ರಾಜ್ಯ ಸರ್ಕಾರದ ವಿರುದ್ಧ ಕಲ್ಯಾಣ ಮಂಟಪ ಮಾಲೀಕರು ಗರಂ; 50% ಅವಕಾಶಕ್ಕೆ ಒತ್ತಡ

ರಾಜ್ಯ ಸರ್ಕಾರದ ವಿರುದ್ಧ ಕಲ್ಯಾಣ ಮಂಟಪ ಮಾಲೀಕರು ಗರಂ; 50% ಅವಕಾಶಕ್ಕೆ ಒತ್ತಡ
ಕಲ್ಯಾಣ ಮಂಟಪ

ಸರ್ಕಾರಕ್ಕೆ ಹೇಗೆ ಒತ್ತಡ ಹಾಕಬೇಕು ಎಂಬುದರ ಕುರಿತು ಮಾತುಕತೆ ನಡೆಸಲು ಕಲ್ಯಾಣ ಮಂಟಪಗಳ ಮಾಲೀಕರು ಮೀಟಿಂಗ್ ಕರೆದಿದ್ದಾರೆ. ನಾಳೆ ಸರ್ಕಾರ ಮನವಿಗೆ ಸ್ಪಂದಿಸದೆ ಹೋದರೆ ಮುಂದೆ ಯಾವ ಕ್ರಮಕ್ಕೆ ಮುಂದಾಗಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ.

TV9kannada Web Team

| Edited By: Ayesha Banu

Jan 30, 2022 | 8:00 AM

ಬೆಂಗಳೂರು: ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗಿದ್ದರಿಂದ ಸರ್ಕಾರ ನಾಳೆಯಿಂದ ನೈಟ್ಕರ್ಫ್ಯೂ, 50:50 ರೂಲ್ಸ್ಗಳನ್ನು ವಾಪಸ್ ಪಡೆದಿದೆ. ಆದ್ರೆ ಕೆಲವೊಂದು ಸ್ಥಳಗಳಲ್ಲಿ ಶೇಕಡಾ 50ರ ಮಿತಿಯನ್ನು ಮುಂದುವರಿಸಿದೆ. ಇದಕ್ಕೆ ಆ ವಲಯಗಳಿಂದ ತೀವ್ರ ವಿರೋಧ ಕೇಳಿ ಬಂದಿದೆ. ರಾಜ್ಯ ಸರ್ಕಾರದ ವಿರುದ್ಧ ಕಲ್ಯಾಣ ಮಂಟಪ ಮಾಲೀಕರು ಗರಂ ಆಗಿದ್ದಾರೆ. ಕೇವಲ ಹೋಟೆಲ್, ಬಾರ್, ಪಬ್ & ರೆಸ್ಟೋರೆಂಟ್ಗಳಿಗೆ ಮಾತ್ರ 100% ಅವಕಾಶ ನೀಡಲಾಗಿದೆ. ಹೀಗಾಗಿ ಸರ್ಕಾರದ ನಡೆಗೆ ಮ್ಯಾರೇಜ್ ಹಾಲ್ಸ್ ವೆಲ್‌ಫೇರ್ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿದೆ. ಮ್ಯಾರೇಜ್ ಹಾಲ್ಗಳಿಗೆ ಶೇ. 50% ಕೂಡ ಅವಕಾಶ ಇಲ್ಲ. ಈ ಹಿಂದೆ ಒಳಾಂಗಣ ಮದುವೆಗೆ ಕೇವಲ 100 ಜನರ ಮಿತಿ ಇತ್ತು. ನಿನ್ನೆ ಸರ್ಕಾರ 200 ಜನರ ಮಿತಿಗೆ ಆದೇಶ ಮಾಡಿದೆ. ಹೀಗಾಗಿ ಸದ್ಯ ಮ್ಯಾರೇಜ್ ಹಾಲ್ಸ್‌ಗೆ ಶೇ.50ರಷ್ಟು ಅವಕಾಶ ನೀಡಲು ಒತ್ತಡ ಹೇರಿದೆ. ಮ್ಯಾರೇಜ್ ಹಾಲ್ಸ್ ವೆಲ್‌ಫೇರ್ ಅಸೋಸಿಯೇಷನ್ ನಾಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಭೇಟಿಗೆ ತೀರ್ಮಾನಿಸಿದೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ರೆ ಕೋರ್ಟ್ ಮೊರೆ ಹೋಗಲು ಚಿಂತಿಸಿದೆ. ಈ ಸಂಬಂಧ ಚರ್ಚಿಸಲು ಇಂದು ಅಸೋಸಿಯೇಷನ್‌ ಸಭೆ ಕೈಗೊಂಡಿದ್ದು ಬೆಂಗಳೂರಿನ ಎಂಜಿ ರಸ್ತೆ ಹೋಟೆಲ್‌ನಲ್ಲಿ ಬೆಳಗ್ಗೆ 10.30ಕ್ಕೆ ಸಭೆ ನಡೆಯಲಿದೆ.

