ACB Raid: ಸಿಕ್ಕಿರುವುದೆಲ್ಲಾ ಉಮಾಗೋಲ್ಡ್ ಎಂದ ಪಿಎಸ್ ಖೇಡಗಿ; ಚಿನ್ನಾಭರಣ ಪರೀಕ್ಷೆಗೆ ಅಕ್ಕಸಾಲಿಗರನ್ನು ಕರೆಸಿದ ಎಸಿಬಿ

| Updated By: ganapathi bhat

Updated on: Mar 16, 2022 | 3:36 PM

ಪತ್ತೆಯಾದ ಚಿನ್ನಾಭರಣವನ್ನು ಸಿಬ್ಬಂದಿ ತೂಕ ಮಾಡಿಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಬಾದಾಮಿ ಆರ್​ಎಫ್​ಒ, ಪಿ.ಎಸ್. ಖೇಡಗಿ ಭಾಗ್ಯವಂತಿ ಕೃಪಾ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿದೆ. ಸತತ ಆರು ಗಂಟೆಯಿಂದ ಮುಂದುವರೆದಿರುವ ಶೋಧ ಕಾರ್ಯದಲ್ಲಿ ಅಪಾರ ಹಣ, ಚಿನ್ನಾಭರಣ ಪತ್ತೆ ಆಗಿದೆ.

ACB Raid: ಸಿಕ್ಕಿರುವುದೆಲ್ಲಾ ಉಮಾಗೋಲ್ಡ್ ಎಂದ ಪಿಎಸ್ ಖೇಡಗಿ; ಚಿನ್ನಾಭರಣ ಪರೀಕ್ಷೆಗೆ ಅಕ್ಕಸಾಲಿಗರನ್ನು ಕರೆಸಿದ ಎಸಿಬಿ
ಎಸಿಬಿ ದಾಳಿ ವೇಳೆ ಪತ್ತೆಯಾದ ಸಂಪತ್ತು
Follow us on

ಬೆಂಗಳೂರು: ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ ಆರೋಪದಲ್ಲಿ 18 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 77 ಕಡೆ ಎಸಿಬಿ ದಾಳಿ ನಡೆಸಲಾಗಿದೆ. ಬೆಂಗಳೂರಿನಲ್ಲಿ 3 ಅಧಿಕಾರಿಗಳ ಮನೆ, ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ. ಬಿ.ಕೆ. ಶಿವಕುಮಾರ್​​ಗೆ ಸೇರಿದ 5 ಸ್ಥಳಗಳಲ್ಲಿ ಎಸಿಬಿ ದಾಳಿ ನಡೆಸಿದೆ. 36 ಅಧಿಕಾರಿಗಳ ತಂಡದಿಂದ 5 ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ, ಬಸವೇಶ್ವರನಗರದಲ್ಲಿ ವಾಸವಾಗಿರುವ ಬಿ.ಕೆ. ಶಿವಕುಮಾರ್, ಹೆಚ್ಚುವರಿ ಆಯುಕ್ತ, ಸಾರಿಗೆ ಜೆ.ಜ್ಞಾನೇಂದ್ರ ಕುಮಾರ್‌ಗೆ ಸೇರಿದ 4 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. 36 ಅಧಿಕಾರಿಗಳ ತಂಡದಿಂದ 4 ಸ್ಥಳಗಳಲ್ಲಿ ಪರಿಶೀಲನೆ ಮಾಡಲಾಗಿದೆ. ವಿ. ರಾಕೇಶ್ ಕುಮಾರ್‌ಗೆ ಸೇರಿದ ಪತ್ತೆಯಾದ ಚಿನ್ನಾಭರಣವನ್ನು ಸಿಬ್ಬಂದಿ ತೂಕ ಮಾಡಿಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಬಾದಾಮಿ ಆರ್​ಎಫ್​ಒ, ಪಿ.ಎಸ್. ಖೇಡಗಿ ಭಾಗ್ಯವಂತಿ ಕೃಪಾ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿದೆ. ಸತತ ಆರು ಗಂಟೆಯಿಂದ ಮುಂದುವರೆದಿರುವ ಶೋಧ ಕಾರ್ಯದಲ್ಲಿ ಅಪಾರ ಹಣ, ಚಿನ್ನಾಭರಣ ಪತ್ತೆ ಆಗಿದೆ.5 ಕಡೆ ಎಸಿಬಿ ದಾಳಿ ಮಾಡಲಾಗಿದೆ. 27 ಅಧಿಕಾರಿಗಳ ತಂಡದಿಂದ 5 ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ನಾಗರಬಾವಿಯಲ್ಲಿ ವಾಸವಿರುವ ಬಿಡಿಎ ಉಪ ನಿರ್ದೇಶಕ, ನಗರಯೋಜನೆ ವಿಭಾಗದ ವಿ.ಕೆ. ರಾಕೇಶ್‌ ಕುಮಾರ್ ಸೇರಿದ ಸ್ಥಳದಲ್ಲೂ ದಾಳಿ ನಡೆದಿದೆ. ಈ ಬಗ್ಗೆ ಎಸಿಬಿ ಅಧಿಕಾರಿಗಳಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ರಾಜ್ಯದ ಹಲವೆಡೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್ ನೀಡಿದೆ. ಬಾದಾಮಿ RFO ಶಿವಾನಂದ್ ಖೇಡಗಿ ಮನೆಯಲ್ಲಿ ಶೋಧಕಾರ್ಯ ಮುಂದುವರಿದಿದೆ. ಬಾಗಲಕೋಟೆ ನಗರದಲ್ಲಿರುವ ಶಿವಾನಂದ್ ಖೇಡಗಿ ಮನೆಯಲ್ಲಿ ಅಪಾರ ಹಣ, ಚಿನ್ನ ಪತ್ತೆ ಆಗಿತ್ತು. ಪತ್ತೆಯಾದ ಚಿನ್ನಾಭರಣವನ್ನು ಸಿಬ್ಬಂದಿ ತೂಕ ಮಾಡಿಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಬಾದಾಮಿ ಆರ್​ಎಫ್​ಒ, ಪಿ.ಎಸ್. ಖೇಡಗಿ ಭಾಗ್ಯವಂತಿ ಕೃಪಾ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿದೆ. ಸತತ ಆರು ಗಂಟೆಯಿಂದ ಮುಂದುವರೆದಿರುವ ಶೋಧ ಕಾರ್ಯದಲ್ಲಿ ಅಪಾರ ಹಣ, ಚಿನ್ನಾಭರಣ ಪತ್ತೆ ಆಗಿದೆ.

