ಬೆಂಗಳೂರು, ಜ.03: ಯುವಕನೊಬ್ಬ ತೆಗೆದುಕೊಂಡ ಹೊಸ ಮೊಬೈಲ್ ಆತನ ಬಾಳಿಗೆಯೇ ಕಂಟಕವಾಗಿದೆ. ಮೊಬೈಲ್ ಬ್ಲಾಸ್ಟ್(Mobile Blast)ಆಗಿ ಯುವಕನ ತೊಡೆಗೆ ಗಾಯವಾಗಿದೆ. ವೈಟ್ ಫೀಲ್ಡ್ನಲ್ಲಿ ವಾಸವಿದ್ದ 24 ವರ್ಷದ ಯುವಕ ಪ್ರಸಾದ್ ಎನ್ನುವವರು ಅಕ್ಟೋಬರ್ ತಿಂಗಳಲ್ಲಿ ಒನ್ ಪ್ಲಸ್(1+) ಕಂಪನಿಯ ಮೊಬೈಲ್ ಖರೀದಿಸಿದ್ದರು. ಅದರಂತೆ ಇಂದು ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ ಜೇಬಿನಲ್ಲಿ ಇಟ್ಟುಕೊಂಡಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆಗಿದೆ.
ಇನ್ನು ಈ ಘಟನೆ ಮೊಬೈಲ್ ಶೋ ರೂಂ ಗಮನಕ್ಕೆ ಬರುತ್ತಿದ್ದಂತೆ ‘ಈಗ ಮೆಡಿಕಲ್ ವೆಚ್ಚದ ಜೊತೆಗೆ ಮೊಬೈಲ್ ಹಣ ಕೊಡುತ್ತೇವೆ ಎನ್ನುತ್ತಿದ್ದಾರೆ. ಇತ್ತ ಸರ್ಜರಿಗೆ ಬರೋಬ್ಬರಿ 4 ಲಕ್ಷ ರೂ. ಖರ್ಚು ಆಗುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇದರಿಂದ ಪೂರ್ಣ ಪ್ರಮಾಣದ ಬಿಲ್ ಭರಿಸುವಂತೆ ಗಾಯಾಳು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಸಮಸ್ಯೆ ಹೇಳಿಕೊಳ್ಳಲು ಮೊಬೈಲ್ ಸೆಂಟರ್ಗೆ ಹೋದ್ರೆ ಸರಿಯಾಗಿ ಸ್ಪಂದಿಸದ ಆರೋಪ ಕೂಡ ಕೇಳಿಬಂದಿದೆ.
ಇದನ್ನೂ ಓದಿ:ಎಚ್ಚರ: ಎಂದಿಗೂ ಹೀಗೆ ಮಾಡಿದಿರಿ: ನಿಮ್ಮ ಮೊಬೈಲ್ ಕೂಡ ಬ್ಲಾಸ್ಟ್ ಆಗಬಹುದು
ವೈಟ್ ಫೀಲ್ಡ್ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರಸಾದ್, ಈಗ ಮೊಬೈಲ್ ಬ್ಲಾಸ್ಟ್ನಿಂದ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಕೆಲಸ ಇಲ್ಲದೇ ರೆಸ್ಟ್ ಮಾಡಿದ್ರೆ, ಹಣ ಯಾರು ಕೊಡುತ್ತಾರೆ ಎಂಬಂತಹ ಪ್ರಶ್ನೆ ಎದುರಾಗಿದೆ. ಈ ಹಿನ್ನಲೆ ಕಂಪನಿಯವರೇ ಸಂಪೂರ್ಣ ವೆಚ್ಚ ಭರಿಸಬೇಕು ಎಂದು ಆಗ್ರಹಿಸಿತ್ತಿದ್ದು, ವಕೀಲರ ಮೊರೆ ಹೋಗಲು ಮುಂದಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