ಸಚಿವ ಎಸ್ ಟಿ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್​ಮೇಲ್​ ಪ್ರಕರಣ; OTP ಕೊಟ್ಟಿದ್ದಕ್ಕೆ ಇಷ್ಟೆಲ್ಲ ಆಗಿದ್ದು ಎಂದ ಶಾಸಕ ಯಶವಂತರಾಯಗೌಡ ಪಾಟೀಲ್

ಸಚಿವ ಎಸ್ ಟಿ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್​ಮೇಲ್​ ಪ್ರಕರಣ; OTP ಕೊಟ್ಟಿದ್ದಕ್ಕೆ ಇಷ್ಟೆಲ್ಲ ಆಗಿದ್ದು ಎಂದ ಶಾಸಕ ಯಶವಂತರಾಯಗೌಡ ಪಾಟೀಲ್
ಸಚಿವ ಸೋಮಶೇಖರ್‌ ಮತ್ತು ಪುತ್ರ ನಿಶಾಂತ್

ಸೋಮಶೇಖರ್ ಪುತ್ರ, ನನ್ನ ಪುತ್ರಿ ಕ್ಲಾಸ್​ಮೇಟ್ಸ್ ಅಲ್ಲ. ಅವರಿಬ್ಬರಿಗೂ ಯಾವುದೇ ರೀತಿಯ ಸಂಬಂಧವೇ ಇಲ್ಲ. ರಾಹುಲ್ ಕೂಡ ನನ್ನ ಪುತ್ರಿಗೆ ಯಾವುದೇ ಪರಿಚಯವಿಲ್ಲ. ರಾಕೇಶ್ ಅಣ್ಣಪ್ಪ ಮಾತ್ರ ನನ್ನ ಪುತ್ರಿಗೆ ಪರಿಚಯವಿದ್ದಾರೆ.

TV9kannada Web Team

| Edited By: sandhya thejappa

Jan 10, 2022 | 12:05 PM

ಬೆಂಗಳೂರು: ಸಚಿವ ಎಸ್ ಟಿ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್​ಮೇಲ್​ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ನನ್ನ ಪುತ್ರಿಯ ಮೇಲೆ ಆರೋಪ ಕೇಳಿಬಂದಿದೆ. ಡಿಸೆಂಬರ್ 28ರಂದು ಸಿಸಿಬಿ ಅಧಿಕಾರಿಗಳು ನನ್ನ ಮನೆಗೆ ಬಂದಿದ್ದರು. ಡಿಸೆಂಬರ್ 29ರಂದು ಮದುವೆ ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದೆ. ಸಚಿವ ಎಸ್ ಟಿ ಸೋಮಶೇಖರ್ ಜತೆ ಚರ್ಚಿಸಿದ್ದೆ. ಸೋಮಶೇಖರ್, ನಾನು ಒಳ್ಳೆಯ ಸ್ನೇಹಿತರಾಗಿದ್ದೇವೆ. ಈ ಬಗ್ಗೆ ತನಿಖೆ ಮಾಡುವ ಬಗ್ಗೆ ಚರ್ಚೆ ಮಾಡಿದೆವು. ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿ ಎಂದು ಚರ್ಚೆ ಮಾಡಿದ್ದೇವೆ. ನನ್ನ ಪುತ್ರಿ ಯಾವುದೇ ರೀತಿಯ ತಪ್ಪು ಮಾಡಿಲ್ಲ ಅಂತ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ನಮ್ಮನ್ನು ಏಕೆ ಎಳೆದುತಂದರೆಂಬ ಪ್ರಶ್ನೆಯಿದೆ. ಈ ಬಗ್ಗೆ ಸ್ಪಷ್ಟನೆ ಸಿಗಬೇಕಿದೆ ಎಂದು ಮಾತನಾಡಿದ ಯಶವಂತರಾಯಗೌಡ ಪಾಟೀಲ್, ನನ್ನ ಪುತ್ರಿಯನ್ನೂ ಇಲ್ಲಿಗೆ ಕರೆಸಿದ್ದೇನೆ, ತನಿಖೆಗೆ ಸಹಕರಿಸ್ತಾರೆ. ಇದರ ಹಿಂದೆ ಯಾವುದಾದರೂ ರಾಜಕಾರಣ ಇದೆಯಾ? ನನ್ನ ವಿರುದ್ಧ ಬೇಕಾದರೆ ರಾಜಕೀಯ ಮಾಡಿಕೊಳ್ಳಲಿ. ಆದರೆ ನನ್ನ ಕುಟುಂಬಸ್ಥರನ್ನು ಎಳೆದು ತರುವುದು ಬೇಡ ಅಂತ ಅಭಿಪ್ರಾಯಪಟ್ಟರು.

ಸೋಮಶೇಖರ್ ಪುತ್ರ, ನನ್ನ ಪುತ್ರಿ ಕ್ಲಾಸ್​ಮೇಟ್ಸ್ ಅಲ್ಲ. ಅವರಿಬ್ಬರಿಗೂ ಯಾವುದೇ ರೀತಿಯ ಸಂಬಂಧವೇ ಇಲ್ಲ. ರಾಹುಲ್ ಕೂಡ ನನ್ನ ಪುತ್ರಿಗೆ ಯಾವುದೇ ಪರಿಚಯವಿಲ್ಲ. ರಾಕೇಶ್ ಅಣ್ಣಪ್ಪ ಮಾತ್ರ ನನ್ನ ಪುತ್ರಿಗೆ ಪರಿಚಯವಿದ್ದಾರೆ. ರಾಕೇಶ್ ಅಣ್ಣಪ್ಪ ಕೇಳಿದ್ದಕ್ಕೆ ನನ್ನ ಪುತ್ರಿ ಒಟಿಪಿ ನೀಡಿದ್ದಾರೆ. ಒಟಿಪಿ ಕೇಳಿದ್ದಕ್ಕೆ ನನ್ನ ಪುತ್ರಿ ಸಹಾಯ ಮಾಡಿದ್ದಾರಷ್ಟೇ. ಇಷ್ಟಕ್ಕೆ ಇದೆಲ್ಲಾ ಆಗುತ್ತೆ ಎಂದು ಊಹೆ ಮಾಡಿರಲಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಒಟಿಪಿ ನಂಬರ್ ಸೆಂಡ್ ಮಾಡಿದ್ದಕ್ಕೆ ಇಷ್ಟೆಲ್ಲಾ ನಡೆದಿದೆ ಅಂತ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ.

ರಾಕೇಶ್ ಅಣ್ಣಪ್ಪ, ನನ್ನ ಪುತ್ರಿ ಇಬ್ಬರೂ ಕ್ಲಾಸ್​ಮೇಟ್ಸ್. ಹೀಗಾಗಿ ನನ್ನ ಪುತ್ರಿ ಅಣ್ಣಪ್ಪಗೆ ಒಟಿಪಿಯನ್ನು ನೀಡಿದ್ದಾರೆ. ರಾಕೇಶ್ ಅಣ್ಣಪ್ಪ ಏನು ಮಾಡಿದ್ದಾನೆಂಬುದು ನನಗೆ ಗೊತ್ತಿಲ್ಲ. ಏನಾಗಿದೆ ಎಂಬುದು ರಾಕೇಶ್ ಅಣ್ಣಪ್ಪನೇ ಹೇಳಬೇಕಾಗಿದೆ. ಯಾವುದೇ ಕಾರಣಕ್ಕೂ ಕುಟುಂಬಗಳನ್ನು ಎಳೆದು ತರಬೇಡಿ. ಅದರ ಕಷ್ಟ ಏನೆಂದು ನಿನ್ನೆ ರಾತ್ರಿ ನಾನು ಅನುಭವಿಸಿದ್ದೇನೆ ಅಂತ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದರು.

ಇದನ್ನೂ ಓದಿ

Virat Kohli: ಕೋಚ್ ದ್ರಾವಿಡ್ ದಾಖಲೆಯನ್ನು ಪುಡಿ ಮಾಡಲು ಹೊರಟ ವಿರಾಟ್ ಕೊಹ್ಲಿ

‘ನಟ ಸಾರ್ವಭೌಮ’ ಸಿನಿಮಾ ನಟಿಯ ಲಿಪ್​ ಕಿಸ್​ ಪುರಾಣ; ಸಖತ್ ಟ್ರೋಲ್​ ಆಗುತ್ತಿರುವ ಅನುಪಮಾ

Follow us on

Related Stories

Most Read Stories

Click on your DTH Provider to Add TV9 Kannada