ನಾಳೆ ಯಾರೂ ಮನೆಗಳಿಂದ ಹೊರಗೆ ಬರಬೇಡಿ, ಮೈದಾನಗಳಲ್ಲಿ ಸೇರಬೇಡಿ- ಮುಸಲ್ಮಾನರಿಗೆ ಮೌಲಾನಾ ಮಕ್ಸೂದ್ ಇಮ್ರಾನ್ ಕಿವಿಮಾತು
ಮೈದಾನದಲ್ಲಿ ಗುಂಪು ಸೇರಿ ಱಲಿಗಳನ್ನು ಮಾಡಬಾರದು. ಸ್ಕೂಲ್ ಹಾಗೂ ಕಚೇರಿಗಳಿಗೆ ಹೋಗದೇ ಮನೆಯಲ್ಲಿರಿ. ಶಾಂತಿಯುತವಾಗಿ ನಮ್ಮ ನೋವನ್ನು ವ್ಯಕ್ತಪಡಿಸೋಣ ಎಂದು ಬೆಂಗಳೂರಿನಲ್ಲಿ ಮುಸ್ಲಿಂ ಮುಖಂಡ ಮೌಲಾನಾ ಮಸೂದ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಕಮಿಷನರ್ ಕಮಲ್ ಪಂತ್ ಜೊತೆ ಸಭೆ ಬಳಿಕ ಮುಸ್ಲಿಂ ಮುಖಂಡ ಮೌಲಾನಾ ಮಕ್ಸೂದ್ ಇಮ್ರಾನ್ ರಶ್ದೀ ಹೇಳಿಕೆ ನೀಡಿದ್ದು, ಹೈಕೋರ್ಟ್(High court) ಹಿಜಾಬ್ಗೆ ಸಂಬಂಧಪಟ್ಟಂತೆ ಆದೇಶ ಬಂದಿದೆ. ಮುಸ್ಲಿಂ ಬಾಂಧವರಿಗೆ ಇದರಿಂದ ಸ್ವಲ್ಪ ನೋವಾಗಿದೆ. ಆ ನೋವು ನಾಳೆ ವ್ಯಕ್ತಪಡಿಸಲಿದ್ದೇವೆ. ಮುಸ್ಲಿಂ(Muslim) ಸಂಘಟನೆಗಳು ನಾಳೆ ಬಂದ್ಗೆ (Bundh) ಕರೆ ಕೊಟ್ಟಿವೆ. ನಾಳೆ ಯಾರೂ ಮನೆಯಿಂದ ಹೊರಗಡೆ ಬರಬಾರದು. ಮೈದಾನದಲ್ಲಿ ಗುಂಪು ಸೇರಿ ಱಲಿಗಳನ್ನು ಮಾಡಬಾರದು. ಸ್ಕೂಲ್ ಹಾಗೂ ಕಚೇರಿಗಳಿಗೆ ಹೋಗದೇ ಮನೆಯಲ್ಲಿರಿ. ಶಾಂತಿಯುತವಾಗಿ ನಮ್ಮ ನೋವನ್ನು ವ್ಯಕ್ತಪಡಿಸೋಣ ಎಂದು ತಿಳಿಸಿದ್ದಾರೆ.
ಹಿಜಾಬ್ ವಿಚಾರದಲ್ಲಿ ಕೋರ್ಟ್ ತೀರ್ಪಿನಿಂದ ಬೇಸರವಾಗಿದೆ. ಮುಸ್ಲಿಂ ಬಾಂಧವರಿಗೆ ಇದರಿಂದ ಸ್ವಲ್ಪ ನೋವಾಗಿದೆ. ಆ ನೋವು ನಾಳೆ ವ್ಯಕ್ತಪಡಿಸ್ತೇವೆ ಎಂದು ಬೆಂಗಳೂರಿನಲ್ಲಿ ಮುಸ್ಲಿಂ ಮುಖಂಡ ಮೌಲಾನಾ ಹೇಳಿಕೆ ನೀಡಿದ್ದಾರೆ.
ಸಿ.ಎಂ.ಇಬ್ರಾಹಿಂ ನಿವಾಸದಲ್ಲಿ ಮುಸ್ಲಿಂ ನಾಯಕರ ಸಭೆ
ಬೆಂಗಳೂರಿನ ಜಯಮಹಲ್ನ ಇಬ್ರಾಹಿಂ ನಿವಾಸದಲ್ಲಿ ಇಂದು ಸಭೆ ನಡೆದಿದ್ದು, ಸಭೆಯಲ್ಲಿ ಶಾಸಕ ಜಮೀರ್ ಅಹ್ಮದ್ಖಾನ್, ಸಿ.ಎಂ.ಇಬ್ರಾಹಿಂ ಭೇಟಿ ನೀಡಿದ್ದಾರೆ. ಇನ್ನೂ ಮಾಜಿ ಸಚಿವ ರೋಷನ್ ಬೇಗ್ ಕೂಡ ಸಭೆಗೆ ಬರುವ ಸಾಧ್ಯತೆ ಇದೆ.
