ಮುಸ್ಲಿಮರ ಬಹಿಷ್ಕಾರದಿಂದ ಸಮಸ್ಯೆ ಗಂಭೀರ: ಪಿಯುಸಿಎಲ್ ಅಧ್ಯಕ್ಷ ಅರವಿಂದ್

ಮುಸ್ಲಿಮರ ಬಹಿಷ್ಕಾರದಿಂದ ಸಮಸ್ಯೆ ಗಂಭೀರ: ಪಿಯುಸಿಎಲ್ ಅಧ್ಯಕ್ಷ ಅರವಿಂದ್

TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 30, 2022 | 6:29 AM

ಯಾವುದೇ ಸಮುದಾಯವನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಬಹಿಷ್ಕರಿಸುವುದು ಸಂವಿಧಾನ ಉಲ್ಲಂಘನೆ ಎಂದು ಪರಿಗಣಿಸಲ್ಪಡುತ್ತದೆ ಮತ್ತು ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರು ಅದನ್ನು ವಿರೋಧಿಸುತ್ತಿದ್ದರು ಎಂದು ಅವರು ಹೇಳುತ್ತಾರೆ.

ಬೆಂಗಳೂರು: ಹಿಂದೂ ದೇವಸ್ಥಾನಗಳ ಆವರಣಗಳಲ್ಲಿ ಮತ್ತು ಜಾತ್ರಾ ಮಹೋತ್ಸವಗಳಲ್ಲಿ ಮುಸ್ಲಿಂ ಸಮುದಾಯದ (Muslim community) ವರ್ತಕರಿಗೆ ವ್ಯಾಪಾರ ಮಾಡದ ಹಾಗೆ ನಿಷೇಧ ಹೇರುತ್ತಿರುವ ಪ್ರಕರಣ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (People’s Union for Civil Liberties) ಹೆಸರಿನ ಮಾನವ ಹಕ್ಕುಗಳ ಅಂಗಳವನ್ನು ತಲುಪಿದ್ದು ಅದರ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಅರವಿಂದ್ (Arvind) ಅವರು ಟಿವಿ9 ಜೊತೆ ಮಾತಾಡಿದ್ದಾರೆ. ದೇವಸ್ಥಾನದ ಆವರಣದಿಂದ ಮುಸ್ಲಿಂ ಸಮುದಾಯದ ವ್ಯಾಪಾರಿಗಳನ್ನು ಬಹಿಷ್ಕರಿಸುವುದು ಸಂವಿಧಾನದ ಮೌಲ್ಯಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳುತ್ತಾರೆ. ಚಾರಿಟೇಬಲ್ ಌಕ್ಟ್ ಬಗ್ಗೆ ವಿವರಣೆ ನೀಡುವ ಅರವಿಂದ್ ಅವರು ಲೈಜನ್ ಮತ್ತು ಲೀಸಿಂಗ್ ನಡುವೆ ವ್ಯತ್ಯಾಸವಿದೆ ಎಂದು ಹೇಳುತ್ತಾರೆ. ಲೈಜನಲ್ಲಿ ಆಸ್ತಿಯ ಒಡೆತnvನ್ನು ತಾತ್ಕಾಲಿಕವಾಗಿ ವರ್ಗಾವಣೆ ಮಾಡಲಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಮುಸ್ಲಿಂ ವ್ಯಾಪಾರಿಗಳನ್ನು ಹಿಂದೂ ದೇಗುಲಗಳ ಆವರಣದಲ್ಲಿ ವ್ಯಾಪಾರ ಮಾಡದಂತೆ ನಿಷೇಧಿಸಲು ಬರುವುದಿಲ್ಲ, ಹಾಗೆ ಮಾಡಿದರೆ ಅದು ಕಾನೂನುಬಾಹಿರ ಅನಿಸಿಕೊಳ್ಳುತ್ತದೆ ಅಂತ ಅರವಿಂದ್ ಹೇಳುತ್ತಾರೆ.

ಎರಡನೇಯದಾಗಿ ಯಾವುದೇ ಸಮುದಾಯವನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಬಹಿಷ್ಕರಿಸುವುದು ಸಂವಿಧಾನ ಉಲ್ಲಂಘನೆ ಎಂದು ಪರಿಗಣಿಸಲ್ಪಡುತ್ತದೆ ಮತ್ತು ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರು ಅದನ್ನು ವಿರೋಧಿಸುತ್ತಿದ್ದರು ಎಂದು ಅವರು ಹೇಳುತ್ತಾರೆ. ಮೂರನೇಯದಾಗಿ ಈ ರೀತಿಯ ಬಹಿಷ್ಕಾರಗಳು ಮಾನವ ಇತಿಹಾಸದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತವೆ ಅಂತ ಅರವಿಂದ್ ಹೇಳುತ್ತಾರೆ. ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ಕಾರುವ ದ್ವೇಷ ಮಾರಣಹೋಮಗಳಲ್ಲಿ ಪರಿವರ್ತನೆಗೊಳ್ಳುತ್ತದೆ ಎಂದು ಹೇಳುವ ಅರವಿಂದ್ ಜರ್ಮನಿ, ರಾಂಡ್ವಾ ಮತ್ತು ಮ್ಯಾನ್ಮಾರ್ ಗಳಲ್ಲಿ ಸಾಮೂಹಿಕ ಹತ್ಯೆಗಳನ್ನು ಉಲ್ಲೇಖಿಸುತ್ತಾರೆ.

ಒಂದು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷ ಕಾರುವ ಮೂಲಕ ಇದು ಅರಂಭವಾಗುತ್ತದೆ, ಮೊದಲ ಹಂತದಲ್ಲಿ ಎಲ್ಲ ಕಡೆ ಆ ಸಮುದಾಯದ ಬಗ್ಗೆ ದ್ವೇಷದ ಮಾತುಗಳನ್ನಾಡಲಾಗುತ್ತದೆ. ಆಮೇಲೆ ಅವರ ಮೇಲೆ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹೇರುವುದು ಆರಂಭವಾಗುತ್ತದೆ. ಇದು ಅಂತಿಮವಾಗಿ ಅ ಸಮುದಾಯದ ಸಾಮೂಹಿಕ ಹತ್ಯೆಯಲ್ಲಿ ಪರ್ಯಾವಸನಗೊಳ್ಳುತ್ತದೆ, ಎಂದು ಅರವಿಂದ್ ಹೇಳುತ್ತಾರೆ. ಹಾಗಾಗಿ, ಬಹಿಷ್ಕಾರದಂಥ ಕೃತ್ಯಗಳನ್ನು ರಾಷ್ಟ್ರಾಧ್ಯಕ್ಷ, ರಾಜ್ಯಪಾಲರು ಮತ್ತು ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಬಹಳ ಗಂಭೀರವಾಗಿ ಪರಿಗಣಿಸಬೇಕು ಮತ್ತು ಅದನ್ನು ತಡೆಯಬೇಕು ಎಂದು ಅರವಿಂದ್ ಹೇಳುತ್ತಾರೆ.

ಇದನ್ನೂ ಓದಿ:  ನಮ್ಮ ಔದಾರ್ಯದಿಂದಾಗಿ ಇದುವರೆಗೆ ದೇವಸ್ಥಾನಗಳಲ್ಲಿ ಸಲಾಂ ಮಂಗಳಾರತಿ ನಡೆಯಿತು, ಇನ್ನು ಮುಂದೆ ಇಲ್ಲ: ಕಲ್ಲಡ್ಕ ಪ್ರಭಾಕರ್ ಭಟ್

Published on: Mar 30, 2022 06:28 AM