ಬೆಂಗಳೂರಲ್ಲಿ ಲಾಂಗ್ ತೋರಿಸಿ ಹಣ ವಸೂಲಿ; ಆರೋಪಿಗಳು ಎಸ್ಕೇಪ್

ನವೆಂಬರ್ 18ರ ಬೆಳ್ಳಂಬೆಳಗ್ಗೆ ಹಣ ವಸೂಲಿಗಿಳಿದು ಓರ್ವ ಪೊಲೀಸ್ ತಗಲಾಕ್ಕೊಂಡಿದ್ದರು. ಅಂಗಡಿ ಮಾಲೀಕರಿಂದ ಪೊಲೀಸರು ಹಣ ವಸೂಲಿ ಮಾಡಿದ್ದರು. ಆದರೆ ಯುವಕನೊಬ್ಬ ಹೊಯ್ಸಳ ಸಿಬ್ಬಂದಿಯಿಂದ ಹಣವನ್ನು ವಾಪಾಸ್ ಕೊಡಿಸುತ್ತಾನೆ.

ಬೆಂಗಳೂರಲ್ಲಿ ಲಾಂಗ್ ತೋರಿಸಿ ಹಣ ವಸೂಲಿ; ಆರೋಪಿಗಳು ಎಸ್ಕೇಪ್
ಹಣ ವಸೂಲಿ ಮಾಡಲು ಲಾಂಗ್ ಹಿಡಿದಿರುವ ಆರೋಪಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲಾಂಗ್ ತೋರಿಸಿ ಪುಂಡರು ಹಣ ವಸೂಲಿ ಮಾಡಿರುವ ಘಟನೆ ನಡೆದಿದೆ. ವಸಂತನಗರದ 8ನೇ ಕ್ರಾಸ್​ನಲ್ಲಿ ನಿನ್ನೆ ಸಂಜೆ 5.30ಕ್ಕೆ ಈ ಘಟನೆ ನಡೆದಿದ್ದು, ಬೈಕ್​ನಲ್ಲಿ ಬಂದ ಆರೋಪಿಗಳು ಬೆದರಿಸಿ 25 ಸಾವಿರ ಕಿತ್ತು ಪರಾರಿಯಾಗಿದ್ದಾರೆ. ಅಂಗಡಿ ಮಾಲೀಕನಿಗೆ ಬೆದರಿಸಿ ಹಣ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಲಾಂಗ್ ತೋರಿಸಿ ಬೆದರಿಸುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಸೂಲಿಗಿಳಿದು ತಗಲಾಕ್ಕೊಂಡ ಹೊಯ್ಸಳ ಸಿಬ್ಬಂದಿ ನವೆಂಬರ್ 18ರ ಬೆಳ್ಳಂಬೆಳಗ್ಗೆ ಹಣ ವಸೂಲಿಗಿಳಿದು ಓರ್ವ ಪೊಲೀಸ್ ತಗಲಾಕ್ಕೊಂಡಿದ್ದರು. ಅಂಗಡಿ ಮಾಲೀಕರಿಂದ ಪೊಲೀಸರು ಹಣ ವಸೂಲಿ ಮಾಡಿದ್ದರು. ಆದರೆ ಯುವಕನೊಬ್ಬ ಹೊಯ್ಸಳ ಸಿಬ್ಬಂದಿಯಿಂದ ಹಣವನ್ನು ವಾಪಾಸ್ ಕೊಡಿಸುತ್ತಾನೆ. ಅಂಗಡಿ ಮಾಲೀಕರಿಂದ ಪೊಲೀಸ್ ಹಣ ಪಡೆಯುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬೆಂಗಳೂರಿನ ಮಾರತ್ತಹಳ್ಳಿ ಫ್ಲೈಓವರ್ ಬಳಿ ಈ ಘಟನೆ ನಡೆದಿತ್ತು.

