ವಿರೋಧದ ನಡುವೆಯೂ ಕೆಆರ್​ಎಸ್​ ಡ್ಯಾಂನಿಂದ ಹೊರಹರಿವು ಹೆಚ್ಚಳ: ಜಲಾಶಯದ ನೀರಿನ ಮಟ್ಟ ಇಲ್ಲಿದೆ

Cauvery Water Dispute: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ 3,838 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ನಾಲೆಗಳಿಗೆ 3,036 ಕ್ಯೂಸೆಕ್ ನೀರು ಬಿಡಲಾಗಿದೆ. ಸೆಪ್ಟೆಂಬರ್ 27 ರವರೆಗೆ ಪ್ರತಿದಿನ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ ಸಿಡಬ್ಲೂಎಮ್​ಎ ಸೂಚಿಸಿದೆ.

ವಿರೋಧದ ನಡುವೆಯೂ ಕೆಆರ್​ಎಸ್​ ಡ್ಯಾಂನಿಂದ ಹೊರಹರಿವು ಹೆಚ್ಚಳ: ಜಲಾಶಯದ ನೀರಿನ ಮಟ್ಟ ಇಲ್ಲಿದೆ
ಕೆಆರ್​ಎಸ್​ ಡ್ಯಾಂ
Follow us
TV9 Web
| Updated By: ವಿವೇಕ ಬಿರಾದಾರ

Updated on:Sep 25, 2023 | 10:17 AM

ಬೆಂಗಳೂರು ಸೆ.25: ತಮಿಳುನಾಡಿಗೆ (Tamil Nadu) ಕಾವೇರಿ ನೀರು (Cauvery Water Dispute) ಬಿಡುವುದನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವ ನಡುವೆಯೇ ಕೆಆರ್‌ಎಸ್‌ (KRS) ಆಣೆಕಟ್ಟೆಯಿಂದ ಹೊರಹರಿವು ಹೆಚ್ಚಳವಾಗಿದೆ. ಶನಿವಾರ ಮತ್ತು ಭಾನುವಾರ ಹೆಚ್ಚುವರಿಯಾಗಿ 800-1,000 ಕ್ಯೂಸೆಕ್ ನೀರು ಬಿಡಲಾಗಿದೆ. ಭಾನುವಾರ 6,874 ಕ್ಯೂಸೆಕ್ ನೀರು ಬಿಡಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ನಿರ್ದೇಶನದಂತೆ 3,838 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ನಾಲೆಗಳಿಗೆ 3,036 ಕ್ಯೂಸೆಕ್ ನೀರು ಬಿಡಲಾಗಿದೆ. ಸೆಪ್ಟೆಂಬರ್ 27 ರವರೆಗೆ ಪ್ರತಿದಿನ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ CWMA ಸೂಚಿಸಿದೆ. ಹಾಗಿದ್ದರೇ ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಇಂದಿನ ನೀರಿನ ಮಟ್ಟ ಎಷ್ಟಿದೆ ಇಲ್ಲಿದೆ ವಿವರ

  • ಕೆಆರ್​ಎಸ್ ಜಲಾಶಯ

ಜಲಾಶಯದ ಗರಿಷ್ಠಮಟ್ಟ – 124.80 ಅಡಿ, ಇಂದಿನ ಮಟ್ಟ – 96.70 ಅಡಿ, ಒಳಹರಿವು – 5993 ಸಾವಿರ ಕ್ಯೂಸೆಕ್, ಒಟ್ಟ ಹೊರಹರಿವು – 6716 ಸಾವಿರ ಕ್ಯೂಸೆಕ್, ನದಿಗೆ – 4105 ಕ್ಯೂಸೆಕ್

  • ಹೇಮಾವತಿ ಜಲಾಶಯ

ಹೇಮಾವತಿ ಜಲಾಶಯದಿಂದಲೂ ಕೆ.ಆರ್.ಎಸ್​ನತ್ತ ನೀರು ಹರಿಯುತ್ತಿದೆ. ಅಧಿಕಾರಿಗಳು ಕಳೆದ ಒಂದೂವರೆ ತಿಂಗಳಿನಿಂದ ನಿತ್ಯ 1300 ಕ್ಯುಸೆಕ್ ನೀರು ಹರಿಸುತ್ತಿದ್ದಾರೆ.

ಇಂದಿನ‌ ನೀರಿನ ಮಟ್ಟ – 2896.90 ಅಡಿ, ಗರಿಷ್ಠ ನೀರಿನ ಮಟ್ಟ – 2922 ಅಡಿ, ಒಟ್ಟು ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ, ಇಂದಿನ ಸಂಗ್ರಹ ಸಾಮರ್ಥ್ಯ – 17.904 ಟಿಎಂಸಿ, ಬಳಕೆಗೆ ಲಭ್ಯವಿರುವ ನೀರು‌ – 13.565 ಟಿಎಂಸಿ, ಒಳಹರಿವು – 2704 ಸಾವಿರ ಕ್ಯೂಸೆಕ್, ಹೊರಹರಿವು – 1300 ಸಾವಿರ ಕ್ಯೂಸೆಕ್

ಇದನ್ನೂ ಓದಿ: ಕಾವೇರಿ ನದಿ ನೀರು ವಿಚಾರದಲ್ಲಿ ಸರ್ಕಾರ ಆರಂಭದಲ್ಲೇ ಎಡವಿದೆ: ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ

  • ಹಾರಂಗಿ ಜಲಾಶಯ

ಗರಿಷ್ಟ ಸಾಮರ್ಥ್ಯ – 2859, ಇಂದಿನ ಸಾಮರ್ಥ್ಯ – 2855.94, ಒಳಹರಿವು – 992 ಅಡಿ, ಹೊರ ಹರಿವು -1600 ಕ್ಯೂಸೆಕ್​ ನಾಲೆಗೆ- 1200 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

  • ಕಬಿನಿ ಜಲಾಶಯ

ಗರಿಷ್ಠ ಸಾಮರ್ಥ್ಯ – 84 ಅಡಿ, ಇಂದಿನ‌ ‌ನೀರಿನ ಮಟ್ಟ – 74.24 ಅಡಿ, ಇಂದಿನ‌ ಒಳಹರಿವು – 2,126 ಕ್ಯೂಸೆಕ್‌‌

ತಮಿಳುನಾಡಿಗೆ ಕೆಆರ್​ಎಸ್​ ಡ್ಯಾಂನಿಂದ ನೀರು ಬಿಡುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಬೆಂಗಳೂರು ಬಂದ್​​​ಗೆ ಕರೆ ನೀಡಿವೆ. ಇದಕ್ಕೆ ಸಾರಿಗೆ ಇಲಾಖೆ ನೌಕರರು, ಹೊಟೇಲ್​ ಮಾಲಿಕರು, ಓಲಾ, ಊಬರ್​​ ಸೇರಿಂದ ಎಲ್ಲ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:14 am, Mon, 25 September 23

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