ಬೆಂಗಳೂರು: ಬಿ.ಸೇಫ್ ಕ್ಷೇತ್ರ ಸಾರ್ವಜನಿಕ ಸ್ಥಳಗಳ ಸುರಕ್ಷತ ಸಮೀಕ್ಷಾ ವರದಿ ಬಿಡುಗಡೆ
ಮಹಿಳಾ ಸುರಕ್ಷತೆಯ ವಿಚಾರವೂ ಮಹಿಳೆಯರ ಸಬಲಿಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಬಿ. ಸೇಫ್ ಕ್ಷೇತ್ರ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿಯ ಒಂದು ವಿಶಿಷ್ಟ ಉಪಕ್ರಮವಾಗಿದ್ದು, ವಿವಿಧ ಪಾಲುದಾರರು, ಸಮುದಾಯಗಳು ಮತ್ತು ವಿಷಯ ತಜ್ಞರನ್ನು ಒಂದು ಸಮಾನ ವೇದಿಕೆಗೆ ತರುತ್ತದೆ.
ಬೆಂಗಳೂರು: ರಾಜಕೀಯ ಕ್ರಿಯಾ ಸಮಿತಿ ಮತ್ತು ಸಿಎಸ್ಆರ್ ಸಹಭಾಗಿಗಳಾದ ಸಿಜಿಐ ಸಂಸ್ಥೆಯು, ಮಲ್ಲೇಶ್ವರಂ ಮತ್ತು ಮಹಾದೇವಪುರ ವಿಧಾಸಭಾ ಕ್ಷೇತ್ರಗಳ ಬಿ.ಸೇಫ್(B. Safe) ಕ್ಷೇತ್ರ ಸಾರ್ವಜನಿಕ ಸ್ಥಳಗಳ ಸುರಕ್ಷತ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಶಾಸಕ ಅರವಿಂದ್ ಲಿಂಬಾವಳಿ(Arvind limbavali), ನಟಿ ಹಾಗೂ ಬಿ.ಸೇಫ್ ಕಾರ್ಯಕ್ರಮದ ಬ್ರಾಂಡ್ ರಾಯಭಾರಿ ಪ್ರಣಿತ ಸುಭಾಷ್, ಹಿರಿಯ ಉಪಾಧ್ಯಕ್ಷ, ಸಿಜಿಐ ಡಾ. ರಾಹುಲ್ ಘೋಡ್ಕೆ ಇವರ ಸಮುಖದಲ್ಲಿ ಇದನ್ನು ಬಿಡುಗಡೆ(Release) ಮಾಡಲಾಯಿತು.
ಮಹಿಳಾ ಸುರಕ್ಷತೆಯ ವಿಚಾರವೂ ಮಹಿಳೆಯರ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಬಿ. ಸೇಫ್ ಕ್ಷೇತ್ರ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿಯ ಒಂದು ವಿಶಿಷ್ಟ ಉಪಕ್ರಮವಾಗಿದ್ದು, ವಿವಿಧ ಪಾಲುದಾರರು, ಸಮುದಾಯಗಳು ಮತ್ತು ವಿಷಯ ತಜ್ಞರನ್ನು ಒಂದು ಸಮಾನ ವೇದಿಕೆಗೆ ತರುತ್ತದೆ. ಸಾರ್ವಜನಿಕ ಸ್ಥಳಗಳ ಸಮೀಕ್ಷೆ, ಸಮುದಾಯ ಜಾಗೃತಿ ಹಾಗೂ ಹಲವು ಸುರಕ್ಷತಾ ಶಿಫಾರಸ್ಸುಗಳ ಮೂಲಕ ಆಕ್ಷೇತ್ರವನ್ನು ಮಹಿಳೆಯರಿಗೆ ಸುರಕ್ಷಿತವಾಗಿರುವಂತೆ ಮಾಡುತ್ತದೆ. ಬಿ.ಎಫ್ ರಾಯಭಾರಿಗಳ ಮೂಲಕ ಈ ಉಪಕ್ರಮವನ್ನು ವಾರ್ಡ್ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಸಿಜೆಐ ಕೆನಡಾ ಮೂಲದ ಜಾಗತಿಕ ತಂತ್ರಜ್ಞಾನ ಮತ್ತು ವಾಣಿಜ್ಯ ಸಲಹಾ ಸಂಸ್ಥೆಯಾಗಿದ್ದು, ಈ ಕಾರ್ಯಕ್ರಮ ಸಿಎಸ್ಆರ್ ಭಾಗವಾಗಿದೆ. ಈ ಕಾರ್ಯಕ್ರಮವನ್ನು ಬಿ.ಎಫ್ ಕ್ಷೇತ್ರ ಉಪಕ್ರಮವು ನಗರ ಎರಡು ವಿಧಾನಸಭಾ ಕ್ಷೇತ್ರಗಳಾದ ಮಹಾದೇವಪುರ ಹಾಗೂ ಮಲ್ಲೇಸ್ವರಂನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮಲ್ಲೇಶ್ವರಂ ಮತ್ತು ಮಹಾದೇವಪುರ ವಿಧಾಸಭಾ ಕ್ಷೇತ್ರಗಳ ಬಿ.ಸೇಫ್ ಕ್ಷೇತ್ರ ಸಾರ್ವಜನಿಕ ಸ್ಥಳಗಳ ಸುರಕ್ಷತ ಸಮೀಕ್ಷಾ ವರದಿ ಒಟ್ಟು 260 ಸಾರ್ವಜನಿಕ ಸ್ಥಳಗಳಲ್ಲಿ ನಡೆಸಿದ ಸಮೀಕ್ಷಾ ವಿಶೇಷಣೆಯನ್ನು ಒಳಗೊಂಡಿದೆ. ವಿಶೇಷಣೆಯ ಆಧಾರದ ಮೇಲೆ, ಪ್ರತಿ ವಾರ್ಡ್ನ ಕಾರ್ಯಕ್ಷಮತೆ, ವಾರ್ಡ್ವಾರು ಹೋಲಿಕೆ ಮತ್ತು ವಾರ್ಡ್ ಮಟ್ಟದ ಅಂಕಗಳು ನೀಡಲಾಗಿದೆ. ವರದಿಯು ಕ್ರಿಯಾ ಯೋಜನೆ ಮತ್ತು ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣದ ಕುರಿತು ಮಾದರಿ ಕ್ಷೇತ್ರವಾಗಿ ಹೊರಹೊಮ್ಮುವ ಮಾರ್ಗವನ್ನು ಒಳಗೊಂಡಿದೆ.
