ಬೆಂಗಳೂರು: ಕೆಎಎಸ್ (KAS) ಅಧಿಕಾರಿ ರಂಗನಾಥ್ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ACB) ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ರಂಗನಾಥ್ ಒಂದೊಂದೇ ಅಕ್ರಮ ವಹಿವಾಟು ಬೆಳಕಿಗೆ ಬರುತ್ತಿದೆ. ಅಕ್ರಮ ಹಣದ ವಹಿವಾಟಿಗಾಗಿ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪಿಸಿರುವ ಶಂಕೆ ಮೂಡಿದೆ. ಒಂದೇ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಕೋಟಿ ಕೋಟಿ ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ರಂಗನಾಥ್ ಸಂಬಂಧಿಕರು ಅರುಣಾ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದಾರೆ. ಸಂಬಂಧಿಕರ ಹೆಸರಲ್ಲಿ 10 ಕೋಟಿಗೂ ಅಧಿಕ ಅವ್ಯವಹಾರ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು, 40 ಎಕರೆ ಜಮೀನು ಮಾರಾಟದಲ್ಲಿ ಅವ್ಯವಹಾರ ಆಗಿರುವ ಅನುಮಾನ ಮೂಡಿದೆ.
ಮಾರ್ಚ್ 25ಕ್ಕೆ ಕೆಎಎಸ್ ಅಧಿಕಾರಿ ರಂಗನಾಥ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ರಂಗನಾಥ್ ಮನೆ ಸೇರಿದಂತೆ ಒಟ್ಟು 5 ಕಡೆ ದಾಳಿ ನಡೆಸಲಾಗಿತ್ತು. ಗೋಮಾಳ ಭೂಮಿಯನ್ನು ಖಾಸಗಿಯವರಿಗೆ ನೀಡಿದ ಆರೋಪದ ಹಿನ್ನೆಲೆ ರಂಗನಾಥ್ ಅವರ ಸ್ವತ್ತಿನ ಮೇಲೆ ದಾಳಿಗೆ ಆದೇಶ ನೀಡಲಾಗಿತ್ತು. ಆದೇಶದ ಮೇರೆಗೆ ಶುಕ್ರವಾರ ಬೆಳಿಗ್ಗೆ ಸುಮಾರು 42 ಎಸಿಬಿ ಅಧಿಕಾರಿಗಳು ಐದು ತಂಡಗಳಾಗಿ ದಾಳಿ ನಡೆಸಿದ್ದರು.
9 ಕಡೆ ದಾಳಿ:
ಮಾರ್ಚ್ 22ಕ್ಕೆ ನಗರದಲ್ಲಿ ಬೆಳ್ಳಂಬೆಳಗ್ಗೆ ಬಿಡಿಎ ಮಧ್ಯವರ್ತಿಗಳು, ಏಜೆಂಟ್‌ಗಳ ಮನೆ ಮೇಲೆ ಎಸಿಬಿ ದಾಳಿ ಮಾಡಿತ್ತು. ಬಿಡಿಎ ಅಧಿಕಾರಿಗಳ ಜತೆ ಸೇರಿಕೊಂಡು ಭ್ರಷ್ಟಾಚಾರ, ಅವ್ಯವಹಾರದಲ್ಲಿ ತೊಡಗಿದ ಆರೋಪ ಕೇಳಿಬಂದ ಹಿನ್ನೆಲೆ ಬೆಂಗಳೂರಿನಲ್ಲಿ ಏಕಕಾಲದಲ್ಲಿ ಬೆಂಗಳೂರಿನಲ್ಲಿ ಎಸಿಬಿ SP ಉಮಾ ಪ್ರಶಾಂತ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ, 9 ಕಡೆ ದಾಳಿ ಮಾಡಲಾಗಿತ್ತು. ಚಾಮರಾಜಪೇಟೆಯ ಬಿ.ಎನ್.ರಘು, R.T.ನಗರ ಬಳಿಯ ಮನೋರಾಯನಪಾಳ್ಯದ ಮೋಹನ್, ದೊಮ್ಮಲೂರಿನ ಮನೋಜ್, ಆರ್.ಆರ್.ನಗರದ ತೇಜು, ಮಲ್ಲತ್ತಹಳ್ಳಿಯ ಮುನಿರತ್ನ ಅಲಿಯಾಸ್ ರತ್ನವೇಲು, ಮುದ್ದಿನಪಾಳ್ಯದ ಅಶ್ವತ್ಥ್ ಹಾಗೂ ಚಿಕ್ಕಹನುಮಯ್ಯ, ಚಾಮುಂಡೇಶ್ವರಿನಗರದ ರಾಮು ಮತ್ತು ಚಾಮುಂಡೇಶ್ವರಿ ನಗರ, ಬಿಡಿಎ ಲೇಔಟ್ನ ಲಕ್ಷ್ಮಣ ಮೇಲೆ ಎಸಿಬಿ ಅಧಿಕಾರಿಗಳಿಂದ ದಾಳಿ ನಡೆಸಿದ್ದರು.
ಇದನ್ನೂ ಓದಿ
ಆರ್ಯನ್ ಖಾನ್ ಡ್ರಗ್ ಕೇಸ್ ಬಗ್ಗೆ ಕೇಳಿ ಬಂತು ಹೊಸ ಅಪ್ಡೇಟ್
Horoscope Today- ದಿನ ಭವಿಷ್ಯ; ಕಟಕರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ
Published On - 8:44 am, Tue, 29 March 22