ಬೆಂಗಳೂರು: ವ್ಯಕ್ತಿಯೊಬ್ಬ ಅನುಕಂಪದ ಅಧಾರದ ಮೇಲೆ ನಕಲಿ ಅಂಕಪಟ್ಟಿ (Mark Card) ನೀಡಿ ಉದ್ಯೋಗ (Job) ಪಡೆಯಲು ಯತ್ನಿಸಿದ್ದಾನೆ. ನಕಲಿ ಅಂಕಪಟ್ಟಿ ನೀಡಿ ಪ್ರಥಮ ದರ್ಜೆ ಹುದ್ದೆ ಪಡೆಯಲು ಯತ್ನಿಸಿರುವ ಆರೋಪ ಕೇಳಿಬಂದಿದ್ದು, ಸಿದ್ಧಲಿಂಗೇಶ ಗಂಗಾಧರ ಬುದ್ನಿ ವಿರುದ್ಧ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ವಿಷ್ಣುವರ್ಧನ ರೆಡ್ಡಿಯಿಂದ ದೂರು ದಾಖಲಾಗಿದೆ. ಇಲಾಖೆಯ ಸೇವೆಯಲ್ಲಿರುವಾಗಲೆ ಸಿದ್ಧಲಿಂಗೇಶ ತಂದೆ ಗಂಗಾಧರ ಬುದ್ನಿ ಮರಣ ಹೊಂದಿದ್ದರು. ಅನುಕಂಪದ ಅಧಾರದ ಮೇಲೆ ಕೆಲಸ ನೀಡುವಂತೆ ಸಿದ್ದಲಿಂಗೇಶ ಪ್ರಸ್ತಾವನೆ ಸಲ್ಲಿಸಿದ್ದ.
ಸಿದ್ದಲಿಂಗೇಶ ಮೊದಲು ದ್ವಿತೀಯ ದರ್ಜೆ ಸಹಾಯಕ ಹುದ್ದೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದ. ಬಾಗಲಕೋಟೆ ಉಪನಿರ್ದೇಶಕರ ಕಚೇರಿಗೆ ದಾಖಲಾತಿಗಳೊಂದಿಗೆ ಮನವಿ ಸಲ್ಲಿಸಿದ್ದ. ಅನಂತರ ಪದವಿ ಪ್ರಮಾಣ ಪತ್ರ ನೀಡಿ ಪ್ರಥಮ ದರ್ಜೆ ಹುದ್ದೆ ನೀಡುವಂತೆ ಕೇಳಿಕೊಂಡಿದ್ದ. ನೇಮಕಾತಿ ಸಂದರ್ಭದಲ್ಲಿ ದಾಖಲಾತಿ ಪರಿಶೀಲನೆ ವೇಳೆ ನಕಲಿ ಅಂಕಪಟ್ಟಿ ನೀಡಿರುವುದು ಪತ್ತೆಯಾಗಿದೆ. ಇಲಾಖೆಗೆ ವಂಚಿಸಿರುವ ಆರೋಪದಡಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಾಗಿದೆ.
ಸಾಫ್ಟ್ವೇರ್ ಕಂಪನಿ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ:
ಹುಬ್ಬಳ್ಳಿ: ಸಾಫ್ಟ್ವೇರ್ ಕಂಪನಿ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ಅಮಿತ್ ಪ್ರಭು, ಅಂಕಿತಾ ಕಾಮತ್, ಬೆಂಗಳೂರಿನ ದೀಪಕ್ ಶರಣಕುಮಾರ್ ಎಂಬುವವರು ಹುಬ್ಬಳ್ಳಿಯ ಸಿಬಿಟಿ ಕಿಲ್ಲಾದ ವಿನೋದ್ ರಾಠೋಡ್ಗೆ ವಂಚನೆ ಮಾಡಿದ್ದಾಗಿ ಆರೋಪ ಕೇಳಿಬಂದಿದೆ. ಆರೋಪಿಗಳು ಬಿಎಲ್ಎಚ್ ಹೈಟೆಕ್ ಪ್ರೈ.ಲಿ ಎಂಬ ಕಂಪನಿ ಹೆಸರಿನಲ್ಲಿ 3.5 ಕೊಟಿ ರೂಪಾಯಿ ವಂಚನೆ ಮಾಡಿದ್ದಾರಂತೆ. ಪ್ರಕರಣ ಸಂಬಂಧ ಹುಬ್ಬಳ್ಳಿ ಶಹರ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ
40 ವರ್ಷದ ನಂತರವೂ ಮಹಿಳೆಯರು ಫಿಟ್ ಆಗಿರುವುದು ಹೇಗೆ? ಇಲ್ಲಿದೆ ಮಾಹಿತಿ
Published On - 9:24 am, Wed, 30 March 22