ಬೆಂಗಳೂರು: ಎರಡು ಬೈಕ್​​ಗಳ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ಸವಾರ ಸ್ಥಳದಲ್ಲೇ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 17, 2022 | 3:21 PM

ಅಪಘಾತಕ್ಕೆ ಅತೀ ವೇಗ ಕಾರಣ ಅನ್ನೋ ಆರೋಪ ಕೇಳಿಬಂದಿದೆ. ದ್ವಿಚಕ್ರ ವಾಹನ ಸವಾರ ಹೆಲ್ಮೆಟ್ ಧರಿಸದ ಕಾರಣ ಮೃತಪಟ್ಟಿದ್ದಾನೆ. ಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಎರಡು ಬೈಕ್​​ಗಳ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ಸವಾರ ಸ್ಥಳದಲ್ಲೇ ಸಾವು
ಎರಡು ಬೈಕ್​ಗಳ ಮಧ್ಯೆ ಅಪಘಾತ
Follow us on

ಬೆಂಗಳೂರು: ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ (Bike Accident) ಯಾಗಿ  ಓರ್ವ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜೆ.ಪಿ.ನಗರದ 3ನೇ ಹಂತದಲ್ಲಿ ಬೆಳಿಗ್ಗೆ 5:00 ಗಂಟೆಗೆ ನಡೆದಿದೆ. ಕಾರ್ತಿಕ್ ಮೃತ ವ್ಯಕ್ತಿ. ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದರೆ ಇನ್ನೋರ್ವ ತೀವ್ರವಾಗಿ ಗಾಯಗೊಂಡಿದ್ದ. ಅಪಘಾತಕ್ಕೆ ಅತೀ ವೇಗ ಕಾರಣ ಅನ್ನೋ ಆರೋಪ ಕೇಳಿಬಂದಿದೆ. ದ್ವಿಚಕ್ರ ವಾಹನ ಸವಾರ ಹೆಲ್ಮೆಟ್ ಧರಿಸದ ಕಾರಣ ಮೃತಪಟ್ಟಿದ್ದಾನೆ. ಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲೇ ಬೈಕ ಸವಾರ ಕಾರ್ತಿಕ್ ಮೃತ ಹಿನ್ನೆಲೆ, ಕಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದ್ದು, ದೇಹ ನೋಡಲು  ಕುಟುಂಬಸ್ಥರು ಆಗಮಿಸುತ್ತಿದ್ದಾರೆ. 20 ದಿನಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಕಾರ್ತಿಕ್ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಸ್ಲಿಪ್ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ತಾಳದೇ ಕಂದನ ಜೊತೆ ತಾಯಿ ಆತ್ಮಹತ್ಯೆ, ಪ್ರೀತಿಸಿ ವಿವಾಹವಾಗಿದ್ದ ಪತಿ ಅರೆಸ್ಟ್

ಬೆಳ್ಳಗ್ಗೆ ಡ್ಯುಟಿ ಮುಗಿಸಿ ಮನೆಗೆ ಹೋಗುವಾಗ ಈ ಘಟನೆ ನಡೆದಿದ್ದು, ಘಟನೆ ನಡೆದ ಸಂದರ್ಭದಲ್ಲಿ ಕಾರ್ತಿಕ್ ಹೇಲ್ಮೇಟ್ ಹಾಕಿರಲ್ಲ. ಹೀಗಾಗಿ ತಲೆಗೆ ದೊಡ್ಡಮಟ್ಟದಲ್ಲಿ ಪೆಟ್ಟಾಗಿದೆ. ಆ್ಯಕ್ಸಿಡೆಂಟ್​ ಆದ ನಂತರ ಮೊದಲು ನಿಮ್ಯಾನ್ಸ್ ಆಸ್ಪತ್ರೆ ಕರೆದುಕೊಂಡು ಹೋಗಲಾಗಿತ್ತು. ಇದೀಗಾ ಪೋಸ್ಟ್ ಮಾರ್ಟ್​ಗೆ ಕಿಮ್ಸ್ ಆಸ್ಪತ್ರೆಗೆ ಮೃತಹೇಹ ರವಾನೆ ಮಾಡಲಾಗಿದೆ. ಮೃತ ಕಾರ್ತಿಕ್ ಮೂಲತಃ ಆಂಧ್ರದವರಾಗಿದ್ದು, ಹೆಬ್ಬಾಳದಲ್ಲಿ ವಾಸಮಾಡುತ್ತಿದ್ರು. ಇದೀಗಾ ಘಟನೆ ಜಯನಗರ ಸಂಚಾರಿ ಪೋಲಿಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಇಂದು ಸಂಜೆ ವೇಳೆಗೆ ಕುಟುಂಬಸ್ಥರಿಗೆ ಮೃತ ದೇಹ ನೀಡುವ ಸಾಧ್ಯಾತೆಯಿದೆ.

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ರೈತರ ಸಾವು

ಬೆಳಗಾವಿ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ರೈತರು ಸಾವನ್ನಪ್ಪಿರುವ ಘಟನೆ ಸವದತ್ತಿ ತಾಲೂಕಿನ ಹಿರೂರು ಬಳಿ  ನಡೆದಿದೆ. ಫಕೀರಪ್ಪ ಚಂದರಗಿ(54), ಮಹದೇವ ಮೇತ್ರಿ(40) ಮೃತ ರೈತರು. ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ದಂಪತಿ ಬಂಧನ

ದಕ್ಷಿಣ ಕನ್ನಡ: ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ಕಾವೂರಿನ ದಂಪತಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು  ಬಂಧಿಸಿದ್ದಾರೆ. ವಿಖ್ಯಾತ್ ಅಲಿಯಾಸ್ ವಿಕ್ಕಿ ಬಪ್ಪಾಲ್ (28), ಪತ್ನಿ ಅಂಜನಾ (21) ಬಂಧಿತ ಆರೋಪಿಗಳು. ಆರೋಪಿಗಳಿಂದ 2 ಕೆಜಿ 200 ಗ್ರಾಂ ಗಾಂಜಾ, 1500 ನಗದು, 1 ಮೊಬೈಲ್​​ ಮತ್ತು ಡಿಜಿಟಲ್ ತೂಕ ಮಾಪನವನ್ನು ಪೊಲೀಸ್​​ರು​ ವಶಪಡಿಸಿಕೊಂಡಿದ್ದಾರೆ. ಮಂಗಳೂರಿನ ಸಿಇಎನ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 3:19 pm, Sun, 17 July 22