ಬೆಂಗಳೂರು: ಎಸಿಬಿ ಎಡಿಜಿಪಿ ವಿರುದ್ಧ ನ್ಯಾ.ಹೆಚ್.ಪಿ.ಸಂದೇಶ್(Judge HP Sandesh) ಟೀಕೆ ಹಿನ್ನೆಲೆ ಟೀಕೆಗೆ ನಿರ್ಬಂಧ ಕೋರಿ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್(ACB ADGP Seemanth Kumar Singh) ಹೈಕೋರ್ಟ್(High Court) ಮೊರೆ ಹೋಗಿದ್ದಾರೆ. ಹೈಕೋರ್ಟ್ಗೆ ರಿಟ್ ಸಲ್ಲಿಸಿದ್ದಾರೆ. ಸರ್ವಿಸ್ ರೆಕಾರ್ಡ್ ಕೇಳಿರುವ ಹೈಕೋರ್ಟ್ ಆದೇಶ ರದ್ದುಪಡಿಸಬೇಕು, ತಮ್ಮ ವಿರುದ್ಧ ಟೀಕೆ ಮಾಡದಂತೆ ನಿರ್ಬಂಧ ಹೇರಬೇಕು ಹಾಗೂ ನ್ಯಾ.ಸಂದೇಶ್ ಮೌಖಿಕ ಅಭಿಪ್ರಾಯ ತೆಗೆಯುವಂತೆ ಮನವಿ ಮಾಡಿದ್ದಾರೆ.
ಎಸಿಬಿ ಎಡಿಜಿಪಿಗೆ ಆತ್ಮಸಾಕ್ಷಿಯಿಂದ ಕೇಳಿಕೊಳ್ಳಲು ಹೇಳಿ ಎಂದು ಎಡಿಜಿಪಿಗೆ ಮತ್ತೆ ಝಾಡಿಸಿದ ನ್ಯಾ. ಹೆಚ್.ಪಿ. ಸಂದೇಶ್!
ಬೆಂಗಳೂರು: ಬೆಂಗಳೂರು ಜಿಲ್ಲಾಧಿಕಾರಿ ಜೆ ಮಂಜುನಾಥ್ ಅವರಿಂದ ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ಇಂದು ಮುಂದುವರಿದಿದೆ. ಈ ವೇಳೆ ನ್ಯಾ. ಹೆಚ್.ಪಿ. ಸಂದೇಶ್ ಅವರು ಮತ್ತಷ್ಟು ಖಾರವಾಗಿ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ವಿಚಾರಣೆ ವೇಳೆಯೇ ಟೀಕಾಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: Trip:ಪ್ರವಾಸದಲ್ಲಿರುವಾಗಲೂ ಫಿಟ್ ಆಗಿರಲು ಮಾರ್ಗಗಳು ಇಲ್ಲಿವೆ
ನೀವು ಕೊಟ್ಟ ವರದಿ ಸಂಪೂರ್ಣ ಸತ್ಯವಾದ ವರದಿಯಲ್ಲ. ನೀವು ಈ ಆಟ ಆಡುತ್ತೀರೆಂದು ತಿಳಿದೇ ಮಾಹಿತಿ ಪಡೆದಿದ್ದೇನೆ. ನೀವು ಈ ವರ್ಷ ಸಲ್ಲಿಸಿದ ಬಿ ರಿಪೋರ್ಟ್ ಗಳ ಮಾಹಿತಿ ನೀಡಿಲ್ಲ. ಆದರೆ ಮಾರ್ಚ್, ಜೂನ್ ತಿಂಗಳ ಬಿ ರಿಪೋರ್ಟ್ ಸಲ್ಲಿಸಿದ್ದೀರಿ. 819 ಸರ್ಚ್ ವಾರೆಂಟ್ ಗಳನ್ನು ಪಡೆಯಲಾಗಿತ್ತು. 28 ಸರ್ಚ್ ವಾರೆಂಟ್ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಕೋರ್ಟ್ ಹೇಳಿದ ಮೇಲೆ ಜಿಲ್ಲಾಧಿಕಾರಿಯನ್ನು ಆರೋಪಿ ಮಾಡಿದ್ದೀರಿ. ಈಗ ದಾಳಿ ಮಾಡಿದ್ದೀರಿ, ಮೊದಲೇ ಏಕೆ ಮಾಡಲಿಲ್ಲ? ಕ್ರಮ ಕೈಗೊಳ್ಳುವುದು ಎಸಿಬಿ ಎಡಿಜಿಪಿ ಕರ್ತವ್ಯವಲ್ಲವೇ? ನೌಕರನಲ್ಲದ ವ್ಯಕ್ತಿ ಡಿಸಿಗೆ ಸಹಾಯಕನಾಗಲು ಹೇಗೆ ಸಾಧ್ಯ? ಡಿಸಿ ಸ್ವತಃ 1ನೇ ಆರೋಪಿ ಜೊತೆ ಮಾತನಾಡಲು ಹೇಳಿದ್ದಾರೆ. 1 ನೇ ಆರೋಪಿ ಆದೇಶ ಸಿದ್ದವಿದ್ದರೂ ಡಿಸಿ ಏಕೆ ಸಹಿ ಮಾಡಿರಲಿಲ್ಲ? ಎಂದು ಒಂದೇ ಸಮನೆ ಎಸಿಬಿ ಪರ ವಕೀಲರಿಗೆ ನ್ಯಾ. ಹೆಚ್.ಪಿ. ಸಂದೇಶ್ ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.
Published On - 3:21 pm, Thu, 7 July 22