ಆರಾಮದಾಯಕ ಚಾಲನೆಗೆ ತನ್ನ ಸೀಟಿಗೆ ರಿವಾಲ್ವಿಂಗ್ ಕುರ್ಚಿ ಅಳವಡಿಸಿಕೊಂಡ ಚಾಲಕ; ಫೋಟೋ ವೈರಲ್
ಅತಿಯಾದ ಟ್ರಾಫಿಕ್ ಮಧ್ಯೆ ಗಂಟೆಗಟ್ಟಲೆ ಕೂತು ಕೂತು ಡ್ರೈವರ್ಗಳಿಗೆ ಸಾಕಾಗಿ ಹೋಗುತ್ತದೆ. ರಿವಾಲ್ವಿಂಗ್ ಕುರ್ಚಿ ಅಳವಡಿಸಿಕೊಂಡಿದ್ದರಿಂದ ಆರಮದಾಯಕವಾಗಿ ಕೂತು ರಾಜಧಾನಿಯ ಟ್ರಾಫಿಕ್ ಮಧ್ಯೆಯೂ ಸರಾಗವಾಗಿ ಆಟೋ ಓಡಿಸಲು ಅನುಕೂಲವಾಗುತ್ತದೆ ಎಂಬುವುದು ನೆಟ್ಟಿಗರ ಅಭಿಪ್ರಾಯವಾಗಿದೆ.
ಬೆಂಗಳೂರು ಸೆ.25: ಕಚೇರಿ ಮತ್ತು ಗೇಮಿಂಗ್ ಸೆಂಟರ್ಗಳಲ್ಲಿನ ಕುರ್ಚಿಗಳು (Chair) ಆಕರ್ಷಕವಾಗಿರುತ್ತವೆ. ಇಲ್ಲಿ ವಿಭಿನ್ನ ರೀತಿಯ ಕುರ್ಚಿಗಳನ್ನು ಕಾಣಬಹುದು. ಆದರೆ ಇಂತಹ ಚೇರ್ ಆಟೋ ಡ್ರೈವರ್ ಸೀಟ್ ಆಗಿದ್ದರೇ ಹೇಗಿರುತ್ತೆ? ಒಂದು ಬಾರಿ ಊಹಿಸಿಕೊಂಡು ನೋಡಿ. ಹೌದು ಬೆಂಗಳೂರಿನ (Bengaluru) ಓರ್ವ ಆಟೋ (Auto) ಡ್ರೈವರ್ ತಾನು ಕೂರುವ ಸೀಟ್ಗೆ ರಿವಾಲ್ವಿಂಗ್ ಕುರ್ಚಿ ಅಳವಡಿಸಿಕೊಂಡಿದ್ದಾರೆ. ರಿವಾಲ್ವಿಂಗ್ ಕುರ್ಚಿಗಳು ಸ್ವಲ್ಪ ಎತ್ತರವಾಗಿರುತ್ತವೆ. ಆಸರೆ ಭಾಗ ಸ್ವಲ್ಪ ಉದ್ದವಾಗಿರುತ್ತವೆ.
ಅತಿಯಾದ ಟ್ರಾಫಿಕ್ ಮಧ್ಯೆ ಗಂಟೆಗಟ್ಟಲೆ ಕೂತು ಕೂತು ಡ್ರೈವರ್ಗಳಿಗೆ ಸಾಕಾಗಿ ಹೋಗುತ್ತದೆ. ಈ ಕುರ್ಚಿ ಅಳವಡಿಸಿಕೊಂಡಿದ್ದರಿಂದ ಆರಮದಾಯಕವಾಗಿ ಕೂತು ರಾಜಧಾನಿಯ ಟ್ರಾಫಿಕ್ ಮಧ್ಯೆಯೂ ಸರಾಗವಾಗಿ ಆಟೋ ಓಡಿಸಲು ಅನುಕೂಲವಾಗುತ್ತದೆ ಎಂಬುವುದು ನೆಟ್ಟಿಗರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಮುಂಬೈ ಲೋಕಲ್ ರೈಲಿನಲ್ಲಿ ಬೆಡಗಿಯ ಬೆಲ್ಲಿ ಡ್ಯಾನ್ಸ್; ನೆಟ್ಟಿಗರ ಆಕ್ರೋಶ
ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ಸಾಕಷ್ಟು ಲೈಕ್ ಮತ್ತು ಕಾಮೆಂಟ್ ಬಂದಿವೆ. ಅನುಜ್ ಬನ್ಸಾಲ್ ಎಂಬ ಎಕ್ಸ್ (ಹಿಂದಿನ ಟ್ವಿಟರ್) ಬಳಕೆದಾರರು ಈ ಫೋಟೋ ಅನ್ನು ಟ್ವೀಟ್ ಮಾಡಿ “ಟೆಕ್ಬ್ರೋಸ್ ಏಕೆ ಎಲ್ಲಾ ವಿನೋದವನ್ನು ಹೊಂದಿರಬೇಕು?” ಎಂದು ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ಹಲವರು ಕಾಮೆಂಟ್ ಮಾಡಿ “ಅವರು ಬಹುಶಃ ಟೆಕ್ಕಿ ಆಗಿದ್ದರು ಅನಿಸುತ್ತೆ. ಕೆಲವು ಜನರು ಅವರು ಗೇಮರ್ ಆಗಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.
Why should techbros have all the fun? 😏 pic.twitter.com/A5hnd0sDC8
— Anuj Bansal (@anuj63) September 22, 2023
ಅಭಿನಯ್ ಓಂಕಾರ್ ಎಂಬ ವ್ಯಕ್ತಿ, ಗೇಮಿಂಗ್ ಚೇರ್! ಅವರು ಗೇಮರ್ ಆಗಿರಬೇಕು. ಇನ್ನೊಬ್ಬ ವ್ಯಕ್ತಿ ಅವರು ಸ್ಟಾಕ್ ಟ್ರೇಡರ್ ಆಗಿರಬಹುದು ಎಂದು ಹೇಳಿದರು. ಬಹುಶಃ ಅವರು ಟೆಕ್ಬ್ರೋ ಕೂಡ ಆಗಿರಬಹುದು ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