ಈ ವೇಳೆ, ಮನೆಯಲ್ಲಿ ಸಿಕ್ಕಿರುವ ಚಿನ್ನಭರಣಗಳು ಉಮಾಗೋಲ್ಡ್ ಎಂದು ಆರ್.ಎಫ್.ಒ ಖೇಡಗಿ ಹೇಳಿದ್ದರು. ಹೀಗಾಗಿ ಚಿನ್ನ, ಬೆಳ್ಳಿ ವಸ್ತು ತೂಕ ಮಾಡಲು ತೂಕದ ಯಂತ್ರ ತರಿಸಲಾಗಿದೆ. ಚಿನ್ನಾಭರಣ ಪರೀಕ್ಷಿಸಲು ಎಸಿಬಿ ಅಧಿಕಾರಿಗಳು ಅಕ್ಕಸಾಲಿಗರನ್ನು ಕರೆಸಿದ್ದಾರೆ. ಖೇಡಗಿ ಅವರ ಮನೆಯಲ್ಲಿ ಬಗೆದಷ್ಟು ಬಂಗಾರ, ಬೆಳ್ಳಿ ಪತ್ತೆ ಆಗಿದ್ದು ಎಸಿಬಿ ಸಿಬ್ಬಂದಿ ಚಿನ್ನಾಭರಣ ತೂಕ‌ ಮಾಡಿಸುತ್ತಿದ್ದಾರೆ. ಸದ್ಯಕ್ಕೆ ಖೇಡಗಿ ಅವರ ನಿವಾಸದಲ್ಲಿ ಎರಡು ಕೆಜಿ ಬಂಗಾರ, 11 ಕೆಜಿ ಬೆಳ್ಳಿ, ಹತ್ತು ಲಕ್ಷ ನಗದು, 16 ಲಕ್ಷ ಬ್ಯಾಂಕ್ ಡೆಪಾಸಿಟ್ ಪತ್ತೆ ಆಗಿದೆ. ಸದ್ಯ ಐದು ಪ್ಲಾಟ್ ಖರೀದಿಸಿರುವ ದಾಖಲೆಗಳು ಸಿಕ್ಕಿವೆ. ಅರಣ್ಯಾಧಿಕಾರಿ ಮನೆಯಲ್ಲಿ ನಾಲ್ಕು ಕೆಜಿ ಶ್ರೀಗಂಧದ ಕಟ್ಟಿಗೆಗಳು ಲಭಿಸಿವೆ.

ಇತ್ತ, ವಿಜಯಪುರ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ಗೋಪಿನಾಥ್ ಮನೆಯಲ್ಲಿ 1.31 ಕೋಟಿ ಮೌಲ್ಯದ ದಾಖಲೆ ಪತ್ತೆ ಆಗಿದೆ. ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಿರುವ ಬಾಂಡ್ ಸಿಕ್ಕಿದೆ. ದಾವಣಗೆರೆ ಜಿಲ್ಲಾ ಪರಿಸರ ಅಧಿಕಾರಿಯಾಗಿರುವ ಮಹೇಶ್ವರಪ್ಪ ಮನೆಯಲ್ಲಿ 750 ಗ್ರಾಂ ಚಿನ್ನಾಭರಣ ಸಿಕ್ಕಿದೆ. ಮಹೇಶ್ವರಪ್ಪ ಮನೆಯಲ್ಲಿ 4 ಕೆಜಿ ಬೆಳ್ಳಿ, 5 ಲಕ್ಷ ನಗದು ಪತ್ತೆ ಆಗಿದೆ.

ಇದನ್ನೂ ಓದಿ: ACB Raid: ಖಾಲಿ ಸೈಟ್​ನಲ್ಲಿ ಬಿಸಾಡಿದ್ದ ಹಣ ಪತ್ತೆ; ಅರಣ್ಯಾಧಿಕಾರಿ ಮನೆಯಲ್ಲಿ ಸಿಕ್ಕಿತು ಚಿನ್ನ, ಬೆಳ್ಳಿ, ಗಂಧ, 20 ಲಕ್ಷಕ್ಕೂ ಅಧಿಕ ನಗದು

ಇದನ್ನೂ ಓದಿ: ACB Raid: ಏಕಕಾಲಕ್ಕೆ ಕರ್ನಾಟಕದ 78 ಕಡೆಗಳಲ್ಲಿ 200ಕ್ಕೂ ಹೆಚ್ಚು ಅಧಿಕಾರಿಗಳಿಂದ ಎಸಿಬಿ ದಾಳಿ