ಟಿವಿ ನೋಡಬೇಡ ಎಂದಿದ್ದಕ್ಕೆ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ

| Updated By: sandhya thejappa

Updated on: Jan 10, 2022 | 11:21 AM

ಸಾದಿಲ್ ಮನೆಯಲ್ಲೇ ಇರುತ್ತಿದ್ದ. ನಿನ್ನೆ ರಾತ್ರಿ ಕೆಲಸದಿಂದ ಬಂದಿದ್ದ ಸಾದಿಲ್ ತಂದೆ, ಯಾವಾಗಲು ಮನೆಯಲ್ಲಿ ಟಿವಿ ನೋಡಿಕೊಂಡು ಇರುತ್ತೀಯ. ಕೆಲಸ ಮಾಡಲ್ವಾ? ದುಡಿಯಲ್ವಾ? ಎಂದು ಪ್ರಶ್ನಿಸಿ ಬೈದಿದ್ದಾರೆ.

ಟಿವಿ ನೋಡಬೇಡ ಎಂದಿದ್ದಕ್ಕೆ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ
ಆತ್ಮಹತ್ಯೆಗೆ ಶರಣಾದ ಯುವಕ
Follow us on

ಬೆಂಗಳೂರು: ಟಿವಿ ನೋಡಬೇಡ ಅಂತ ಪೋಷಕರು ಹೇಳಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಾಕು ಇರಿದುಕೊಂಡು ಯುವಕ ಸೈಯದ್ ಸಾಹಿಲ್ ಎಂಬಾತ ಬೆಂಗಳೂರಿನ ಜೆ.ಜೆ.ನಗರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೈಯದ್ ತಂದೆ ಟಿವಿ ನೋಡಬೇಡ ಎಂದಿದ್ದಕ್ಕೆ 23 ವರ್ಷದ ಯುವಕ ಮನೆಯಲ್ಲಿ ಜಗಳವಾಡಿದ್ದನಂತೆ. ನಿನ್ನೆರಾತ್ರಿ ಹತ್ತು ಗಂಟೆಗೆ ಈ ಘಟನೆ ನಡೆದಿದ್ದು, ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಸಾದಿಲ್ ಮನೆಯಲ್ಲೇ ಇರುತ್ತಿದ್ದ. ನಿನ್ನೆ ರಾತ್ರಿ ಕೆಲಸದಿಂದ ಬಂದಿದ್ದ ಸಾದಿಲ್ ತಂದೆ, ಯಾವಾಗಲು ಮನೆಯಲ್ಲಿ ಟಿವಿ ನೋಡಿಕೊಂಡು ಇರುತ್ತೀಯ. ಕೆಲಸ ಮಾಡಲ್ವಾ? ದುಡಿಯಲ್ವಾ? ಎಂದು ಪ್ರಶ್ನಿಸಿ ಬೈದಿದ್ದಾರೆ. ಈ ವೇಳೆ ಟಿವಿ ರಿಮೋಟ್ ಬಿಸಾಕಿ ಅಡುಗೆ ಮನೆಗೆ ತೆರಳಿದ್ದ ಸಾಹಿಲ್, ಅಡುಗೆ ಮನೆಯಲ್ಲಿ ಇದ್ದ ಚಾಕು ತೆಗೆದುಕೊಂಡು ಇರಿದುಕೊಂಡಿದ್ದಾನೆ. ನಂತರ ಪೋಷಕರು ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಳವಾಗಿ ಗಾಯಗೊಂಡು ತೀವ್ರ ರಕ್ತ ಸ್ರಾವದಿಂದ ಸಾಹಿಲ್ ಮೃತಪಟ್ಟಿದ್ದಾನೆ.

ಮಹಿಳಾ ಟೆಕ್ಕಿ ಆತ್ಮಹತ್ಯೆ
ಹುಬ್ಬಳ್ಳಿ: ಲಾಡ್ಜ್​ನಲ್ಲಿ ಮಹಿಳಾ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರಿನ ಶಾಂತಲಾ ಸುಪ್ರೀತ್ ಬೆಳಗಾವಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗಳ ಸಾವಿನಿಂದ ಮನನೊಂದಿದ್ದ ಇಂಜಿನಿಯರ್, ಇದೇ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಿನ ನೆಲಮಂಗಲದಲ್ಲಿ ಶಾಂತಲಾ ಪರಿಸರ ಅಭಿಯಂತರರಾಗಿದ್ದರು. ಪತಿ ಸುಪ್ರೀತ್ ಹುಬ್ಬಳ್ಳಿಯಲ್ಲಿ ಲೀಸ್ ಮೇಲೆ ನಡೆಸುತ್ತಿರುವ ಲಾಡ್ಜ್ಗೆ ಶಾಂತಲಾ ಬಂದಿದ್ದರು. ಅಕ್ಟೋಬರ್ 2021ರಲ್ಲಿ ಶಾಂತಲಾ ಪುತ್ರಿ ಆತ್ಮಹತ್ಯೆಗೆ ಶರಣಾಗಿದ್ದಳು. ಇದೇ ವಿಚಾರವಾಗಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅನುಮಾನ ಮೂಡಿದೆ.

ಇದನ್ನೂ ಓದಿ

Punjab National Bank: ನಗದು ಡೆಪಾಸಿಟ್​ನಿಂದ ವಿಥ್​ಡ್ರಾವರೆಗೆ, ಲಾಕರ್​ ಶುಲ್ಕದಿಂದ ಅಕೌಂಟ್​ ಕ್ಲೋಸ್​ ತನಕ ಪಿಎನ್​ಬಿಯಲ್ಲಿ ಬದಲಾವಣೆ

ಪೊಲೀಸ್​ ಅವತಾರದ ಮೂಲಕ ಭಕ್ತರಿಗೆ ದರ್ಶನ ನೀಡಿದ ಕಾಶಿಯ ಕೊತ್ವಾಲ ‘ಬಾಬಾ ಕಾಲಭೈರವ’