ಬೆಂಗಳೂರು, ಸೆ.25: ಬೆಂಗಳೂರಿನಲ್ಲಿ ರಸ್ತೆಯಲ್ಲೇ ಅವೈಜ್ಞಾನಿಕವಾಗಿ ಬಿಬಿಎಂಪಿ ಕಸದ ಲಾರಿ ಪಾರ್ಕಿಂಗ್ ಮಾಡಿದ್ದ ಕಾರಣ ವ್ಯಕ್ತಿಯೋರ್ವರು ಬಲಿಯಾಗಿದ್ದಾರೆ (Accident). ಜಯನಗರ ಮೆಟ್ರೋ ಸ್ಟೇಷನ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ರಾಮನಗರ ಜಿಲ್ಲೆ ಕಲ್ಲಿಗೌಡನದೊಡ್ಡಿ ನಿವಾಸಿ ಜಯಲಿಂಗ(26) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೈಕ್ ನಿಯಂತ್ರಣ ಸಿಗದೆ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದಿದ್ದು ಬೈಕ್ ಸಮೇತ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಸ್ತೆಯಲ್ಲೇ ಅವೈಜ್ಞಾನಿಕವಾಗಿ ಕಸದ ಲಾರಿ ಪಾರ್ಕಿಂಗ್ ಮಾಡಲಾಗಿತ್ತು. ಬನಶಂಕರಿಯಿಂದ ಸೌತ್ ಎಂಡ್ ಸರ್ಕಲ್ ಮೂಲಕ ಬರುತ್ತಿದ್ದ ಬೈಕ್ ಸವಾರ ಬೈಕ್ ನಿಯಂತ್ರಣ ಸಿಗದೆ ಲಾರಿ ಹಿಂಬದಿಗೆ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ಜಯನಗರ ಮೆಟ್ರೋ ಸ್ಟೇಷನ್ ರಸ್ತೆಯಲ್ಲಿ ರಾತ್ರಿ 12ಕ್ಕೆ ಘಟನೆ ನಡೆದಿದೆ. ಅವೈಜ್ಞಾನಿಕವಾಗಿ ಲಾರಿಪಾರ್ಕಿಂಗ್ ಮಾಡಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಪೊಲೀಸರು 3 ತಾಸು ಕಾರ್ಯಾಚರಣೆ ನಡೆಸಿ ಮೃತದೇಹ ಹೊರ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಜಯನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೃತ ಜಯಲಿಂಗ ಬನ್ನೇರುಘಟ್ಟ ರಸ್ತೆಯಲ್ಲಿರುವ ಪೈ ಶೋ ರೂಂನಲ್ಲಿ ಕೆಲಸ ಮಾಡ್ತಿದ್ದ. ಎರಡು ವರ್ಷದ ಹಿಂದೆ ಮದುವೆ ಆಗಿದ್ದು 7 ತಿಂಗಳ ಮಗು ಇದೆ. ಜೆ.ಪಿ.ನಗರ ಏಳನೇ ಹಂತದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪತ್ನಿ ಊರಿಗೆ ತೆರಳಿದ್ದು ಮನೆಯಲ್ಲಿ ಒಬ್ಬರೆ ವಾಸವಾಗಿದ್ದರು. ಜಯಲಿಂಗ ಸಾವು ಹಿನ್ನೆಲೆ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ‘3 ಇಡಿಯಟ್ಸ್’, ‘ದಿಲ್ ಚಾಹ್ತಾ ಹೈ’ ನಟ ಅಪಘಾತದಲ್ಲಿ ಸಾವು
ಎಲೆಕ್ಟ್ರಾನಿಕ್ ಸಿಟಿ ಬಳಿ ಹೃದಯಕ್ಕಾಗಿ ಓಟ
ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಆರೋಗ್ಯಕರವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಜಾಗೃತಿ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಸೆಪ್ಟೆಂಬರ್ 29ರ ವಿಶ್ವ ಹೃದಯ ದಿನದ ಅಂಗವಾಗಿ ಕಾವೇರಿ ಆಸ್ಪತ್ರೆ ವತಿಯಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ವಿಪ್ರೋ ಗೇಟ್ ನಲ್ಲಿ ಹೃದಯಕ್ಕಾಗಿ ಓಟ ಎಂಬ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಪಿಟ್ ಇಂಡಿಯಾ ರಾಯಬಾರಿ ಶ್ವೇತ ಮೌರ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇತ್ತೀಚೆಗೆ ಯುವಕರಲ್ಲಿ ಹೃದಯ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿರಲು ಮತ್ತು ಫಿಟ್ ಅಂಡ್ ಫೈನ್ ಆಗಿರಬೇಕು ಎನ್ನುವ ನಿಟ್ಟಿನಲ್ಲಿ ವ್ಯಾಯಾಮ, ಸೈಕ್ಲಿಂಗ್, ಮ್ಯಾರಥಾನ್ ಓಟವನ್ನ ಕಾವೇರಿ ಆಸ್ಪತ್ರೆ ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಜೊತೆಗೆ ದಿನನಿತ್ಯದ ಜೀವನ ಶೈಲಿಯಲ್ಲಿ ಆಹಾರದ ಇನ್ನೂ 5ಕೆ ಮ್ಯಾರಥಾನ್, ವಾಕಥಾನ್ ಹಾಗೂ ಸೈಕ್ಲಿಂಗ್ ನಲ್ಲಿ 2500 ಜನ ವಿವಿಧ ಸಾಫ್ಟ್ವೇರ್ ಕಂಪನಿಯ ಉದ್ಯೋಗಿಗಳು, ಕಾಲೇಜಿ ವಿದ್ಯಾರ್ಥಿಗಳು, ಎಲೆಕ್ಟ್ರಾನಿಕ್ ಸಿಟಿ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲದೆ ಜುಂಬಾ ಡ್ಯಾನ್ಸ್ ಮಾಡಿ ಐಟಿ ಮಂದಿ ಕುಣಿದು ಕುಪ್ಪಳಿಸಿದರು. ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಅತ್ಯವಶ್ಯಕ ಎಂದು ಪಿಟ್ ಇಂಡಿಯಾ ರಾಯಬಾರಿ ಶ್ವೇತಾಮೌರ್ಯ ತಿಳಿಸಿದರು.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:51 am, Mon, 25 September 23