ಬೆಂಗಳೂರು: ಆಟೋ (Auto) ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕಿ (Girl) ಬಲಿಯಾಗಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರಿ ಠಾಣಾ ವ್ಯಾಪ್ತಿಯ ಕಾವೇರಿಪುರದಲ್ಲಿ ನಡೆದಿದೆ. ಮಾ.17ರಂದು ಈ ಘಟನೆ ನಡೆದಿದ್ದು, ಭುವನ (4) ಎಂಬ ನಾಲ್ಕು ವರ್ಷದ ಬಾಲಕಿ ಮೃತಪಟ್ಟಿದೆ. ಬಾಲಕಿ ತಾಯಿಯೊಂದಿಗೆ ರಸ್ತೆಯಲ್ಲಿ ಎಳನೀರು ಕುಡಿಯುತ್ತಿದ್ದಳು. ಈ ವೇಳೆ ಪಕ್ಕದಲ್ಲೇ ನಿಂತಿದ್ದ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಗೇಜ್ ಆಟೋ ಬಂದಿದೆ. ಹ್ಯಾಂಡ್ ಬ್ರೇಕ್ ಹಾಕದೆ ಚಾಲಕ ಆಟೋದಿಂದ ಇಳಿದಿದ್ದಾನೆ. ರಸ್ತೆ ಇಳಿಜಾರಿನಲ್ಲಿ ಆಟೋ ಮುಂದಕ್ಕೆ ಚಲಾಯಿಸಿದೆ.
ಹ್ಯಾಂಡ್ ಬ್ರೇಕ್ ಹಾಕದೆ ಹಿನ್ನೆಲೆ ಮಗುವಿನ ಮೇಲೆ ಆಟೋ ಹರಿದಿದೆ. ಕೂಡಲೇ ಆಟೋ ಚಾಲಕ ಆಸ್ಪತ್ರೆಗೆ ಸಾಗಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಆರೋಪಿ ಚಾಲಕ ಧನಂಜಯನನ್ನು ಬಂಧಿಸಿದ್ದಾರೆ.
ಆನೆ ದಂತಗಳನ್ನ ಸ್ಮಗ್ಲಿಂಗ್ ಮಾಡುತ್ತಿದ್ದ ಆರೋಪಿಗಳು ಅಂದರ್!:
ಆನೆ ದಂತಗಳನ್ನ ಸ್ಮಗ್ಲಿಂಗ್ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಸಿ ಕೆ ಅಚ್ಚುಕಟ್ಟು ಪೊಲೀಸರು ಮೂರು ಮಂದಿ ಸ್ಮಗ್ಲರ್ಗಳನ್ನ ಬಂಧಿಸಿದ್ದಾರೆ.ಚಂದೇಗೌಡ, ಸೋಮಲಿಂಗಪ್ಪ, ಪ್ರವೀಣ್ ಗುಳೆದ್ ಬಂಧಿತ ಆರೋಪಿಗಳು. ಬಂಧಿತರಿಂದ ಎರೆಡು ಆನೆ ದಂತಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಪ್ರಕರಣ ದಾಖಲಾಗಿದೆ.
ಕೊಲೆ ಸುಪಾರಿ ತೆಗೆದುಕೊಂಡಿದ್ದ ಅರೋಪಿಗಳು ಅರೆಸ್ಟ್!:
ಕೊಲೆ ಮಾಡುವುದಕ್ಕೆ ಸುಪಾರಿ ತೆಗೆದುಕೊಂಡಿದ್ದ ಅರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಕಿಡ್ನ್ಯಾಪ್ ಮಾಡಿಸಿ ಕೊಲೆಗೆ ಸುಫಾರಿ ನೀಡಲಾಗಿತ್ತು. ರೌಡಿಶೀಟರ್ ಮಣಿ ಎಂಬಾತ ಸುಪಾರಿ ನೀಡಿದ್ದ. ತನ್ನ ಪತ್ನಿ ಜೊತೆ ಆಟೋ ಚಾಲಕ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ಶಂಕಿಸಿ ಹತ್ಯೆಗೆ ಸುಪಾರಿ ನೀಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ
Published On - 4:02 pm, Sat, 19 March 22