ಇವರ ಪರದಾಟ.. ಇವರ ಅಲೆದಾಟ.. ಈ ಮಗುವಿನ ಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದ ಟಿವಿ9 ಕನ್ನಡ ಕಳೆದ ವರ್ಷವೇ ಕರುಣಾಜನಕಾ ಕಥೆಯನ್ನ ಬಿತ್ತರಿಸಿತ್ತು. ಫೆಬ್ರವರಿ 5, 2021ರಲ್ಲಿ ಕಂದನ ಉಳಿಸು ಕರುನಾಡು ಅಂತಾ ಅಭಿಯಾನ ಮಾಡಿತ್ತು. ಈ ವೇಳೆ ಇಡೀ ಕರುನಾಡಿಗೇ ಕರುನಾಡು ಮಿಡಿದಿತ್ತು. ಮಗುವಿನ ಜೀವ ಉಳಿಸೋಕೆ ಹೃದಯವಂತರು ಹಣದ ಸಹಾಯ ಮಾಡಿದ್ರು. ಆದ್ರೆ, ಈ ಮಗು ಸಂಪೂರ್ಣವಾಗಿ ಗುಣವಾಗೋಕೆ ಇನ್ನೂ ಹಣ ಬೇಕಾಗಿದೆ. ಒಂದು ಸಾವಿರ ಅಲ್ಲ. ಎರಡೂ ಲಕ್ಷವೂ ಅಲ್ಲ.. ಕೋಟಿ ಕೋಟಿ ಹಣದ ಅವಶ್ಯಕತೆ ಇದೆ. ಇಷ್ಟೇ ಅಲ್ಲ, ಆದಷ್ಟು ಬೇಗ ಕಂದನಿಗೆ ಚಿಕಿತ್ಸೆ ಕೊಡಲೇ ಬೇಕಾದ ಪರಿಸ್ಥಿತಿ ಎದುರಾಗಿದೆ.
ಜನೀಶ್ ಪೋಷಕರು
‘ಕಂದನ ಉಳಿಸು ಕರ್ನಾಟಕ’ ಟಿವಿ9 ಅಭಿಯಾನಕ್ಕೆ ಸ್ಪಂದನೆ
ಟಿವಿ9 ಅಭಿಯಾನ ಆರಂಭಿಸಿದ ಬಳಿಕ ಈವರೆಗೆ $9 ಕೋಟಿ ನೆರವು ಹರಿದು ಬಂದಿದೆ. ಅಮೆರಿಕದಿಂದ ಔಷಧ ತರಿಸಲು 16 ಕೋಟಿ ರೂಪಾಯಿ ಬೇಕು. ಸದ್ಯ 9 ಕೋಟಿ ಇದೆ, ಇನ್ನೂ $7 ಕೋಟಿ ನೀಡಲು ದಂಪತಿ ಕರುನಾಡಿನ ಜನತೆಗೆ ಮನವಿ ಮಾಡಿದ್ದಾರೆ.
ಇನ್ನು ಮಗುವಿಗೆ ನೆರವು ನೀಡುವುದಾಗಿ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಟಿವಿ9ಗೆ ತಿಳಿಸಿದ್ದಾರೆ. ಮಗು ಆರೋಗ್ಯ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಮಗುವಿಗೆ ಸಹಾಯ ಮಾಡುವುದಾಗಿ ರಾಘವೇಂದ್ರ ಹೇಳಿದ್ದಾರೆ. ಜೊತೆಗೆ ಮಗುವಿಗೆ ನೆರವು ಕೊಡಿಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ಕೊಟ್ಟಿದ್ದಾರೆ. ಹೆಚ್ಚಿನ ನೆರವು ನೀಡುವಂತೆ ಸಿಎಂಗೆ ಮನವಿ ಮಾಡುತ್ತೇನೆ. ಸರ್ಕಾರದಿಂದ ನೆರವು ಕೊಡಿಸುವ ಕೆಲಸ ಮಾಡುತ್ತೇನೆ. ನಾನು ಕೂಡ ವೈಯಕ್ತಿಕವಾಗಿ ಮಗುವಿಗೆ ನೆರವು ನೀಡುತ್ತೇನೆ ಎಂದು ತಿಳಿಸಿದ್ದಾರೆ. ಮಗುವಿಗೆ ಜೆಡಿಎಸ್ ಪಕ್ಷದಿಂದ 2 ಲಕ್ಷ ರೂಪಾಯಿ ಕೊಡುತ್ತೇನೆ ಎಂದು ಟಿವಿ9ಗೆ ಪರಿಷತ್‌ನ ಮಾಜಿ ಸದಸ್ಯ ಟಿ.ಎ.ಶರವಣ ಹೇಳಿದ್ದಾರೆ. ಕೇಂದ್ರ ಸರ್ಕಾರ ಮನಸು ಮಾಡಿದರೆ ಮತ್ತಷ್ಟು ಅನುಕೂಲವಾಗುತ್ತೆ. ವಿದೇಶದಿಂದ ಔಷಧ ಬರುತ್ತಿರುವುದರಿಂದ ತೆರಿಗೆ ಕಡಿಮೆ. ಕೇಂದ್ರ ಸರ್ಕಾರ ಮನಸು ಮಾಡಿದರೆ ತೆರಿಗೆ ಕಡಿಮೆ ಆಗುತ್ತೆ. ಹೀಗಾಗಿ ಹೆಚ್.ಡಿ.ದೇವೇಗೌಡರ ಜೊತೆ ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಮಗುವಿನ ಚಿಕಿತ್ಸೆ ಬಗ್ಗೆ ಸಿಎಂ ಸ್ಪಂದನೆ
