ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಸೆ.26 ರಂದು ಟಿ.ನರಸೀಪುರ ಬಂದ್‌ಗೆ ಕರೆ

ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿ ಸೆ.26 ರಂದು ಬೆಂಗಳೂರು ಬಂದ್​ಗೆ ಕರೆ ನೀಡಲಾಗಿದೆ. ಅಲ್ಲದೆ, ಅಖಂಡ ಕರ್ನಾಟಕ ಬಂದ್​ಗೂ ತೀರ್ಮಾನಿಸಲಾಗಿದೆ. ಈ ನಡುವೆ ಮೈಸೂರು ಜಿಲ್ಲೆಯ ಟಿ ನರಸಿಪುರ ತಾಲೂಕು ಬಂದ್​ಗೆ ಕರೆ ನೀಡಲಾಗಿದೆ. ಕಾವೇರಿ ಕಬಿನಿ ಹಿತರಕ್ಷಣಾ ಸಮಿತಿಯಿಂದ ಬಂದ್​ಗೆ ಕರೆ ನೀಡಲಾಗಿದೆ.

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಸೆ.26 ರಂದು ಟಿ.ನರಸೀಪುರ ಬಂದ್‌ಗೆ ಕರೆ
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಟಿ.ನರಸೀಪುರ ಬಂದ್‌ಗೆ ಕರೆ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Rakesh Nayak Manchi

Updated on:Sep 24, 2023 | 7:46 PM

ಮೈಸೂರು, ಸೆ.24: ತಮಿಳುನಾಡಿಗೆ ಕಾವೇರಿ ನೀರು (Cauvery Water) ಹರಿಸದಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿ ಸೆ.26 ರಂದು ಬೆಂಗಳೂರು ಬಂದ್​ಗೆ (Bangalore Bandh) ಕರೆ ನೀಡಲಾಗಿದೆ. ಅಲ್ಲದೆ, ಅಖಂಡ ಕರ್ನಾಟಕ ಬಂದ್​ಗೂ ತೀರ್ಮಾನಿಸಲಾಗಿದೆ. ಈ ನಡುವೆ ಮೈಸೂರು ಜಿಲ್ಲೆಯ ಟಿ ನರಸಿಪುರ ತಾಲೂಕು ಬಂದ್​ಗೆ (T.Narasipura Bandh) ಕರೆ ನೀಡಲಾಗಿದೆ. ಕಾವೇರಿ ಕಬಿನಿ ಹಿತರಕ್ಷಣಾ ಸಮಿತಿಯಿಂದ ಬಂದ್​ಗೆ ಕರೆ ನೀಡಲಾಗಿದೆ.

ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಖಂಡಿಸಿ ಕಾವೇರಿ ಕಬಿನಿ ಹಿತರಕ್ಷಣಾ ಸಮಿತಿಯು ಸೆಪ್ಟೆಂಬರ್‌ 26 ರಂದು ಟಿ.ನರಸೀಪುರ ಬಂದ್‌ಗೆ ಕರೆ ನೀಡಿದೆ. ಟಿ.ನರಸೀಪುರದ ಐಬಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಸೋಮವಾರ ಅಖಂಡ ಕರ್ನಾಟಕ ಬಂದ್ ದಿನಾಂಕ ಘೋಷಣೆ ಮಾಡುತ್ತೇವೆ: ವಾಟಾಳ್ ನಾಗರಾಜ್

ಕಾವೇರಿ ಕಬಿನಿ ಹಿತರಕ್ಷಣಾ ಸಮಿತಿ, ರೈತ ಸಂಘ, ಕಬ್ಬು ಬೆಳೆಗಾರರ ಸಂಘ, ಕನ್ನಡಪರ ಸಂಘಟನೆ ಸೇರಿದಂತೆ 20 ಕ್ಕೂ ಹೆಚ್ಚು ಸಂಘಟನೆಗಳು ಈ ಸಭೆಯಲ್ಲಿ ಭಾಗಿಯಾಗಿದ್ದವು. ಅಲ್ಲದೆ, ಟಿ.ನರಸೀಪುರ ಬಂದ್‌ಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು, ವರ್ತಕರು ಸಹಕಾರ ನೀಡುವಂತೆ ರೈತರು ಮನವಿ ಮಾಡಿದರು.

ಕಾವೇರಿ ನೀರಿಗಾಗಿ ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸಲು ವಿವಿಧ ಸಂಘಟನೆಗಳು ತೀರ್ಮಾನಿಸಿದ್ದು, ಸೆಪ್ಟೆಂಬರ್ 26 ರಂದು ಬೆಂಗಳೂರು ಬಂದ್​ಗೆ ಕರೆ ನೀಡಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ನಡೆದ ಸಭೆಯಲ್ಲಿ ಕಾವೇರಿ ನೀರಿಗಾಗಿ ಬೆಂಗಳೂರು ಬಂದ್‌ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:43 pm, Sun, 24 September 23