ಕೋರ್ಟ್ ಆದೇಶ ಉಲ್ಲಂಘಿಸಿ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿಸ ಘಟನೆ ನಗರದ ಕೆಎಲ್‌ಇ ಸಂಸ್ಥೆಯ ಜೆ.ಟಿ.ಕಾಲೇಜಿನಲ್ಲಿ ನಡೆದಿದೆ. ಕಾಲೇಜು ಕೊಠಡಿ, ಲ್ಯಾಬ್‌ನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಲಾಗಿದೆ.ನಿನ್ನೆ ಹೈಕೋರ್ಟ್ ಮಹತ್ವದ ತೀರ್ಪಿನ ನಂತರವು ಇಂದು ಹಿಜಾಬ್, ಬುರ್ಕಾ ಧರಿಸಿ ಕಾಲೇಜಿಗೆ ಹಲವರು ಬಂದಿದ್ದರು. ಹೀಗಾಗಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಎಬಿವಿಪಿ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಕೋರ್ಟ್ ಆದೇಶ ಪಾಲನೆಯಾಗುತ್ತಿಲ್ಲಾ ಎಂದು ಆರೋಪ ಮಾಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಶಿವಾನಂದ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಉಡುಪಿ: ಹೈಕೋರ್ಟ್ ಆದೇಶದ ನಂತರವೂ ಹಿಜಾಬ್ಗಾಗಿ ಬೇಡಿಕೆ
ಹೈಕೋರ್ಟ್ ಆದೇಶದ ಬಳಿಕವೂ ಹಿಜಾಬ್ಗಾಗಿ ಬೇಡಿಕೆ ಮುಂದುವರಿದಿದೆ. ಉಡುಪಿ ಜಿಲ್ಲೆಯ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ 11 ಮಂದಿ ವಿದ್ಯಾರ್ಥಿನಿಯರು ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ತರಗತಿ ಪ್ರವೇಶಿಸಲು ಅವಕಾಶವಿಲ್ಲ ಎಂದು ಪ್ರಾಂಶುಪಾಲರು ತಿಳಿಸಿದ್ದು, ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿರಿಸಿ ತರಗತಿಗೆ ಹಾಜರಾಗಿದ್ದಾರೆ. ಆದರೆ ಇನ್ನೂಳಿದ ಒಂಬತ್ತು ಮಂದಿ ವಿದ್ಯಾರ್ಥಿನಿಯರು ಮನೆಗೆ ವಾಪಸ್ ಆಗಿದ್ದಾರೆ.
ಹಿಜಬ್ ನಮ್ಮ ಜೀವನದ ಅವಿಭಾಜ್ಯ ಅಂಗ. ಪರೀಕ್ಷೆಯು ಬೇಕು. ಹಿಜಾಬ್ ಕೂಡ ಬೇಕು. ಈ ಹಿಂದೆ ಇಲ್ಲದ ಸಮಸ್ಯೆ ಈಗ ತಲೆದೋರಿದೆ. ಇದರಿಂದ ನಮಗೆ ಬೇಸರವಾಗಿದೆ. ಪ್ರಾಂಶುಪಾಲರು ನಮಗೆ ನ್ಯಾಯ ದೊರಕಿಸಿಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಆದರೆ ಅದು ಆಗಲಿಲ್ಲ ಹೀಗಾಗಿ ತರಗತಿ ಬಹಿಷ್ಕರಿಸಿದ್ದೇವೆ ಎಂದು ಹಿಜಾಬ್ ಧರಿಸಲು ಅವಕಾಶಕೋರಿದ ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಹಿಜಾಬ್: ಹೈಕೋರ್ಟ್ ಆದೇಶ ಒಪ್ಪಲೇಬೇಕು, ರಾಜಕೀಯ ಲಾಭ-ನಷ್ಟದ ಬಗ್ಗೆ ಯೋಚನೆ ಮಾಡಲ್ಲ -ಜೆಡಿಎಸ್ ವರಿಷ್ಠ ದೇವೇಗೌಡ
Published On - 7:39 pm, Wed, 16 March 22