ಸರ್ಕಾರದ ಇತಿಮಿತಿಯಲ್ಲಿ ಮಗುವಿಗೆ ನೆರವು ನೀಡುತ್ತೇವೆ. ಮಗುವಿನ ಅನಾರೋಗ್ಯದ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಮಗುವಿನ ಔಷಧದ ಬಗ್ಗೆ ಚರ್ಚೆ ಮಾಡುತ್ತೇವೆ. ಸರ್ಕಾರ ಇತಿಮಿತಿಯೊಳಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಚರ್ಚೆ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಗುವಿನ ಚಿಕಿತ್ಸೆಗೆ ಬೇಕಿದೆ ₹7 ಕೋಟಿ 10 ಲಕ್ಷ
ಕಳೆದ ಎರಡು ವರ್ಷದಿಂದ ಈ ಎಳೆಕೂಸು ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಕಾಯಿಲೆಯಿಂದ ಬಳಲುತ್ತಿದೆ. ವೈದ್ಯಲೋಕದಲ್ಲೇ ಇದು ಅಪರೂಪದ ಸಮಸ್ಯೆ. ಇಂತಹ ಕಾಯಿಲೆ ಇರುವವರಿಗೆ, ದೇಹದ ಯಾವುದೇ ಅಂಗಾಗಳು ಕೆಲಸ ಮಾಡುವುದಿಲ್ಲ. ಉಸಿರಾಟ ಮಾಡೋಕು ಕಷ್ಟ ಆಗುತ್ತೆ. ಕೈ ಕಾಲು ಕದಲಿಸೋಕು ಆಗಲ್ಲ. ಊಟ ತಿನ್ನೋಕು ಆಗಲ್ಲ. ತುಟಿ ಬಿಚ್ಚಿ ಅಮ್ಮ ಅಂತಾ ತೊದಲು ನುಡಿಯೋಕು ಆಗಲ್ಲ. ಈಗ ಜನೀಶ್ ಉಳಿಯಬೇಕಾದ್ರೆ ಅಮೆರಿಕದಲ್ಲಿ ಸಿಗುವ ಔಷಧಿಯೇ ಬೇಕು. ಅದಕ್ಕೆ 16 ಕೋಟಿಯ ಮೆಡಿಸಿನ್ ಬೇಕಾಗಿದೆ. ಸದ್ಯ ಟಿವಿ9 ಅಭಿಯಾನದಿಂದ ಕಳೆದ ಒಂದು ವರ್ಷದಿಂದ ಬರೋಬ್ಬರಿ 8 ಕೋಟಿ 90 ಲಕ್ಷ ರೂಪಾಯಿ ಹಣ ಸಂಗ್ರಹವಾಗಿದೆ. ಇನ್ನು 7 ಕೋಟಿ 10 ಲಕ್ಷ ಬೇಕಾಗಿದೆ.
ಕಂದನ ಬದುಕಿಸೋಕೆ ಒಂದು ತಿಂಗಳ ಡೆಡ್ಲೈನ್
ಇನ್ನು, ಇಂತಹ ಸಮಸ್ಯೆ ಇರೋ ಕಂದನಿಗೆ ಎರಡು ವರ್ಷದಲ್ಲಿ ಚಿಕಿತ್ಸೆ ಕೊಡಿಸಬೇಕು. ಅಮೆರಿಕಾದಲ್ಲಿ ಸಿಗುವ ಆ ಒಂದು ಚಿಕಿತ್ಸೆ ಇಷ್ಟೊತ್ತಿಗಾಗ್ಲೇ ಸಿಗಬೇಕಿತ್ತು. ಅದ್ರೆ, ಮಗುವಿಗೆ ಇನ್ನೂ ಸಂಜೀವಿನಿ ಸಿಕ್ಕಿಲ್ಲ. ಅದು ಕೂಡ ವೈದ್ಯರು ಒಂದು ತಿಂಗಳಲ್ಲಿ ಚಿಕಿತ್ಸೆ ಕೊಡಿಸಲೇಬೇಕು. ಇಲ್ಲವಾದಲ್ಲಿ ಮಗುವಿನ ಜೀವಕ್ಕೆ ಅಪಾಯ ಅಂತಾ ಹೇಳ್ತಿದ್ದಾರಂತೆ. ಇದರಿಂದ ಹೆತ್ತಮ್ಮ ಮತ್ತೊಮ್ಮೆ ಕರುನಾಡಿನ ಜನತೆ ಮುಂದೆ ಕಂದನನ್ನ ಉಳಿಸಿಕೊಡಿ ಅಂತಾ ಕೇಳಿಕೊಳ್ತಿದ್ದಾರೆ.
ಕಂದನ ಉಳಿಸು ಕರ್ನಾಟಕ
– Account Name : Jyothi
– A/c No : 374201000000285
– IFSC : IOBA0003742
– SAHAKARANAGARA, BENGALURU
– PHONE PAY/GOOGLE PAY : 96117 89719
ಇದನ್ನೂ ಓದಿ: ‘ಕಂದನ ಉಳಿಸು ಕರ್ನಾಟಕ’ ಟಿವಿ9 ಅಭಿಯಾನಕ್ಕೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