ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲು

| Updated By: sandhya thejappa

Updated on: Jun 01, 2022 | 11:59 AM

ರೋಹಿತ್ ಚಕ್ರತೀರ್ಥ ನಾಡಗೀತೆಗೆ ಅವಮಾನ ಮಾಡಿದಂತಹ ವ್ಯಕ್ತಿ. ರಾಜ್ಯವನ್ನ ಕಾಂಗ್ರೆಸ್ಗೆ, ದೇಶವನ್ನ ಅರಬ್ಬಿಗೆ ಹೋಲಿಸಿದಂತಹ ವ್ಯಕ್ತಿ. ಅಂಥವರ ಕೈಗೆ ಪಠ್ಯ ಪುಸ್ತಕ ಪರಿಷ್ಕರಣಾ ಅಧಿಕಾರ ಇರುವುದು ಸರಿಯಲ್ಲ.

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲು
ರೋಹಿತ್ ಚಕ್ರತೀರ್ಥ
Follow us on

ಬೆಂಗಳೂರು: ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪರ- ವಿರೋಧಗಳ ಚರ್ಚೆ ಜೋರಾಗಿದೆ. ಈ ನಡುವೆ ಬೆಂಗಳೂರಿನಲ್ಲಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ (Rohith Chakrathirtha) ವಿರುದ್ಧ ದೂರು ದಾಖಲಾಗಿದೆ. ರೋಹಿತ್ ಚಕ್ರತೀರ್ಥ ನಾಡಗೀತೆಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ (social worker) ಬಿ.ಟಿ.ನಾಗಣ್ಣ ಎಂಬುವವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರೋಹಿತ್ ಚಕ್ರತೀರ್ಥ ನಾಡಗೀತೆಗೆ ಅವಮಾನ ಮಾಡಿದಂತಹ ವ್ಯಕ್ತಿ. ರಾಜ್ಯವನ್ನ ಕಾಂಗ್ರೆಸ್ಗೆ, ದೇಶವನ್ನ ಅರಬ್ಬಿಗೆ ಹೋಲಿಸಿದಂತಹ ವ್ಯಕ್ತಿ. ಅಂಥವರ ಕೈಗೆ ಪಠ್ಯ ಪುಸ್ತಕ ಪರಿಷ್ಕರಣಾ ಅಧಿಕಾರ ಇರುವುದು ಸರಿಯಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಬಿ.ಟಿ.ನಾಗಣ್ಣ ದೂರು ನೀಡಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ:
ಬೆಳಗಾವಿ: ಪಠ್ಯಪುಸ್ತಕ ಪರಿಷ್ಕರಣೆ ವಿವಾದದಿಂದ ವಿದ್ಯಾರ್ಥಿಗಳು, ಪಾಲಕರಿಗೆ ಗೊಂದಲ ಉಂಟಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹಿರಿಯ ಸಾಹಿತಿ, ಪತ್ರಕರ್ತ ಸರಜೂ ಕಾಟ್ಕರ್ ಅಸಮಾಧಾನ ಹೊರಹಾಕಿದ್ದಾರೆ. ಕನ್ನಡ ಪಠ್ಯಪುಸ್ತಕದಲ್ಲಿದ್ದ ತಮ್ಮ ಕವಿತೆ, ಶಬ್ದಗಳು ವಾಪಸ್ ಪಡೆಯುವುದಾಗಿ ಸರಜೂ ಕಾಟ್ಕರ್  ಶಿಕ್ಷಣ ಸಚಿವ ಬಿಸಿ ನಾಗೇಶ್‌ಗೆ ಪತ್ರ ಬರೆದಿದ್ದಾರೆ. ಒಂಬತ್ತನೆ ತರಗತಿಯ ಕನ್ನಡ ಭಾಷೆ ಪಠ್ಯಪುಸ್ತಕದಲ್ಲಿ ಸರಜೂ ಕಾಟ್ಕರ್ ಕವಿತೆಯಿದೆ. ಇಷ್ಟು ವರ್ಷಗಳ ಕಾಲದ ಬದ್ಧತೆಯ ಕಾರಣಕ್ಕೆ, ನನ್ನ ಕವಿತೆಗೆ ಈ ಹಿಂದೆ ಕೊಟ್ಟ ಒಪ್ಪಿಗೆ ಹಿಂದೆ ಪಡೆಯುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಇದನ್ನೂ ಓದಿ
ಕಾಂಗ್ರೆಸ್​ ಪಕ್ಷಕ್ಕೆ ಗುಡ್​ಬೈ ಹೇಳಿದ ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್​ ಕಾಳಪ್ಪ
ಪ್ರಶಾಂತ್ ನೀಲ್ ಜತೆ ಸ್ಪರ್ಧೆಗೆ ಇಳಿಯಲಿದ್ದಾರೆ ‘ಪುಷ್ಪ 2’ ನಿರ್ದೇಶಕ ಸುಕುಮಾರ್​; ಗೆಲ್ಲೋದು ಯಾರು?
30ರ ಹರೆಯದ ಮಹಿಳೆಯರು ಫಿಟ್ ಆಗಿರಲು ಈ ಆಹಾರ ಸಲಹೆಗಳನ್ನು ಫಾಲೋ ಮಾಡಿ
ರಾಷ್ಟ್ರಧ್ವಜದ ಅವಹೇಳನ ಆರೋಪ: ಈಶ್ವರಪ್ಪ ವಿರುದ್ಧ ದೆಹಲಿಯಲ್ಲಿ ದೂರು ದಾಖಲು

ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲಾಗಿದೆ

ಇದನ್ನೂ ಓದಿ: ಐರೋಪ್ಯ ರಾಷ್ಟ್ರಗಳ ನಿಷೇಧದ ಹಿನ್ನೆಲೆಯಲ್ಲಿ ರಷ್ಯಾ ಕಚ್ಚಾ ತೈಲವನ್ನು ಭಾರತ ಮತ್ತು ಚೀನಾಗೆ ಮಾರಲು ಬಯಸುತ್ತಿದೆ

ವರದಿ ಬಂದ ಮೇಲೆ ತೀರ್ಮಾನ- ಸಿಎಂ ಬೊಮ್ಮಾಯಿ:
ಶಿಕ್ಷಣ ಸಚಿವರ ಬಳಿ ಸಮಗ್ರ ವರದಿ ಕೇಳಿದ್ದೇನೆ. ಎರಡು ವರ್ಗದ ಬೇರೆ ಬೇರೆ ಚರ್ಚೆ ಇದೆ. ಪರಿಷ್ಕರಣೆ ಸರಿ ಮತ್ತು ತಪ್ಪು ಎಂಬ ಚರ್ಚೆಗಳು ನಡೆಯುತ್ತಿವೆ. ಸಚಿವರು ನಾಳೆ ವರದಿ ಕೊಡುತ್ತಾರೆ. ವರದಿ ಬಂದ ಮೇಲೆ ತೀರ್ಮಾನ ಮಾಡುತ್ತೇವೆ. ಸಾಹಿತಿಗಳು, ಸ್ವಾಮಿಗಳು ಪತ್ರ ಬರೆದಿದ್ದಾರೆ. ಪಾಠ ವಾಪಾಸ್ ಪಡೆಯಬೇಕು ಎಂದವರ ಬಳಿ ಮಾತನಾಡುತ್ತೇನೆ ಎಂದು ಉಡುಪಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಇನ್ನು ಪಠ್ಯಪುಸ್ತಕದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ತರಳಬಾಳು ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ಬಸವಣ್ಣ ಜನಿವಾರ ಕಿತ್ತು ಹಾಕಿ ಕೂಡಲ ಸಂಗಮಕ್ಕೆ ತೆರಳಿದ್ದರು. ಈ ಹಿಂದಿನ ಪಠ್ಯ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ. ಹೊಸ ಪಠ್ಯದಲ್ಲಿ ಜನಿವಾರ ದೀಕ್ಷೆ ಪಡೆದು ಕೂಡಲ ಸಂಗಮಕ್ಕೆ ತೆರಳಿದರು ಎಂದಾಗಿದೆ. ಶೈವ ಗುರುಗಳಿಂದ ಲಿಂಗದೀಕ್ಷೆ ಪಡೆದರು ಎಂದು ಬದಲಿಸಿದ್ದಾರೆ. ಬಸವೇಶ್ವರರಿಗೆ ಅಂತರಂಗದ ಅರಿವೇ ಗುರುಪಥ ತೋರಿದೆ. ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯ ಆಗಿತ್ತು. ಬಸವಣ್ಣನವರಿಗೆ ಅಂತರಂಗದಲ್ಲೇ ಜ್ಞಾನೋದಯ ಆಗಿತ್ತು. ವಿಶ್ವಗುರು ಬಸವೇಶ್ವರರು ಇಷ್ಟಲಿಂಗದ ಜನಕರು.  ಬಸವೇಶ್ವರರು ಲಿಂಗಾಯತ ಧರ್ಮದ ಸಂಸ್ಥಾಪಕರು. ಹೊಸ ಪಠ್ಯದಲ್ಲಿ ಬಸವೇಶ್ವರ ತತ್ವ ತಿರುಚುವ ಕೆಲಸ ಆಗಿದೆ. ಇದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ. ಬಸವತತ್ವಕ್ಕೆ ಅಪಚಾರದ ಆಗದ ರೀತಿ ಪಠ್ಯ ರಚಿಸಬೇಕು. ಇಲ್ಲವಾದಲ್ಲಿ ಈ ಹಿಂದಿನ ಪಠ್ಯವನ್ನೇ ಮುಂದುವರೆಸಬೇಕು. ಈ ಬಗ್ಗೆ ಈಗಾಗಲೇ ಸಿಎಂ, ಶಿಕ್ಷಣ ಸಚಿವರಿಗೆ ಸೂಚಿಸಿದ್ದೇವೆ. ಸರ್ಕಾರ ನಮ್ಮ ಸೂಚನೆ ಪರಿಗಣಿಸುವ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಇಂದು ಅಯೋಧ್ಯೆಯಲ್ಲಿ ರಾಮಮಂದಿರ ಗರ್ಭಗೃಹ ನಿರ್ಮಾಣಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಶಂಕುಸ್ಥಾಪನೆ

ಚಪ್ಪಲಿಯಿಂದ ಹೊಡೆದು ಪ್ರತಿಭಟನೆ:
ದಾವಣಗೆರೆ ನಗರದ ಪ್ರಮುಖ ಬೀದಿಗಳಲ್ಲಿ‌ ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಚಕ್ರತೀರ್ಥ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾಷಾ ಪಠ್ಯ ಹಾಗೂ ಸಮಾಜ ವಿಜ್ಞಾನ ಪಠ್ಯದಲ್ಲಿ ಗಮನಾರ್ಹ ಬದಲಾವಣೆ ಮಾಡಿದ್ದು, ಮಕ್ಕಳಲ್ಲಿ ದ್ವೇಷ ಹುಟ್ಟಿಸುವ ಹಾಗೂ ಮಹಾತ್ಮರ ಬಗ್ಗೆ ತಪ್ಪು ಸಂದೇಶ ನೀಡಲಾಗುತ್ತಿದೆ. ತಕ್ಷಣ ರೋಹಿತ್ ಚಕ್ರತೀರ್ಥ ಅವರನ್ನ ವಜಾ ಮಾಡಬೇಕೆಂದು ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:26 am, Wed, 1 June 22