ಕಾಂಗ್ರೆಸ್ ಭಂಡತನದ ರಾಜಕೀಯ ಮಾಡುತ್ತಿದೆ: ಸಚಿವ ಡಾ.ಅಶ್ವತ್ಥ್ ನಾರಾಯಣ
ಪಾದಯಾತ್ರೆ ಮಾಡಿದರೆ ಅಧಿಕಾರ ಸಿಗುತ್ತದೆ ಎಂಬ ಅಭಿಪ್ರಾಯ ಕಾಂಗ್ರೆಸ್ ಅವರಲ್ಲಿ ಇದೆ. ಪಾದಯಾತ್ರೆ ಮಾಡೆಲ್ ಆಗಿಬಿಟ್ಟಿದೆ. ಇದೊಂದು ಸ್ವಾರ್ಥ, ಪಶ್ಚಾತ್ತಾಪದ ಯಾತ್ರೆಯಾಗಿದೆ. ಇದೊಂದು ರಾಜಕೀಯ ಡ್ರಾಮಾ ಆಗಿದೆ ಅಷ್ಟೇ ಎಂದು ಸಚಿವ ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಬೆಂಗಳೂರು: ಮೇಕೆದಾಟು ಯೋಜನೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಸರ್ಕಾರ ಏನು ಕೆಲಸ ಮಾಡುತ್ತಿದೆ ಎಂದು ಸಹ ಹೇಳಿದ್ದೇವೆ. ಪಾದಯಾತ್ರೆ (mekedatu padayatra) ಮಾಡಬೇಡಿ ಎಂದು ಮನವಿ ಮಾಡಿದ್ದೇವೆ. ಆದರೂ ನಿಯಮ ಉಲ್ಲಂಘಿಸಿ ಪಾದಯಾತ್ರೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಈಗಾಗಲೇ 20 ಜನರ ಮೇಲೆ ಕೇಸ್ ದಾಖಲು ಮಾಡಲಾಗಿದೆ. ಕೇಸ್ ಹಾಕಿದ ಮೇಲೆ ಅದರ ನಿಯಮಾನುಸಾರ ಕ್ರಮ ಕೈಗೊಳ್ಳಲಿದೆ. ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಿದೆ. ರಾಜಕೀಯವಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಅಷ್ಟೇ. ಸ್ವಾರ್ಥಕ್ಕಾಗಿ ಅವರ ಏಳಿಗಾಗಿ ಈ ಪಾದಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಭಂಡತನದ ರಾಜಕೀಯ ಮಾಡುತ್ತಿದೆ ಎಂದು ಬೆಂಗಳೂರಿನಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಕಾಂಗ್ರೆಸ್‌ನವರಿಗೆ ಜನರಿಗೆ ಏನೇ ಆದರೂ ಪರವಾಗಿಲ್ಲ. ಕಾಂಗ್ರೆಸ್ ಪ್ರಚಾರದಲ್ಲಿ ಇರಬೇಕೆಂದು ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ಡಿಕೆ ಇವೆಂಟ್. ಪಾದಯಾತ್ರೆ ಮಾಡಿದರೆ ಅಧಿಕಾರ ಸಿಗುತ್ತದೆ ಎಂಬ ಅಭಿಪ್ರಾಯ ಕಾಂಗ್ರೆಸ್ ಅವರಲ್ಲಿ ಇದೆ. ಪಾದಯಾತ್ರೆ ಮಾಡೆಲ್ ಆಗಿಬಿಟ್ಟಿದೆ. ಇದೊಂದು ಸ್ವಾರ್ಥ, ಪಶ್ಚಾತ್ತಾಪದ ಯಾತ್ರೆಯಾಗಿದೆ. ಇದೊಂದು ರಾಜಕೀಯ ಡ್ರಾಮಾ ಆಗಿದೆ ಅಷ್ಟೇ ಎಂದು ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಜನರ ಮುಂದೆ ಇವರ ಉದ್ದೇಶ ಸಂಪೂರ್ಣ ಬದಲಾಗಿದೆ. ರಾಜಕೀಯವಾಗಿ ಇದಕ್ಕೆ ಉತ್ತರ ಕೊಡುತ್ತೇವೆ. ಕಾನೂನು ಪಾಲನೆ ಮಾಡಿ ಅಂದರೆ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಜನರೂ ಕೂಡ ಇದೇ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿಕೆ ನೀಡಿದ್ದಾರೆ.
