ಸಿಎಂ ಬಸವರಾಜ ಬೊಮ್ಮಾಯಿ ಸಿಹಿ ಸುದ್ದಿ: ವಸತಿ ಫಲಾನುಭವಿಗಳ ಆದಾಯದ ಮಿತಿ ಹೆಚ್ಚಳ
ಗ್ರಾಮೀಣ ವಸತಿ ಫಲಾನುಭವಿಗಳ ಆದಾಯ ಮಿತಿ 32 ಸಾವಿರದಿಂದ 1,20,000 ರೂ.ಗೆ ಏರಿಕೆ ಮಾಡಲಾಗಿದ್ದು ನಗರ ವಸತಿ ಫಲಾನುಭವಿಗಳ ಆದಾಯ ಮಿತಿ 87 ಸಾವಿರ ರೂಪಾಯಿಯಿಂದ 2 ಲಕ್ಷಕ್ಕೇರಿಕೆ ಮಾಡಿ ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಬೆಂಗಳೂರು: ವಸತಿ ಯೋಜನೆ ಫಲಾನುಭವಿಗಳಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ವಸತಿ ಫಲಾನುಭವಿಗಳ ಆದಾಯದ ಮಿತಿ ಹೆಚ್ಚಳ ಮಾಡಿದೆ. ಗ್ರಾಮೀಣ ವಸತಿ ಫಲಾನುಭವಿಗಳ ಆದಾಯದ ಮಿತಿ ಹೆಚ್ಚಳ ಮಾಡಲಾಗಿದೆ. ಹಾಗೂ ನಗರ ವಸತಿ ಫಲಾನುಭವಿಗಳ ಆದಾಯ ಮಿತಿಯಲ್ಲೂ ಹೆಚ್ಚಳ ಮಾಡಲಾಗಿದೆ. ಗ್ರಾಮೀಣ ವಸತಿ ಫಲಾನುಭವಿಗಳ ಆದಾಯ ಮಿತಿ 32 ಸಾವಿರದಿಂದ 1,20,000 ರೂ.ಗೆ ಏರಿಕೆ ಮಾಡಲಾಗಿದ್ದು ನಗರ ವಸತಿ ಫಲಾನುಭವಿಗಳ ಆದಾಯ ಮಿತಿ 87 ಸಾವಿರ ರೂಪಾಯಿಯಿಂದ 2 ಲಕ್ಷಕ್ಕೇರಿಕೆ ಮಾಡಿ ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ಆಯೋಗ ರಚನೆ: ಸಿಎಂ ಬೊಮ್ಮಾಯಿ ಘೋಷಣೆ ಬೆಂಗಳೂರು: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದೆ. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರದಿಂದ ಆಯೋಗ ರಚನೆ ಬಗ್ಗೆ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. 7ನೇ ವೇತನ ಆಯೋಗದ ಅನ್ವಯ ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆಗೆ ಅಧಿಕಾರಿಗಳ ವೇತನ ಸಮಿತಿ ಮಾಡುವಂತೆ ಸಿಎಂಗೆ ಮಾಜಿ ಸಿಎಂ ಯಡಿಯೂರಪ್ಪ ಪತ್ರ ಬರೆದಿದ್ದರು.
ಇದನ್ನೂ ಓದಿ: ಕೋಲಾರ: ಜಾನಪದ ಗೀತಗಾಯನ ಮೂಲಕ ವಿನೂತನ ರೀತಿಯಲ್ಲಿ ವಾಯುಮಾಲಿನ್ಯ ಜಾಗೃತಿ ಅಭಿಯಾನ; ಅಧಿಕಾರಿಗಳು ಭಾಗಿ
Organ Donation: ಸಾವಿನಲ್ಲೂ ಸಾರ್ಥಕತೆ ಮೆರೆದ ಆರ್.ಎಸ್.ಎಸ್ ಕಾರ್ಯಕರ್ತ, ಅಂಗಾಂಗ ದಾನ ಮಾಡಿ 6 ಜನರ ಪಾಲಿಗೆ ಬೆಳಕಾದ
Published On - 6:12 pm, Wed, 16 March 22