ಪತ್ನಿ ಬೇರೆ ಮನೆ ಮಾಡುವಂತೆ ಗಂಡನನ್ನು ಕೇಳುವುದು ಕೌಟುಂಬಿಕ ಕ್ರೌರ್ಯ ಅಲ್ಲ, ಅದು ವಿಚ್ಛೇದನ ಕೇಳುವುದಕ್ಕೆ ರಹದಾರಿ ಅಲ್ಲ -ಹೈಕೋರ್ಟ್

ಹೇಳದೇ ಕೇಳದೇ ಮನೆ ಬಿಟ್ಟು ತೆರಳುತ್ತಾಳೆಂಬ ಪತಿಯ ಆರೋಪಕ್ಕೆ ಪೂರಕವಾದ ಸ್ವತಂತ್ರ ಸಾಕ್ಷಿಗಳನ್ನು ಕೋರ್ಟ್ ಗೆ ನೀಡಿಲ್ಲ. ಪ್ರತ್ಯೇಕ ಮನೆ ಮಾಡುವಂತೆ ಕೇಳುವುದು ವಿಚ್ಚೇದನಕ್ಕೆ ಕಾರಣವಾಗುವುದಿಲ್ಲ. ಸಾಕ್ಷ್ಯಾಧಾರದ ಕೊರತೆಯಿಂದ ಕ್ರಿಮಿನಲ್ ಕೇಸ್ ರದ್ದುಪಡಿಸಿದೆ. ಆ ಮಾತ್ರಕ್ಕೇ ಸುಳ್ಳು ಕೇಸ್ ದಾಖಲಿಸಿದ್ದಾಳೆಂದು ಹೇಳಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ವಿಭಾಗೀಯ ಪೀಠ ವಿಚ್ಚೇದನದ ಆದೇಶ ರದ್ದುಪಡಿಸಿದೆ.

ಪತ್ನಿ ಬೇರೆ ಮನೆ ಮಾಡುವಂತೆ ಗಂಡನನ್ನು ಕೇಳುವುದು ಕೌಟುಂಬಿಕ ಕ್ರೌರ್ಯ ಅಲ್ಲ, ಅದು ವಿಚ್ಛೇದನ ಕೇಳುವುದಕ್ಕೆ ರಹದಾರಿ ಅಲ್ಲ -ಹೈಕೋರ್ಟ್
ಕರ್ನಾಟಕ ಉಚ್ಚ ನ್ಯಾಯಾಲಯ
TV9kannada Web Team

| Edited By: Ayesha Banu

Mar 28, 2022 | 9:09 PM

ಬೆಂಗಳೂರು: ಪತ್ನಿ ಬೇರೆ ಮನೆ ಮಾಡುವಂತೆ ಕೇಳುವುದು, ತನ್ನ ತಂಗಿ ಹಾಗೂ ತನ್ನ ತಂದೆ ತಾಯಿಯ ಮನೆಗೆ ಹೋಗುವುದು, ಕೌಟುಂಬಿಕ ದೌರ್ಜನ್ಯದ ಕ್ರಿಮಿನಲ್ ಕೇಸ್ ಹಾಕಿದ್ದಷ್ಟೇ ಕೌಟುಂಬಿಕ ಕ್ರೌರ್ಯವೆಂದು ಪರಿಗಣಿಸಲಾಗದು ಎಂದು ಕರ್ನಾಟಕ ಹೈಕೋರ್ಟ್(Karnataka High Court) ಅಭಿಪ್ರಾಯಪಟ್ಟಿದೆ.

2002 ರಲ್ಲಿ ಮದುವೆ ಆದಾಗಿನಿಂದಲೂ ಪತ್ನಿ ಪದೇ ಪದೇ ಬೇರೆ ಮನೆ ಮಾಡುವಂತೆ ಕೇಳುತ್ತಿದ್ದಾಳೆ. ನನ್ನ ತಾಯಿ ಹಾಗೂ ತಮ್ಮನನ್ನು ಬಿಟ್ಟು ಬರುವಂತೆ ಕೇಳುತ್ತಿದ್ದಾಳೆ. ನನ್ನ ವಿಧವೆ ತಾಯಿ ಹಾಗೂ ಇನ್ನೂ ಚಿಕ್ಕವನಾದ ತಮ್ಮನನ್ನು ಬಿಟ್ಟು ಬರಲು ಸಾಧ್ಯವಿಲ್ಲವೆಂದು ತಿಳಿಸಿದರೂ ಆಕೆ ಕೇಳುತ್ತಿಲ್ಲ. ಅಲ್ಲದೇ ನನ್ನ ಮೇಲೆ ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳದ ಸುಳ್ಳು ಕೇಸ್ ಕೂಡಾ ಹಾಕಿದ್ದಳು. ಆ ಕೇಸ್ ನಲ್ಲಿ ಖುಲಾಸೆಯಾಗಿದೆ. ಆಕೆಗೆ ನನ್ನೊಂದಿಗೆ ಬಾಳಲು ಇಷ್ಟವಿಲ್ಲ. ಆಕೆಯೊಂದಿಗೆ ಬಾಳಲು ಸಾಧ್ಯವಿಲ್ಲ. ಹೀಗಾಗಿ ಪತ್ನಿಯ ನಡವಳಿಕೆಯನ್ನು ಕೌಟುಂಬಿಕ ಕ್ರೌರ್ಯ ಎಂದು ಪರಿಗಣಿಸಿ ಆಕೆಯಿಂದ ವಿಚ್ಚೇದನ ನೀಡುವಂತೆ ಪತಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಇವನ ವಾದ ಮನ್ನಿಸಿ ವಿಚ್ಚೇದನದ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದಳು.