ಬೆಳಗ್ಗೆ 10:30ಕ್ಕೆ ಕಲ್ಯಾಣ ಮಂಟಪಗಳ ಮಾಲೀಕರ ಮೀಟಿಂಗ್ ಸರ್ಕಾರಕ್ಕೆ ಹೇಗೆ ಒತ್ತಡ ಹಾಕಬೇಕು ಎಂಬುದರ ಕುರಿತು ಮಾತುಕತೆ ನಡೆಸಲು ಕಲ್ಯಾಣ ಮಂಟಪಗಳ ಮಾಲೀಕರು ಮೀಟಿಂಗ್ ಕರೆದಿದ್ದಾರೆ. ನಾಳೆ ಸರ್ಕಾರ ಮನವಿಗೆ ಸ್ಪಂದಿಸದೆ ಹೋದರೆ ಮುಂದೆ ಯಾವ ಕ್ರಮಕ್ಕೆ ಮುಂದಾಗಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ.

50% ಅವಕಾಶ ನೀಡುವಂತೆ ಕಲ್ಯಾಣ ಮಂಟಪ ಮಾಲೀಕರ ಒತ್ತಡ ಏಕೆ? – ಮದುವೆ ಸೀಜನ್ ಇರೋದು 3 ತಿಂಗಳು – ಫ್ರೆಬ್ರವರಿ, ಮಾರ್ಚ್, ಏಪ್ರಿಲ್‌ ಮಾತ್ರ ಮದುವೆ ಸೀಜನ್ – ಕಳೆದ 2 ಕೋವಿಡ್ ನಲ್ಲೂ ಇದೇ ರೀತಿ ನಿರ್ಬಂಧ ವಿಧಿಸಲಾಗಿತ್ತು – 100, 200 ಜನರ ಮಿತಿ ಹೇರಿದ್ರೆ ಜನ ಮಂಟಪಗಳತ್ತ ಮುಖ ಮಾಡೊಲ್ಲ – ದೇವಸ್ಥಾನ, ಮನೆ ಬಳಿಯೇ ಮದುವೆ ಮಾಡ್ತಾರೆ – ಮಂಟಪಗಳಲ್ಲಿ ಕೆಲಸ ಮಾಡುವ ಅಡುಗೆ, ಕ್ಲೀನರ್ಸ್ ಇತರೆ ಸಿಬ್ಬಂದಿಗಳಿಗೂ ಜೀವನ ನಿರ್ವಹಣೆ ಕಷ್ಟ – ಕಠಿಣ ನಿಯಮದಿಂದ ಮದುವೆ ಮಂಟಪಗಳು ಬುಕ್ ಆಗ್ತಿಲ್ಲ – ಬುಕ್ ಆದ ಮದುವೆಗಳ ದಿನಾಂಕ ಮುಂದೂಡಿಕೆ – ಮತ್ತೆ ಕೆಲವರು ಕ್ಯಾನ್ಸಲ್ ಮಾಡಿಕೊಳ್ತಿದ್ದಾರೆ – ಛೌಟ್ರಿಗಳು ಕ್ಲೋಸ್ ಆಗಿದ್ದರೂ ವಿದ್ಯುತ್, ನೀರಿನ ಬಿಲ್, ಟ್ಯಾಕ್ಸ್, GST ನಿಂದ ರಿಯಾಯಿತಿಯೇ ಇಲ್ಲ – 100 ಜನರ ಮಿತಿಯಿಂದ ಶೇ.90 ರಷ್ಟು ಕಲ್ಯಾಣ ಮಂಟಪಗಳಿಗೆ ಭಾರೀ ನಷ್ಟ

ಇದನ್ನೂ ಓದಿ:Covid19: ಕರ್ನಾಟಕ ಸರ್ಕಾರದಿಂದ ಪರಿಷ್ಕೃತ ಕೊರೊನಾ ಮಾರ್ಗಸೂಚಿ ಪ್ರಕಟ; ವಿವರ ಇಲ್ಲಿದೆ 

Follow us on

Related Stories

Most Read Stories

Click on your DTH Provider to Add TV9 Kannada