ಈ ಕಾರ್ಯಾಗಾರಕ್ಕೆ ಒಟ್ಟ 45 ಯುವ ಉತ್ಸಾಹಿ ಮಹಿಳೆಯರನ್ನು ಬಿ.ಸೇಫ್ ರಾಯಭಾರಿಗಳಾಗಿ ಆಯ್ಕೆಮಾಡಲಾಯಿತು. ಇವರ ಪೈಕಿ ಮಹಾದೇವಪುರ ವಿಧಾಸಭಾ ಕ್ಷೇತ್ರದಿಂದ 22 ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ 23 ಮಹಿಳೆಯರನ್ನು ಆಯ್ಕೆ ಮಾಡಲಾಗಿತ್ತು. ಈ ರಾಯಭಾರಿಗಳು ಮಹಿಳಾ ಸುರಕ್ಷತೆ, ಸಬಲ್ಲೀಕರಣಕ್ಕಾಗಿ ಸರ್ಕಾರದಿಂದಿರುವ ಯೋಜನೆಗಳು, ಆರ್ಥಿಕ ಸಾಕ್ಷರತೆ, ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಯ ಮೌಲ್ಯ ಮಾಪನ. ಪೊಲೀಸ್ ಮತ್ತು ಇತರ ವಿಷಯಗಳ ಬಗ್ಗೆ ವಿಷಯತಜ್ಞರಿಂದ ತರಬೇತಿ ನಡೆಸಲಾಗಿತ್ತು.
ತರಬೇತಿ ಮುಗಿದ ನಂತರ, ಸಾರ್ವಜನಿಕ ಸ್ಥಳಗಳ ಮೂಲಸೌಕರ್ಯ ವ್ಯವಸ್ಥೆಯ ಕುರಿತು ತಿಳಿಯಲು ಹಾಗೂ ಸೌಕರ್ಯದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಇವರು 2021- 22 ಸಾಲಿನಲ್ಲಿ, 260 ಸಾರ್ವಜನಿಕ ಸ್ಥಳಗಳು ಮತ್ತು 108 ರಸ್ತೆಗಳ ಸುರಕ್ಷತಾ ಸಮೀಕ್ಷೆಯನ್ನು ನಡೆಸಿದರು. ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ, 23 ಅಂಗನವಾಡಿ ಕೇಂದ್ರಗಳು, 71 ಬಸ್ ನಿಲ್ದಾಣಗಳು, 41 ಮೊದಲ ಹಾಗೂ ಕೊನೆಯ ಹಂತದ ಸಾರ್ವಜನಿಕ ಸಾರಿಗೆಯ ಸಂಪರ್ಕ ವ್ಯವಸ್ಥೆ, 30 ಮಾರುಕಟ್ಟೆಗಳು, 37 ಉದ್ಯಾನವನಗಳು, 14 ಪಿಎಚ್ಸಿಗಳು, 12 ಪೊಲೀಸ್ ಠಾಣೆಗಳು, 32 ಸಾರ್ವಜನಿಕ ಶೌಚಾಲಯಗಳನ್ನು ಮಹಿಳೆಯರು ನಿಯಮಿತವಾಗಿ ಬಳಸುವ ಈ 8 ರೀತಿಯ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತಾ ಸಮೀಕ್ಷೆಯನ್ನು ನಡೆಸಲಾಯಿತು.
ಇದನ್ನೂ ಓದಿ:
Book Release: ಶೆಲ್ಫಿಗೇರುವ ಮುನ್ನ; ‘ಚಿಮ್ಮಿದ ರಕ್ತ’ ಇಂದು ಉಮರ್ ಫಾರೂಕ್ ಪುಸ್ತಕ ಬಿಡುಗಡೆ
ಬಸವರಾಜ ಬೊಮ್ಮಾಯಿ ಸಿಎಂ ಅಧಿಕಾರ ಸ್ವೀಕರಿಸಿ ನಾಳೆಗೆ 6 ತಿಂಗಳು; ಆಡಳಿತದ ಪಕ್ಷಿನೋಟ ಪುಸ್ತಕ ಬಿಡುಗಡೆ
Published On - 4:32 pm, Sat, 19 March 22