Organ Donation: ಸಾವಿನಲ್ಲೂ ಸಾರ್ಥಕತೆ ಮೆರೆದ ಆರ್.ಎಸ್.ಎಸ್ ಕಾರ್ಯಕರ್ತ, ಅಂಗಾಂಗ ದಾನ ಮಾಡಿ 6 ಜನರ ಪಾಲಿಗೆ ಬೆಳಕಾದ
ಮಿದುಳು ನಿಷ್ಕ್ರಿಯಗೊಂಡ ಆರ್.ಎಸ್.ಎಸ್ ಕಾರ್ಯಕರ್ತ ತನ್ನ ಅಂಗಾಂಗ ದಾನ ಮಾಡಿದ್ದಾರೆ. ಈ ಮೂಲಕ ಸಮಾಜಕ್ಕೆ ಮಾದರಿಯಾಗುವುದರ ಜೊತೆಗೆ ನಾಲ್ವರ ಜೀವ ಉಳಿಸಿ ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದಾರೆ.
ಬೆಳಗಾವಿ: ಜಿಲ್ಲೆಯಲ್ಲೊಬ್ಬರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮಿದುಳು ನಿಷ್ಕ್ರಿಯಗೊಂಡ ಆರ್.ಎಸ್.ಎಸ್ ಕಾರ್ಯಕರ್ತ ತನ್ನ ಅಂಗಾಂಗ ದಾನ ಮಾಡಿದ್ದಾರೆ. ಈ ಮೂಲಕ ಸಮಾಜಕ್ಕೆ ಮಾದರಿಯಾಗುವುದರ ಜೊತೆಗೆ ನಾಲ್ವರ ಜೀವ ಉಳಿಸಿ ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದಾರೆ.
ಬೆಳಗಾವಿಯ ಮಹಾಬಲೇಶ್ವರ ನಗರದ ನಿವಾಸಿ ಉಮೇಶ್ ದಂಡಗಿ (51) ಅಂಗಾಂಗ ದಾನ ಮಾಡಿದವರು. ಕೆಲ ದಿನಗಳ ಹಿಂದೆ ಮನೆಯಲ್ಲಿ ಆಕಸ್ಮಿಕವಾಗಿ ಕೆಳ ಜಾರಿ ಬಿದ್ದು ಉಮೇಶ್ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆಗೆಂದು ತಕ್ಷಣ ಇವರನ್ನ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ವೇಳೆ ಇವರ ಮೆದುಳು ನಿಷ್ಕ್ರಿಯಗೊಂಡಿರುವ ವಿಚಾರ ಗೊತ್ತಾಗಿದೆ. ಆಗ ಉಮೇಶ್ ದಂಡಗಿ ಅವರು ಮತ್ತು ಕುಟುಂಬಸ್ಥರು ಅಂಗಾಗ ದಾನ ಮಾಡಲು ಮುಂದಾಗಿದ್ದು ಇಂದು ಅವರ ಕಿಡ್ನಿ, ಹೃದಯ ಮತ್ತು ಲಿವರ್ ದಾನ ಮಾಡಿ 6 ಜನರ ಪಾಲಿಗೆ ಬೆಳಕಾಗಿದ್ದಾರೆ. ಅವಶ್ಯಕತೆ ಇದ್ದಲ್ಲಿ ಝೀರೋ ಟ್ರಾಫಿಕ್‌ನಲ್ಲಿ ಉಮೇಶ್ ದಂಡಗಿ ಅಂಗಾಂಗಗಳ ರವಾನಿಸಲಾಯಿತು. ಇನ್ನೂ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲೇ ಇರುವ ರೋಗಿಗೆ ಹೃದಯ ದಾನ ಹಾಗೂ ಇಬ್ಬರು ಅಂಧರಿಗೆ ಕಣ್ಣುಗಳನ್ನು ನೀಡಲಾಗಿದೆ.
ವಿಮಾನದ ಮೂಲಕ ಬೆಂಗಳೂರಿಗೆ ಲೀವರ್ ರವಾನಿಸಲಾಯಿತು. ಕೆಎಲ್‌ಇ ಆಸ್ಪತ್ರೆಯಿಂದ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ಗೆ ಝೀರೋ ಟ್ರಾಫಿಕ್‌ನಲ್ಲಿ ಲೀವರ್ ರವಾನಿಸಲಾಯಿತು. ಧಾರವಾಡದ ಎಸ್ ಡಿಎಂ ಆಸ್ಪತ್ರೆಗೆ ಒಂದು ಕಿಡ್ನಿ, ಹುಬ್ಬಳ್ಳಿ ತತ್ವಾದರ್ಶ ಆಸ್ಪತ್ರೆಗೆ ಒಂದು ಕಿಡ್ನಿಯನ್ನ ಎರಡು ಪ್ರತ್ಯೇಕ ಆ್ಯಂಬುಲೆನ್ಸ್ ಮೂಲಕ ರವಾನಿಸಲಾಯಿತು. ಉಮೇಶ್ ಅವರ ಈ ಮಹಾತ್ಕಾರ್ಯಕ್ಕೆ ಎಲ್ಲ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಇವರಿಂದ ಅಂಗಾಂಗ ದಾನ ಪಡೆದ ರೋಗಿಯ ಕುಟುಂಬಸ್ಥರ ಮುಖದಲ್ಲಿ ಮಂದಹಾಸ ಮೂಡುವಂತಾಗಿದೆ.
ವರದಿ: ಸಹದೇವ ಮಾನೆ, ಟಿವಿ9 ಬೆಳಗಾವಿ
ಇದನ್ನೂ ಓದಿ: ಪರೀಕ್ಷೆ ತಯಾರಿ ನಡೆಸಲು ಓದುವ ವೇಳೆ ಈ ಟಿಪ್ಸ್ ಅಳವಡಿಸಿಕೊಳ್ಳಿ
5 ವರ್ಷಗಳ ಇ-ಟೂರಿಸ್ಟ್ ವೀಸಾಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಮರುಸ್ಥಾಪಿಸಿದ ಕೇಂದ್ರ ಸರ್ಕಾರ
Published On - 5:00 pm, Wed, 16 March 22