ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಚೇರಿಗಳ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಬಿಬಿಎಂಪಿಯಲ್ಲಿ ನೂರಾರು ಕೋಟಿಗೂ ಹೆಚ್ಚು ಅಕ್ರಮ ಪತ್ತೆ ಆಗಿದೆ. ಕಂದಾಯ ವಿಭಾಗದಲ್ಲೇ 500 ಕೋಟಿಗೂ ಹೆಚ್ಚು ಅಕ್ರಮ ಆಗಿರುವುದು ಪತ್ತೆ ಆಗಿದೆ. ಎಸಿಬಿ ಅಧಿಕಾರಿಗಳು ಇನ್ನೂ ದಾಳಿ ಮುಂದುವರಿಸಿದ್ದಾರೆ. ಮಾಲ್, MNC, ಅಪಾರ್ಟ್‌ಮೆಂಟ್‌ಗೆ ತೆರಿಗೆ ಹಾಕದೆ ವಂಚನೆ ಮಾಡಲಾಗಿದೆ. ಪಾಲಿಕೆ ಅಧಿಕಾರಿಗಳು ಅಕ್ರಮವಾಗಿ ಸ್ವಾಧೀನ ಪತ್ರ ನೀಡಿರುವ ಬಗ್ಗೆ ಮಾಹಿತಿ ಲಭಿಸಿದೆ.
ಒಂದೇ ಕಾಮಗಾರಿಗೆ ಎರಡೆರಡು ಬಿಲ್ ಮಂಜೂರಾತಿ ಮಾಡಲಾಗಿದೆ. ಕಾಮಗಾರಿ ನಡೆಸದಿದ್ದರೂ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲಾಗಿದೆ. ಹಲವು ಬಹುರಾಷ್ಟ್ರೀಯ ಕಂಪನಿಗಳಿಗೆ ಅಕ್ರಮವಾಗಿ ಟಿಡಿಆರ್ ನೀಡಲಾಗಿದೆ. ಈ ಬಗ್ಗೆ ದಾಖಲಾತಿ ವಶಪಡಿಸಿಕೊಂಡಿರುವ ಅಧಿಕಾರಿಗಳು, ನಾಳೆಯೂ ಎಸಿಬಿ ಅಧಿಕಾರಿಗಳ ದಾಳಿ ಮುಂದುವರಿಸಲಿದ್ದಾರೆ.
ಇತರ ಅಪರಾಧ ಸುದ್ದಿಗಳು
ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಬಿಳಿಜಾಜಿ ಗ್ರಾಮದ ಬಳಿ ರಾಜೀವ್ ಗಾಂಧಿ ವಸತಿ ಸಮುಚ್ಚಯ ಕಾಮಗಾರಿ ಜಾಗದಲ್ಲಿ ದರೋಡೆ ಕೃತ್ಯ ನಡೆದಿದೆ. ಭದ್ರತಾ ಸಿಬ್ಬಂದಿ, ಲಾರಿ ಚಾಲಕನನ್ನು ಹೆದರಿಸಿ 5 ಲಕ್ಷ ಬೆಲೆಬಾಳುವ ವಸ್ತುಗಳು 5 ಮೊಬೈಲ್, 8 ಸಾವಿರ ನಗದು ದರೋಡೆ ಮಾಡಲಾಗಿದೆ. 10 ರಿಂದ 15 ದುಷ್ಕರ್ಮಿಗಳು ದೊಣ್ಣೆ, ಚಾಕು, ರಾಡ್ ತೋರಿಸಿ ಬೆದರಿಸಿ ದರೋಡೆ ಮಾಡಿದ ಬಳಿಕ ರೂಂನಲ್ಲಿ ಕೂಡಿಹಾಕಿ ಎಸ್ಕೇಪ್ ಆಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಕಂಪನಿ ಮ್ಯಾನೇಜರ್ ಶಿವು ಅವರಿಂದ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಲಾಗಿದೆ.
ಬಳ್ಳಾರಿ: ನಗರದ ಹಂದ್ರಾಳ ಕಾಲೋನಿಯ ಡಿಸಿ ಕ್ಯಾಂಪ್‌ನ ಮನೆಯಲ್ಲಿ ಆಂಧ್ರ ಮೂಲದ ಸುನೀತಾ (24) ಅನುಮಾನಾಸ್ಪದ ಸಾವನ್ನಪ್ಪಿದ್ದಾರೆ. ಸುನೀತಾಗೆ ಪರಿಚಿತನಾಗಿದ್ದ ಮೂರ್ತಿ ಎನ್ನುವ ವ್ಯಕ್ತಿಯಿಂದ ಕೊಲೆ ಶಂಕೆ ವ್ಯಕ್ತವಾಗಿದೆ. ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಯಾದಗಿರಿ: ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟದಿಂದ ಐವರು ಸಾವನ್ನಪ್ಪಿದ ಘಟನೆ ನಡೆದಿತ್ತು. ಇದೀಗ, ಮೃತರ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ ತಲಾ ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತೆ ಎಂದುಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Crime Updates: ಚಾಕಲೇಟ್ ಬಾಕ್ಸ್ ಕದ್ದೊಯ್ದ ಕಳ್ಳ, ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿ ಮಕ್ಕಳು ಆತ್ಮಹತ್ಯೆ
ಇದನ್ನೂ ಓದಿ: Crime News: ನೀನು ಜಗತ್ತಿನ ಬೆಸ್ಟ್ ಅಮ್ಮ, ನನ್ನ ದೇವತೆ; ಸೂಸೈಡ್ ನೋಟ್ ಬರೆದಿಟ್ಟು 15ನೇ ಮಹಡಿಯಿಂದ ಹಾರಿದ ಬಾಲಕ