ನಾನು ಪತಿಯನ್ನು ತ್ಯಜಿಸಿಲ್ಲ ಹಾಗೂ ಪತಿಯ ವಿರುದ್ಧ ಕ್ರೌರ್ಯದ ಪ್ರದರ್ಶನ ಮಾಡಿಲ್ಲ. ಆದರೂ ಕೌಟುಂಬಿಕ ನ್ಯಾಯಾಲಯ ವಿಚ್ಚೇದನ ನೀಡಿದೆ. ವರದಕ್ಷಿಣೆ ಕಿರುಕುಳ ನೀಡಿ ನನ್ನನ್ನು ಮನೆಯಿಂದ ಹೊರಹಾಕಿದ್ದ. ನನ್ನನ್ನು ಮನೆಗೆ ಕರೆದೊಯ್ಯಲು ಪ್ರಯತ್ನ ಮಾಡಿಲ್ಲ. ಬದಲಿಗೆ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಹೀಗಾಗಿ ಕೌಟುಂಬಿಕ ನ್ಯಾಯಾಲಯದ ವಿಚ್ಚೇದನ ಆದೇಶ ರದ್ದುಪಡಿಸುವಂತೆ ಪತ್ನಿ ಮನವಿ ಮಾಡಿದ್ದಳು. ವಿಚಾರಣೆ ನಡೆಸಿದ ನ್ಯಾ. ಅಲೋಕ್ ಅರಾಧೆ ಹಾಗೂ ನ್ಯಾ. ಎಸ್.ವಿಶ್ವಜಿತ್ ಶೆಟ್ಟಿ ಯವರಿದ್ದ ವಿಭಾಗೀಯ ಪೀಠ ವಿಚ್ಚೇದನದ ಆದೇಶ ರದ್ದುಪಡಿಸಿದೆ. ಹೇಳದೇ ಕೇಳದೇ ಮನೆ ಬಿಟ್ಟು ತೆರಳುತ್ತಾಳೆಂಬ ಪತಿಯ ಆರೋಪಕ್ಕೆ ಪೂರಕವಾದ ಸ್ವತಂತ್ರ ಸಾಕ್ಷಿಗಳನ್ನು ಕೋರ್ಟ್ ಗೆ ನೀಡಿಲ್ಲ. ಪ್ರತ್ಯೇಕ ಮನೆ ಮಾಡುವಂತೆ ಕೇಳುವುದು ವಿಚ್ಚೇದನಕ್ಕೆ ಕಾರಣವಾಗುವುದಿಲ್ಲ. ಸಾಕ್ಷ್ಯಾಧಾರದ ಕೊರತೆಯಿಂದ ಕ್ರಿಮಿನಲ್ ಕೇಸ್ ರದ್ದುಪಡಿಸಿದೆ. ಆ ಮಾತ್ರಕ್ಕೇ ಸುಳ್ಳು ಕೇಸ್ ದಾಖಲಿಸಿದ್ದಾಳೆಂದು ಹೇಳಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ವಿಭಾಗೀಯ ಪೀಠ ವಿಚ್ಚೇದನದ ಆದೇಶ ರದ್ದುಪಡಿಸಿದೆ.

ಇದನ್ನೂ ಓದಿ: Shocking News: ಅಕ್ಕನ ಬಾಯ್​ಫ್ರೆಂಡ್​ನಿಂದ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಗುಪ್ತಾಂಗಕ್ಕೆ ಕೋಲು ತುರುಕಿ ಚಿತ್ರಹಿಂಸೆ!

ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ ಬಗ್ಗೆ ಮಾಹಿತಿ ನೀಡಿದ ಉಪೇಂದ್ರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada