ಪಂಚ ರಾಜ್ಯ ಸೋಲಿಂದ ಆತ್ಮವಿಶ್ವಾಸ ಕಳೆದುಕೊಳ್ಳುವುದು ಬೇಡ; ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಡೋಣ: ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಮಾತನಾಡಿರುವ ಡಿ.ಕೆ.ಶಿವಕುಮಾರ್, ಪಂಚ ರಾಜ್ಯಗಳಲ್ಲಿ ಸೋಲಿನಿಂದ ಆತ್ಮ ವಿಶ್ವಾಸ ಕಳೆದುಕೊಳ್ಳುವುದು ಬೇಡ. ನಾವು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟವರು. ಸೋನಿಯ ಗಾಂಧಿ, ರಾಹುಲ್ ನಾಯಕತ್ವದಲ್ಲಿ ಮುನ್ನಡೆಯುತ್ತೇವೆ. ನಾವೆಲ್ಲ ಒಗ್ಗಟ್ಟಾಗಿ ಹಳ್ಳಿಹಳ್ಳಿಗೆ ನಮ್ಮ ವಿಚಾರ ಕೊಂಡೊಯ್ಯೋಣ ಎಂದು ಒಗ್ಗಟ್ಟಿನ ಜಪ ಮಾಡಿದ್ದಾರೆ.
ಬೆಂಗಳೂರು: ಪಂಚ ರಾಜ್ಯಗಳ ಚುನಾವಣೆಯಲ್ಲಿ(Five State Election) ಬಿಜೆಪಿ(BJP) ನಾಲ್ಕು ರಾಜ್ಯ ಗೆದ್ದರೆ, ಆಮ್ ಆದ್ಮಿ ಪಾರ್ಟಿ(Aam Aadmi Party) ಒಂದು ರಾಜ್ಯ ಗೆದ್ದಿತ್ತು. ಈ ಮೂಲಕ ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೇಸ್(Congress) ಹೀನಾಯ ಸೋಲು ಅನುಭವಿಸಿತ್ತು. ಸದ್ಯ ಈ ವಿಚಾರವಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar), ಸೋಲಿನಿಂದ ನಾವು ಆತ್ಮವಿಶ್ವಾಸ ಕಳೆದುಕೊಳ್ಳುವುದು ಬೇಡ. ನಾವು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟವರು ಎಂದು ಹೇಳುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಹುರಿದುಂಬಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಡಿ.ಕೆ.ಶಿವಕುಮಾರ್, ಪಂಚ ರಾಜ್ಯಗಳಲ್ಲಿ ಸೋಲಿನಿಂದ ಆತ್ಮ ವಿಶ್ವಾಸ ಕಳೆದುಕೊಳ್ಳುವುದು ಬೇಡ. ನಾವು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟವರು. ಸೋನಿಯ ಗಾಂಧಿ, ರಾಹುಲ್ ನಾಯಕತ್ವದಲ್ಲಿ ಮುನ್ನಡೆಯುತ್ತೇವೆ. ನಾವೆಲ್ಲ ಒಗ್ಗಟ್ಟಾಗಿ ಹಳ್ಳಿಹಳ್ಳಿಗೆ ನಮ್ಮ ವಿಚಾರ ಕೊಂಡೊಯ್ಯೋಣ ಎಂದು ಒಗ್ಗಟ್ಟಿನ ಜಪ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಆಚಾರ ವಿಚಾರ ಪ್ರಚಾರ ಮಾಡುವ ಜವಾಬ್ದಾರಿ ಎಂ.ಬಿ.ಪಾಟೀಲ್ ವಹಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಸಮುದಾಯಕ್ಕೂ ಅಧಿಕಾರ. ರಾಜ್ಯದಲ್ಲಿ ಜಾತಿ ಧರ್ಮದ ಹೆಸರಲ್ಲಿ ಒಡೆಯುವ ಸಂಚು ನಡೀತಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಿಎಂ ತವರು ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಉತ್ತರ ಪ್ರದೇಶ ರಾಜ್ಯದಲ್ಲಿ ಕಾಂಗ್ರೆಸ್ ಸದೃಢವಾಗಿರಲಿಲ್ಲ. ಪಂಜಾಬ್ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರು.
ಇನ್ನು ಇದೇ ವೇಳೆ ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆ ಖಂಡಿಸಿ ಮಾ. 31ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆ ಮೇರೆಗೆ ಧರಣಿ ನಡೆಸಲಾಗುತ್ತೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಹಾಭಾರತ ತೋರಿಸಿದ್ದೆವು. ದೂರದರ್ಶನದಲ್ಲಿ ಪ್ರತಿ ದಿನ 2 ಗಂಟೆ ಮಹಾಭಾರತ ಪ್ರಸಾರವಾಗುತ್ತಿತ್ತು. ಪಠ್ಯಪುಸ್ತಕದಲ್ಲಿ ಮಹಾಭಾರತ ಸೇರಿಸಿದ್ದು ಕಾಂಗ್ರೆಸ್ ಪಕ್ಷ. ನಾವೂ ಹಿಂದೂಗಳೇ ಸ್ವಾಮಿ, ಬಿಜೆಪಿಯವರಷ್ಟೇ ಹಿಂದೂಗಳಲ್ಲ. ಸೋನಿಯಾ ಗಾಂಧಿ ಪ್ರಧಾನಮಂತ್ರಿ ಹುದ್ದೆ ತ್ಯಾಗ ಮಾಡಿದ್ದರು. ಆರ್ಥಿಕ ತಜ್ಞ ಡಾ.ಸಿಂಗ್ಗೆ ಪ್ರಧಾನಮಂತ್ರಿ ಹುದ್ದೆ ನೀಡಿದ್ದರು. ಆರ್ಥಿಕ ತಜ್ಞ ಪ್ರಧಾನಿಯಾದರೆ ದೇಶ ಉದ್ಧಾರ ಆಗುತ್ತೆಂದು ತ್ಯಾಗ ಮಾಡಿದ್ರು ಎಂದಿದ್ದಾರೆ.
ಇದನ್ನೂ ಓದಿ: Viral Video: ಗುರುತ್ವಾಕರ್ಷಣೆ ನಿಯಮವೇ ಇಲ್ಲ ಎಂದ ನೆಟ್ಟಿಗರು; 7 ಸೆಕೆಂಡ್ನಲ್ಲಿ ಬೆಕ್ಕು ಏನು ಮಾಡಿತು ನೋಡಿ!
ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷದಲ್ಲಿನ ಒಳಜಗಳ ಮತ್ತು ಬಿಜೆಪಿ ಅಧಿಕಾರ ದುರುಪಯೋಗ ಕಾರಣ -ಖರ್ಗೆ
Published On - 7:10 pm, Mon, 28 March 22