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ರಾಮನಗರದಲ್ಲಿ ನಾಳೆ (ಜನವರಿ 11) ಬಿಜೆಪಿ ಸುದ್ದಿಗೋಷ್ಠಿ ನಡೆಸಲಿದೆ. ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಡಿಕೆಶಿ ಈ ವಿಚಾರದ ಬಗ್ಗೆ ಸದನದಲ್ಲಿ ಮಾತಾಡಿದ್ದಾರಾ? ಸದನದಲ್ಲಿ ಡಿಕೆಶಿ ಎಷ್ಟು ಬಾರಿ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಏಕಾಏಕಿ ಬಂದು ಪಾದಯಾತ್ರೆ ಮಾಡುತ್ತಾರೆ ಅಂದರೆ ನೀವೆ ಯೋಚನೆ ಮಾಡಿ ಎಂದು ಬೆಂಗಳೂರಿನಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಡಿಕೆಶಿ, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ತ್ರಿಮೂರ್ತಿಗಳಿದ್ದಂತೆ: ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಡಿಕೆಶಿ, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ತ್ರಿಮೂರ್ತಿಗಳಿದ್ದಂತೆ. ಇವರು ರಾಜಕೀಯವಾಗಿ ಮೇಲೆ ಬರಬೇಕೆಂದು ಯತ್ನಿಸುತ್ತಿದ್ದಾರೆ. ಅವರಿಗೆ ಅವರ ಮೇಲೆ ಎಷ್ಟೆಷ್ಟು ಪ್ರೀತಿ ಇದೆ ಎಂದು ನೋಡಬೇಕು ಎಂದು ಬೆಂಗಳೂರಿನಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ವ್ಯಂಗ್ಯ ಮಾಡಿದ್ದಾರೆ.
ಬಳಿಕ ಸ್ವ್ಯಾಬ್ ಟೆಸ್ಟ್ಗೆ ಬಂದ ಆರೋಗ್ಯ ಇಲಾಖೆ ಅಧಿಕಾರಿ ವಿರುದ್ಧ ಡಿಕೆಶಿ ಗರಂ ಆದ ವಿಚಾರಕ್ಕೆ ಸಂಬಂಧಪಟ್ಟಂತೆ ಅಶ್ವತ್ಥ ನಾರಾಯಣ ಅವರು ಮಾತನಾಡಿದ್ದಾರೆ. ಅವರು ಸಹಕರಿಸಬೇಕಿತ್ತು. ಪರೀಕ್ಷೆ ಮಾಡಿಸಿಕೊಳ್ಳಬೇಕೋ, ಬೇಡ್ವೋ ಅನ್ನೋದು ಅವರ ನಿರ್ಧಾರ ಸರಿ. ಅದು ಅವರ ಹಕ್ಕಿರಬಹುದು ಇಲ್ಲ ಅಂತ ಹೇಳೋದಿಲ್ಲ. ಅದನ್ನು ಅವರು ಹೇಳಬಹುದಿತ್ತು. ಆದರೆ ಕಾನೂನಿನಲ್ಲಿ ಸಹ ಅಧಿಕಾರವಿದೆ. ಜನರ ಗುಂಪಿನಲ್ಲಿ ಸುತ್ತಮುತ್ತ ಸೊಂಕಿದ್ದರೆ ಟೆಸ್ಟ್ ಮಾಡಿಸಿಕೊಳ್ಳಬೇಕು. ಪ್ಯಾಂಡಮಿಕ್ ಆಕ್ಟ್ ಪ್ರಕಾರ ಅವರು ಕಡ್ಡಾಯವಾಗಿ ಟೆಸ್ಟ್ ಮಾಡಿಸಿಕೊಳ್ಳಬೇಕು. ಈ ರೀತಿ ಭಂಡತನವಾಗಿ ನಡೆದುಕೊಂಡಿದ್ದು ಸರಿಯಲ್ಲ. ಇವರ ನಡುವಳಿಕೆಯಿಂದ ಜನರು ಸಹ ಬೆಸತ್ತು ಹೋಗಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಪಾದಯಾತ್ರೆ; ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ 30 ಜನರ ವಿರುದ್ಧ ಪ್ರಕರಣ ದಾಖಲು
Published On - 2:36 pm, Mon, 10 January 22