ಅಂಗಡಿ ಮಾಲೀಕರಿಂದ ಪೊಲೀಸ್ ಹಣ ವಸೂಲಿ ಮಾಡಿದ ಸ್ಥಳದಲ್ಲೇ ಯುವಕ ಪಡೆದ ಹಣವನ್ನ ವಾಪಾಸ್ ಕೊಡಿಸಿದ್ದಾನೆ. ಮಹಿಳೆ ಹೊಯ್ಸಳ ಸಿಬ್ಬಂದಿಗೆ ಹಣ ನೀಡಿದ್ದಾರೆ. ಹಣ ನೀಡಿ ವಾಪಾಸ್ ಹೋಗುತ್ತಿದ್ದಂತೆ ಪೊಲೀಸ್ ಬಳಿ ಯುವಕ ಹೋಗಿ ಸರ್ ಸರ್ ಎಂದು ಕರೆದು ಏನ್ ತೆಗೆದುಕೊಂಡಿದ್ದೀರಿ ಅಂತ ಕೇಳಿದ್ದಾನೆ. ನಂತರ ತೆಗೆದುಕೊಂಡ ಹಣ ವಾಪಾಸ್ ಕೊಡಿ ಅಂತ ಯುವಕ ಕೇಳಿದ್ದಾನೆ. ಯುವಕ ಹೇಳುತ್ತಿದ್ದಂತೆ ವಸೂಲಿ ಮಾಡಿದ್ದ ಹಣವನ್ನು ಪೊಲೀಸ್ ಮಹಿಳೆಗೆ ವಾಪಾಸ್ ನೀಡಿ ಹೊರಟು ಹೋಗಿದ್ದಾರೆ.

ಕಂಪನಿಗೆ ವಂಚಿಸುತ್ತಿದ್ದ ಆರೋಪಿ ಅರೆಸ್ಟ್ ಇನ್ಶೂರೆನ್ಸ್, ರಿಯಲ್ ಎಸ್ಟೇಟ್ ಫೈನಾನ್ಸ್ ಕಂಪನಿಗೆ ಗ್ರಾಹಕರ ಲೀಡ್ಸ್ ನೀಡುವುದಾಗಿ ವಂಚಿಸುತ್ತಿದ್ದವನು ಅರೆಸ್ಟ್ ಆಗಿದ್ದಾನೆ. ಸಿಸಿಬಿ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ನಿಶ್ಚಿತ್ ಸಿಎಸ್​​ ಬಂಧಿತ ಆರೋಪಿ. ಈತ ಇನ್ಶೂರೆನ್ಸ್, ಫೈನಾನ್ಸ್ ಕಂಪನಿಗಳನ್ನ ಸಂಪರ್ಕಿಸುತ್ತಿದ್ದ. ಇ-ಮೇಲ್​ ಮೂಲಕ ಕಂಪನಿಗಳನ್ನ ಸಂಪರ್ಕಿಸುತ್ತಿದ್ದ. ಇನ್ಫೋಸಿಸ್ ಕಂಪನಿ ಹೆಚ್​​ಆರ್ ಹೆಸರಿನಲ್ಲಿ ​ ಗ್ರಾಹಕರ ಲೀಡ್ಸ್ ಕೊಡುವುದಾಗಿ ಆಫರ್ ನೀಡುತ್ತಿದ್ದ. ಬಳಿಕ ಹಂತ ಹಂತವಾಗಿ ಹಣ ಪಡೆದು ವಂಚಿಸುತ್ತಿದ್ದ. ಆರೋಪಿಯ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ

ಮಹಿಳಾ ಸಂಸದರೊಂದಿಗೆ ಸೆಲ್ಫಿ; ಲೋಕಸಭೆ ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಹೇಳಿದವರಾರು ಎಂದ ಶಶಿ ತರೂರ್ ಟ್ವೀಟ್‌ಗೆ ಆಕ್ಷೇಪ

‘ಕೌನ್​ ಬನೇಗಾ ಕರೋಡ್​ಪತಿ’ 1000ನೇ ಎಪಿಸೋಡ್​; ಮಗಳ ಎದುರು ಕಣ್ಣೀರು ಹಾಕಿದ ಅಮಿತಾಭ್​ ಬಚ್ಚನ್​

Published On - 5:20 pm, Mon, 29 November 21

Click on your DTH Provider to Add TV9 Kannada