ಬೆಂಗಳೂರು: ನಗರದಲ್ಲಿ ಇಂದು ರಸ್ತೆ ಗುಂಡಿಗೆ (Pothole) ಮತ್ತೊಂದು ಬಲಿಯಾಗಿದೆ. ಗುಂಡಿ ತಪ್ಪಿಸಲು ಹೋಗಿ ಮಹಿಳೆ ಆಯತಪ್ಪಿ ಬಿದ್ದಿದ್ದಾರೆ. ಈ ವೇಳೆ ಲಾರಿ (Lorry) ಹರಿದು ಮಹಿಳೆ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ನಡೆದಿದೆ. ಮಾಗಡಿ ಮುಖ್ಯ ರಸ್ತೆಯ ಬ್ಯಾಡರಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ಲಾರಿ ಹರಿದುಮಹಿಳೆ ಶರ್ಮಿಳಾ (38) ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಲಾರಿ ಚಾಲಕ ಮಾದೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ದೇವಸ್ಥಾನಕ್ಕೆ ಡಿಕ್ಕಿ ಹೊಡೆದ ಕಾರು
ಚಾಲಕನ ನಿಯಂತ್ರಣ ತಪ್ಪಿ ಆಂಜನೇಯ ದೇವಸ್ಥಾನಕ್ಕೆ ಕಾರು ಡಿಕ್ಕಿ ಹೊಡೆದಿದೆ. ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹೋಂಡಾ ಸಿಟಿ ಕಾರಿನಲ್ಲಿ ಡ್ರೈವರ್ ಸೇರಿ ಇಬ್ಬರು ಇದ್ದರು. ಘಟನೆಯಲ್ಲಿ ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕುಡಿದು ವಾಹನ ಚಲಾಯಿಸಿರುವ ಶಂಕೆ ವ್ಯಕ್ತವಾಗಿದ್ದು, ಚಾಲಕನ ರಕ್ತವನ್ನು ಮೆಡಿಕಲ್ ಟೆಸ್ಟ್ಗೆ ಕಳುಹಿಸಲಾಗಿದೆ. ತಡರಾತ್ರಿ 1.30 ರ ಸುಮಾರಿಗೆ ಘಟನೆ ಸಂಭವಿಸಿದೆ.
ಮೊಬೈಲ್ ತೆಗೆಯಲು ಹೋಗಿ ಯುವಕ ಸಾವು
ಬಾವಿಗೆ ಬಿದ್ದಿದ್ದ ಮೊಬೈಲ್ನ ತೆಗೆಯಲು ಹೋಗಿ ಯುವಕ ಸಾವನ್ನಪ್ಪಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗುಡಿಹಳ್ಳಿ ಬಳಿ ಕಿರು ಬಾವಿಯಲ್ಲಿ ಉಸಿರುಗಟ್ಟಿ ಅನಿಲ್ ಮೃತಪಟ್ಟಿದ್ದಾನೆ. ಅನಿಲ್ ಬಾವಿಯಲ್ಲಿ ಬಿದ್ದಿದ್ದ ಮೊಬೈಲ್ ತೆಗೆಯಲು ಇಳಿದಿದ್ದ. 3 ಅಡಿ ಅಗಲ, 65 ಅಡಿ ಆಳದ ಕಿರು ಬಾವಿಯಲ್ಲಿ ಇಳಿದಿದ್ದ. ಮೊಬೈಲ್‌ಗಾಗಿ ಹಗ್ಗ ಬಿಟ್ಟು ಬಾವಿಯೊಳಗೆ ಇಳಿದಿದ್ದ. ಅನಿಲ್ ಹುಡುಕಿಕೊಂಡು ಬಾವಿ ಬಳಿ ಬಂದಾಗ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಅನಿಲ್ ರಕ್ಷಣೆಗೆ ರಾತ್ರಿಯಿಡೀ ಎನ್ಡಿಆರ್ಎಫ್ ತಂಡ, ಪೊಲೀಸರು ಕಾರ್ಯ ನಿರ್ವಹಿಸಿದ್ದಾರೆ. ಆದರೆ ಬಾವಿಯೊಳಗೆ ಅನಿಲ್ ಉಸಿರುಗಟ್ಟಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ
ಹಾಸನಾಂಬೆ ದೇಗುಲದ ಗರ್ಭಗುಡಿಯ ಮುಂದೆ ಪ್ರತಿರೂಪವಿಟ್ಟು ಪೂಜೆ; ಅರ್ಚಕರ ನಡೆಗೆ ಭಕ್ತರ ಅಸಮಾಧಾನ
ಹೊಟ್ಟೆ ತುಂಬ ಊಟಮಾಡಿದ ಬಳಿಕ ಹೊಡೆದಾಟ; ಸಿಲಿಂಡರ್ ಗ್ಯಾಸ್ ಎತ್ತಿ ರೆಸ್ಟೋರೆಂಟ್ ಸಿಬ್ಬಂದಿಗೆ ಹೊಡೆಯಲು ಹೋದ ಗುಂಪು
Published On - 12:02 pm, Sun, 30 January 22