟನೆ ಕುರಿತು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅವರ ದೂರಿನನ್ವಯ ಇದೀಗ ಕೋಳಿ ರಾಜೇಶ್ ಸೇರಿ ಮೂವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಬೆಂಗಳೂರು: ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ್ದಕ್ಕೆ ಸಹಪಾಠಿಗಳಿಂದ ಹಲ್ಲೆ; ದೂರು ದಾಖಲು
ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಸತೀಶ್ ಎಂಬ ಯುವಕ ಕೆಲ ದಿನಗಳ ಹಿಂದೆ ನಗ್ನವಾಗಿ ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿ ಮಾಡಿದ್ದ. ಮಾನಸಿಕ ಅಸ್ವಸ್ಥನಾಗಿದ್ದ ಸತೀಶ್ನನ್ನು ಆಗ ಕೆಳಗಿಳಿಸಲು ಹರ ಸಾಹಸ ಪಡಲಾಗಿತ್ತು. ಆಲಮೇಲ ಪೊಲೀಸರು ಹಾಗೂ ಗ್ರಾಮದ ಜನರು ಸತೀಶ್ನನ್ನು ಅಂದು ಟವರ್ ಮೇಲಿಂದ ಕೆಳಗೆ ಇಳಿಸಲು ಸರ್ಕಸ್ ಮಾಡಿದ್ದರು. ಕೊನೆಗೆ ಮದ್ಯ ಹಾಗೂ ಗುಟ್ಕಾ ಕೊಡೋದಾಗಿ ಆಮೀಷವೊಡ್ಡಿ ಆತನನ್ನು ಕೆಳಗಿಸೋವಲ್ಲಿ ಯಶಸ್ವಿಯಾಗಿದ್ದರು. ನಿನ್ನೆ ಅದೇ ಮಾನಸಿಕ ಅಸ್ವಸ್ಥ ಯುವಕ ಸತೀಶ ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ಮೊಬೈಲ್ ಟವರ್ ಏರಿ ಮತ್ತೊಮ್ಮೆ ಆತಂಕ ಹುಟ್ಟಿಸಿದ್ದಾನೆ. ಬಳಿಕ ಸ್ಥಳಕ್ಕೆ ಆಲಮೇಲ ಪೊಲೀಸರು ಆಗಮಿಸಿದ್ದು, ಆತನನ್ನು ಕೆಳಗಿಳಿಸಲು ಮುಂದಾಗಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